ETV Bharat / state

ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಾಪಕರ ವಿರುದ್ಧ ಆರೋಪ ನಿಗದಿಗೆ ಹೈಕೋರ್ಟ್ ನಿರ್ಧಾರ - ಸಾಕ್ಷ್ಯಚಿತ್ರ ಪ್ರಸಾರ

High Court: ಕೋರ್ಟ್​​ ಆದೇಶ ಉಲ್ಲಂಘಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ ಸಂಬಂಧ ಆರೋಪ ನಿಗದಿಪಡಿಸಲು ಹೈಕೋರ್ಟ್ ನಿರ್ಧರಿಸಿದೆ.

high-court-decides-to-file-charges-against-wild-karnataka-documentary-makers
ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಾಪಕರ ವಿರುದ್ಧ ಆರೋಪ ನಿಗದಿಗೆ ಹೈಕೋರ್ಟ್ ನಿರ್ಧಾರ
author img

By ETV Bharat Karnataka Team

Published : Jan 5, 2024, 6:21 AM IST

Updated : Jan 5, 2024, 2:04 PM IST

ಬೆಂಗಳೂರು : ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ ಆರೋಪದಲ್ಲಿ ಚಲನಚಿತ್ರ ನಿರ್ಮಾಪಕ ಶರತ್ ಚಂಪತಿ, ಕಲ್ಯಾಣ ವರ್ಮ ಮತ್ತು ಜೆ.ಎಸ್. ಅಮೋಘವರ್ಷ ಹಾಗೂ ಡಿಸ್ಕವರಿ ಇಂಡಿಯಾ, ಬಿಬಿಸಿ-ಯು.ಕೆ ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಆರೋಪ ನಿಗದಿಪಡಿಸಲು ಹೈಕೋರ್ಟ್ ನಿರ್ಧರಿಸಿದೆ.

ಅಲ್ಲದೆ, ಯುಕೆ ಮೂಲದ ಚಲನಚಿತ್ರ ನಿರ್ಮಾಪಕ ಸಂಸ್ಥೆಯಾದ ಐಕಾನ್ ಫಿಲ್ಮ್ ಲಿಮಿಟೆಡ್, ವಿತರಕರಾದ ಐಟಿವಿ ಸ್ಟೂಡಿಯೋ ಗ್ಲೋಬಲ್ ಡಿಸ್ಟ್ರೀಬೂಟರ್ ಲಿಮಿಟೆಡ್ ವಿರುದ್ಧವೂ ಆರೋಪ ನಿಗದಿಯಾಗಲಿದೆ. ರವೀಂದ್ರ ಎನ್. ರಾಡ್ಕರ್ ಮತ್ತು ಆರ್.ಕೆ. ಉಲ್ಲಾಶ್ ಕುಮಾರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ: ವೈಲ್ಡ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿಲ್ಲ. ವನ್ಯಜೀವಿ ಸಂಪತ್ತನ್ನು ಉತ್ತೇಜಿಸುವುದು, ಈ ಕುರಿತು ಅರಿವು ಮೂಡಿಸುವುದಕ್ಕೆ ನಿರ್ಮಿಸಲಾಗಿತ್ತು. ಈ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ರಾಜ್ಯ ಅರಣ್ಯ ಇಲಾಖೆಯ ಒಪ್ಪಂದವನ್ನು ಉಲ್ಲಂಘಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡುವುದು, ಹಂಚಿಕೆ ಮಾಡದಂತೆ ಚಿತ್ರದ ನಿರ್ಮಾಪಕರು, ಬೆಂಗಳೂರು ಮೂಲದ ಮಡ್ಸ್ಕಿಪ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ಗೆ 2021ರ ಜೂನ್ 29ರಂದು ಹೈಕೋರ್ಟ್ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಿತ್ತು.

ಈ ನಡುವೆ ಅರಣ್ಯ ಇಲಾಖೆಯೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿ, ಅರಣ್ಯ ಇಲಾಖೆಯ ಗಮನಕ್ಕೆ ಬಾರದೆ ನಿರ್ಮಾಪಕರು ಚಿತ್ರವನ್ನು ಮಾರಾಟ ಮಾಡಿಕೊಂಡಿದ್ದು, ಅಪರಾರ ಪ್ರಮಾಣದಲ್ಲಿ ಹಣ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಜೊತೆಗೆ, ಅರಣ್ಯ ಇಲಾಖೆಯ ಒಪ್ಪಂದಂತೆ ಹುಲಿ ಸಂರಕ್ಷಣಾ ಪ್ರತಿಷ್ಠಾನ(ಟಿಎಫ್‌ಸಿ)ಕ್ಕೆ ಯಾವುದೇ ಹಣ ಪಾವತಿ ಮಾಡದೆ ಸಾಕ್ಷ್ಯಚಿತ್ರವನ್ನು 100 ದೇಶಗಳಿಗೂ ಹೆಚ್ಚು ಭಾಗಗಳಲ್ಲಿ ಪ್ರಸಾರ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ನ್ಯಾಯಾಂಗ ನಿಂದನೆ ಅರ್ಜಿ : ನ್ಯಾಯಾಲಯದ ಆದೇಶದ ನಡುವೆ ವೈಲ್ಡ್ ಕರ್ನಾಟಕ ಚಿತ್ರವನ್ನು ಡಿಸ್ಕವರಿ ಚಾನೆಲ್, ಬಿಬಿಸಿ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಮಾಡಲಾಗಿದೆ. 2023ರ ಪ್ರಾರಂಭದ ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರದ ಕೆಲವು ತುಣುಕುಗಳು ಪ್ರಸಾರವಾಗಿದೆ. ನ್ಯಾಯಾಲಯದ ಆದೇಶ ತಿಳಿದಿದ್ದರೂ, ಬಿಬಿಸಿ-ಯುಕೆ, ಬಿಬಿಸಿ ಅಮೆರಿಕದಲ್ಲಿ ಚಿತ್ರದ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಐಕಾನ್ ಫಿಲ್ಮ್ಸ್​​ ಅವರು 1500 ಫೌಂಡ್ (1.20 ಲಕ್ಷ)ಗಳನ್ನು ಟಿಎಫ್‌ಸಿಗೆ ಪಾವತಿಸುವುದಾಗಿ ತಿಳಿಸಿದ್ದರು. ಆದರೆ, ಪ್ರಕರಣದ ಇತರರು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಆಧಾರದಲ್ಲಿ ಟಿಎಫ್‌ಸಿಗೆ ಹಣ ಪಾವತಿ ಮಾಡಿದಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಸಿ ಪ್ರತಿನಿಧಿಗಳನ್ನು ಹೊರತುಪಡಿಸಿ ಇತರೆ ಆರೋಪಿಗಳು ಟಿಎಫ್‌ಸಿಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಇದೀಗ ಆರೋಪ ನಿಗದಿಗೆ ಹೈಕೋರ್ಟ್ ನಿರ್ಧರಿಸಿದೆ.

ಇದನ್ನೂ ಓದಿ: ದೇವರಾಯನದುರ್ಗದ ಮೀಸಲು ಅರಣ್ಯದಲ್ಲಿ ಒತ್ತುವರಿ ಪ್ರಕರಣ: ಸರ್ಕಾರಕ್ಕೆ ನೋಟಿಸ್​ ಜಾರಿ

Last Updated : Jan 5, 2024, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.