ETV Bharat / state

ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ : ಕೇಂದ್ರದ ನೀತಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಕೇಂದ್ರದ ಈ ಕ್ರಮ ಕಾನೂನುಬಾಹಿರ ಹಾಗೂ ವಿಮಾಣ ನಿಲ್ದಾಣ ಪ್ರಾಧಿಕಾರ ಕಾಯ್ದೆಯ ಉಲ್ಲಂಘನೆ ಎಂದು ಆರೋಪಿಸಿರುವ ಅರ್ಜಿದಾರರು, ನಿಮಯಗಳ ಪ್ರಕಾರ ಗುತ್ತಿಗೆಗೆ ಹೊರತುಪಡಿಸಿ ಯಾವುದೇ ರೀತಿಯಲ್ಲೂ ವಿಮಾನ ನಿಲ್ದಾಣದ ಆಸ್ತಿ ವರ್ಗಾವಣೆ ಮಾಡುವಂತಿಲ್ಲ.

high court
high court
author img

By

Published : Jun 8, 2021, 10:58 PM IST

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಅದಾನಿ ಎಂಟರ್‌ ಪ್ರೈಸಸ್ ಲಿಮಿಟೆಡ್​ಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರದ ಹೊಂದಿರುವ ನೀತಿ ಏನು ಎಂಬುದನ್ನು ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರಿಸುವ ಕ್ರಮ ಪ್ರಶ್ನಿಸಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಉದ್ಯೋಗಿಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ.

ಅರ್ಜಿ ವಿಚಾರಣೆ ವೇಳೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮೇಲ್ನೋಟಕ್ಕೆ ವಿಮಾನ ನಿಲ್ದಾಣ ಹಸ್ತಾಂತರ ಎಎಐನ ಸೆಕ್ಷನ್ 12 ಮತ್ತು 12ಎಗೆ ವಿರುದ್ಧವಾಗಿದೆ. ಹಾಗಾಗಿ, ಈ ಕುರಿತು ಕೇಂದ್ರ ಸರ್ಕಾರದ ನೀತಿ ಏನಿದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ : ಸರ್ಕಾರಿ-ಖಾಸಗಿ ಸಹಭಾಗಿತ್ವ ಯೋಜನೆ ಅಡಿ ಅಹ್ಮದಾಬಾದ್, ಜೈಪುರ, ಲಖನೌ, ಗೋವಾ, ಗುವಾಹಟಿ ಮತ್ತು ಮಂಗಳೂರು ವಿಮಾನ ನಿಲ್ದಾಣ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗೆ 2018ರ ನ.8ರಂದು ಕೇಂದ್ರ ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ಇದೇ ಆಧಾರದಲ್ಲಿ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ನಿರ್ವಹಣೆಗೆ ಸಂಬಂಧಿಸಿದ ಅದಾನಿ ಎಂಟರ್‌ ಪ್ರೈಸೆಸ್‌ ಮಾಡಿದ್ದ ಬಿಡ್ಡಿಂಗ್‌ನ 2019ರ ಮಾ.3 ರಂದು ಕೇಂದ್ರ ಸಚಿವ ಸಂಪುಟವು ಒಪ್ಪಿತ್ತು.

ಕೇಂದ್ರದ ಈ ಕ್ರಮ ಕಾನೂನುಬಾಹಿರ ಹಾಗೂ ವಿಮಾಣ ನಿಲ್ದಾಣ ಪ್ರಾಧಿಕಾರ ಕಾಯ್ದೆಯ ಉಲ್ಲಂಘನೆ ಎಂದು ಆರೋಪಿಸಿರುವ ಅರ್ಜಿದಾರರು, ನಿಮಯಗಳ ಪ್ರಕಾರ ಗುತ್ತಿಗೆಗೆ ಹೊರತುಪಡಿಸಿ ಯಾವುದೇ ರೀತಿಯಲ್ಲೂ ವಿಮಾನ ನಿಲ್ದಾಣದ ಆಸ್ತಿ ವರ್ಗಾವಣೆ ಮಾಡುವಂತಿಲ್ಲ.

ಹಾಗೆಯೇ, ವಿಮಾನ ನಿಲ್ದಾಣದ ಸ್ವಾಧೀನ ಮತ್ತು ನಿರ್ವಹಣೆ ಸಂಬಂಧ ಯಾರೊಂದಿಗೂ ಒಪ್ಪಂದ ಮಾಡಿಕೊಳ್ಳಲು ವಿಮಾನಯಾನ ಸಚಿವಾಲಯ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ.

ಹಾಗಿದ್ದೂ, ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು ಅದಾನಿ ಎಂಟರ್‌ ಪ್ರೈಸಸ್ ಲಿಮಿಟೆಡ್​ಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ ಹಸ್ತಾಂತರವನ್ನು ರದ್ದುಪಡಿಸಬೇಕು ಎಂದು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.