ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ಸೇರಲಿರುವ ಶಾಸಕರ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಖಾಂತರ ಸಿಎಂಗೆ ತಲುಪಿಸುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಮಾಸ್ಟರ್ ಪ್ಲಾನ್ ಅನ್ನು ಹೈಕಮಾಂಡ್ ರೂಪಿಸಿದೆ.
ಸಚಿವರ ಪಟ್ಟಿಯನ್ನು ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳುಹಿಸಲಿಕೊಡಲಿದ್ದು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಖಾಂತರ ಸಿಎಂ ಕೈಗೆ ತಲುಪಿಸುವ ಮೂಲಕ ಎರಡೂ ಬಣಗಳ ನಡುವೆ ಸಾಮರಸ್ಯ ಮೂಡಿಸುವ ತಂತ್ರ ರೂಪಿಸಿದೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡುವವರ ಸಂಖ್ಯೆಯನ್ನು 11-13 ರ ಬದಲು 18-20 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕಡಿಮೆ ಸಂಖ್ಯೆಯ ಸಚಿವರನ್ನು ರಚಿಸಿದರೆ ಪ್ರತಿ ಪಕ್ಷಗಳಿಂದ ಮತ್ತೆ ಟೀಕೆ ಎದುರಾಗಲಿದ್ದು, ಪಕ್ಷ ಮುಜುಗರಕ್ಕೆ ಸಿಲುಕಬಾರದು ಎನ್ನುವ ಕಾರಣಕ್ಕೆ ಸಂಪುಟ ಗಾತ್ರ 20 ರ ಆಸುಪಾಸಿನಲ್ಲಿ ಇದ್ದರೆ ಒಳಿತು ಎನ್ನುವ ಕಾರಣಕ್ಕೆ ಸಂಖ್ಯೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎನ್ನಲಾಗಿದೆ.
ಹಿರಿಯರಿಗೆ ಕಾದಿದೆಯಾ ಶಾಕ್?
ಈ ಬಾರಿಯ ಸಂಪುಟದಲ್ಲಿ ಅಚ್ಚರಿ ಹೆಸರು ಉಲ್ಲೇಖವಾಗಿದೆ ಎನ್ನುವ ಮಾಹಿತಿ ಇದೆ, ಈ ಹಿಂದೆ ಸಚಿವರಾದ ಪ್ರಮುಖ ನಾಯಕರು, ಬಿಎಸ್ವೈ ಆಪ್ತ ಬಳಗದ ಕೆಲವರಿಗೆ ಅವಕಾಶ ಕೈ ತಪ್ಪುವ ಸಾಧ್ಯತೆ ಇದ್ದು, ಹಿರಿಯ ಶಾಸಕರಾಗಿದ್ದವರಿಗೆ, ಹೊಸಬರಿಗೆ ಮಣೆ ಹಾಕಲಾಗುತ್ತದೆ. ಬೆಂಗಳೂರಿನ ಮೂರರಿಂದ ನಾಲ್ಕು ಮಂದಿಗೆ ಮಾತ್ರ ಸಂಪುಟದಲ್ಲಿ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಸಂಭಾವ್ಯ ಪಟ್ಟಿ:
- ಜಗದೀಶ್ ಶೆಟ್ಟರ್ , ಹುಬ್ಬಳ್ಳಿ ಸೆಂಟ್ರಲ್ ಶಾಸಕ
- ಆರ್.ಅಶೋಕ್, ಪದ್ಮನಾಭನಗರ ಶಾಸಕ
- ಅರವಿಂದ ಲಿಂಬಾವಳಿ,ಮಹದೇವಪುರ ಶಾಸಕ
- ಮಾಧುಸ್ವಾಮಿ,ಚಿಕ್ಕನಾಯಕನಹಳ್ಳಿ ಶಾಸಕ
- ಶ್ರೀರಾಮುಲು, ಮೊಳಕಾಲ್ಮೂರು ಶಾಸಕ
- ಕೆ.ಎಸ್.ಈಶ್ವರಪ್ಪ,ಶಿವಮೊಗ್ಗ ಶಾಸಕ
- ಕೋಟಾ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್ ಸದಸ್ಯ
- ಡಾ.ಅಶ್ವತ್ಥ ನಾರಾಯಣ, ಮಲ್ಲೇಶ್ವರಂ ಶಾಸಕ
- ಗೋವಿಂದ ಕಾರಜೋಳ, ಮುಧೋಳ ಶಾಸಕ
- ಪ್ರಭು ಚೌಹಾಣ್, ಔರಾದ್ ಶಾಸಕ
- ಬಸವರಾಜ ಬೊಮ್ಮಾಯಿ, ಶಿಗ್ಗಾವಿ ಶಾಸಕ
- ಉಮೇಶ್ ಕತ್ತಿ, ಹುಕ್ಕೇರಿ ಶಾಸಕ
- ಎಸ್.ಅಂಗಾರ, ಸುಳ್ಯ ಶಾಸಕ
- ಎಸ್.ಎ ರಾಮದಾಸ್, ಕೃಷ್ಣರಾಜ ಶಾಸಕ
- ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ