ETV Bharat / state

ಪತ್ನಿಗೆ ಅನಾರೋಗ್ಯ: ಬಿಎಸ್ಎಫ್ ಸಬ್‌ಇನ್ಸ್​ಪೆಕ್ಟರ್ ವರ್ಗಾವಣೆ ರದ್ದುಪಡಿಸಿದ ಹೈಕೋರ್ಟ್ - High Court latest news

1986 ರಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿಎಸ್ಎಫ್ ಸಬ್ ಇನ್ಸ್​ಪೆಕ್ಟರ್​ವೊಬ್ಬರ ವರ್ಗಾವಣೆ ಆದೇಶವನ್ನು ರದ್ದುಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಹೈಕೋರ್ಟ್
High Court
author img

By

Published : Aug 27, 2021, 2:19 PM IST

ಬೆಂಗಳೂರು: ಪತ್ನಿಗೆ ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆ ಇದೆ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಪರಿಗಣಿಸಿರುವ ಹೈಕೋರ್ಟ್ ಬಿಎಸ್ಎಫ್ ಸಬ್ ಇನ್ಸ್​ಪೆಕ್ಟರ್ ವರ್ಗಾವಣೆ ರದ್ದುಪಡಿಸಿ ಆದೇಶಿಸಿದೆ.

1986 ರಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಜಿದಾರ ಸಬ್ ಇನ್ಸ್​ಪೆಕ್ಟರ್ ಅವರನ್ನು ಇತ್ತೀಚೆಗೆ ಬಿಎಸ್ಎಫ್ ಕಾಶ್ಮೀರಕ್ಕೆ ವರ್ಗಾವಣೆ ಮಾಡಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಅಧಿಕಾರಿ, ತಮ್ಮ ಪತ್ನಿಗೆ ಕ್ಯಾನ್ಸರ್ ರೋಗವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಧಾರದಲ್ಲಿಯೇ ನನ್ನನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೆ ಕಾಶ್ಮೀರಕ್ಕೆ ವರ್ಗಾವಣೆ ಮಾಡಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಮನವಿ ಪರಿಗಣಿಸಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಇಂತಹ ಸಂದರ್ಭಗಳಲ್ಲಿ ಬಿಎಸ್ಎಫ್ ಕೂಡ ಸಹಾನುಭೂತಿ ತೋರಿಸಬೇಕು ಎಂದು ಅಭಿಪ್ರಾಯಪಟ್ಟು ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.

ಅರ್ಜಿದಾರ ಅಧಿಕಾರಿ, ನನ್ನ ಪತ್ನಿ 2009 ರಿಂದ ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಿದ್ದರೂ ಬಿಎಸ್ಎಫ್ 2021ರ ಜನವರಿ 9ರಂದು ಕಾಶ್ಮೀರಕ್ಕೆ ವರ್ಗಾವಣೆ ಮಾಡಿ ಆದೇಶಿಸಿದೆ. 1986 ರಲ್ಲಿ ಬಿಎಸ್ಎಫ್​ಗೆ ಕಾನ್ಸ್​ಟೇ​ಬಲ್ ಆಗಿ ಸೇರಿದ ನಂತರ ಸುಮಾರು 35 ವರ್ಷಗಳ ಕಾಲ ದೇಶದ ವಿವಿಧೆಡೆ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ವರ್ಗಾವಣೆಯಿಂದ ವಿನಾಯಿತಿ ನೀಡುವಂತೆ ಆದೇಶಿಸಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.