ETV Bharat / state

'ವಶಪಡಿಸಿಕೊಂಡ ವಾಹನವನ್ನು ಠಾಣೆ ಮುಂದೆ ನಿಲ್ಲಿಸುವುದರಿಂದ ಪ್ರಯೋಜನವಿಲ್ಲ, ಬಾಂಡ್ ಪಡೆದು ಬಿಡುಗಡೆಗೆ ಸೂಚನೆ' - ವಾಹನ ಬಿಡುಗಡೆಗೆ ಹೈಕೋರ್ಟ್ ಸೂಚನೆ

ವಾಹನಗಳನ್ನು ಪೊಲೀಸ್​ ಠಾಣೆಗಳ ಮುಂದೆ ನಿಲ್ಲಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ, ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Nov 10, 2022, 10:10 PM IST

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬಳಕೆಯಾದ ವಾಹನಗಳನ್ನು ಪೊಲೀಸ್​ ಠಾಣೆಗಳ ಮುಂದೆ ನಿಲ್ಲಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಮಾಲೀಕರಿಗೆ ವಾಹನ ಹಸ್ತಾಂತರಿಸಬೇಕು ಎಂದು ಸೂಚಿಸಿದೆ.

ಜವ್ವಾಜಿ ಧಾನ ತೇಜಾ ಅವರ ಹೋಂಡಾ ಸಿಟಿ ಕಾರು, ಜಯಲಕ್ಷ್ಮೀ ಎಂಬುವರ ಹೋಂಡಾ ಡಿಯೋ ಬೈಕ್​ ಮತ್ತು ನಂದಿನಿ ಎಸ್​. ಪ್ರಕಾಶ್​ ಎಂಬುವರ ಬಜಾಜ್​ ಆಟೋ ರಿಕ್ಷಾಗಳನ್ನು ಕೊಲೆ ಯತ್ನ ಪ್ರಕರಣವೊಂದರ ಸಂಬಂಧ ರಾಜಾರಾಜೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಮೂರು ಮಂದಿ ಸೆಷನ್ಸ್​ ನ್ಯಾಯಾಲಯಕ್ಕೆ ಮನವಿ ಮಾಡಿ ತಮ್ಮ ವಾಹನಗಳನ್ನು ಪೊಲೀಸ್​ ವಶದಿಂದ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಆದರೆ, ಸೆಷನ್ಸ್​ ನ್ಯಾಯಾಲಯದ ನ್ಯಾಯಾಧೀಶರು ಮನವಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್​ ಅವರಿದ್ದ ನ್ಯಾಯಪೀಠ, ವಾಹನಗಳನ್ನು ಮಾತ್ರ ಅಪರಾಧ ಪ್ರಕರಣಗಳಲ್ಲಿ ಬಳಕೆ ಮಾಡಲಾಗಿದೆ. ಆದರೆ, ವಾಹನಗಳ ಮಾಲೀಕರು ಅಪರಾಧಿಗಳಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಾಹನಗಳ ಬಿಡುಗಡೆ ಮಾಡಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಿಲ್ಲ ಎಂದು ತಿಳಿಸಿದೆ.

ಅಲ್ಲದೆ, ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ (ಸುಂದೆರ್ಬಟ್ ಅಂಬಲಾಲ್​ ಮತ್ತು ಗುಜರಾತ್​ ರಾಜ್ಯ ಸರ್ಕಾರ) ಪ್ರಕರಣವನ್ನು ಉಲ್ಲೇಖಿಸಿರುವ ನ್ಯಾಯಪೀಠ, ವಿನಾಕಾರಣ ಪೊಲೀಸ್​ ಠಾಣೆಗಳ ಮುಂದೆ ವಾಹನಗಳನ್ನು ನಿಲ್ಲಿಸುವುದಕ್ಕೆ ಅವಕಾಶ ನೀಡಬಾರು. ಮ್ಯಾಜಿಸ್ಟ್ರೇಟ್​ ನ್ಯಾಯಾಲಯಗಳು ವಾಹನದ ಮಾಲೀಕರಿಗೆ ಕೆಲವು ಷರತ್ತುಗನ್ನು ವಿಧಿಸಿ ಹಿಂದಿರುಗಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಹಲವು ವರ್ಷಗಳ ಕಾಲ ವಾಹನ ನಿಲ್ಲಿಸಿದಲ್ಲಿ ಅದು ಹಂತ ಹಂತವಾಗಿ ಹಾಳಾಗಲಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ಗುರುತಿಸಲು ನ್ಯಾಯಾಲಯಕ್ಕೆ ತರುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ. ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳಂತೆ ತನಿಖಾಧಿಕಾರಿಗಳು ವಾಹನ ಬಿಡುಗಡೆಗೂ ಮುನ್ನ ಪಂಚರ ಸಮಕ್ಷಮದಲ್ಲಿ ವಿವಿಧ ಕೋನಗಳಲ್ಲಿ ವಾಹನದ ಛಾಯಾಚಿತ್ರ ತೆಗೆದುಕೊಳ್ಳಬೇಕು. ಈ ಛಾಯಾಚಿತ್ರಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಹೋಂಡಾ ಸಿಟಿ ಕಾರಿಗೆ 3 ಲಕ್ಷ ರೂ.ಗಳ ಬಾಂಡ್​, ಹೋಂಡಾ ಡಿಯೋ ಬೈಕ್​ಗೆ 30 ಸಾವಿರ, ಆಟೋ ರಿಕ್ಷಾಗೆ 75 ಸಾವಿರ ರೂ.ಗಳ ಬಾಂಡ್​ ಪಡೆದು ಬಿಡುಗಡೆ ಮಾಡಬಹುದು ಎಂದು ನ್ಯಾಯಪೀಠ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.

(ಓದಿ: ಪ್ರಕರಣ ಪತ್ತೆ ಹಚ್ಚಬೇಕಾದ ಪೊಲೀಸರೇ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ: ಹೈಕೋರ್ಟ್ ಅಸಮಾಧಾನ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.