ETV Bharat / state

ಜಿಎಸ್​ಟಿ ಪರಿಹಾರ ಹಣ: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದೆ ಬರೋಬ್ಬರಿ 12,101 ಕೋಟಿ ರೂ. ಬಾಕಿ! - union budget 2023

ಫೆ.17 ರಂದು ರಾಜ್ಯ ಬಜೆಟ್ ಮಂಡನೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ. ಬರೋಬ್ಬರಿ 12,101 ಕೋಟಿ ರೂ. ಜಿಎಸ್​ಟಿ ಪರಿಹಾರ ಹಣ ಬಾಕಿ ಉಳಿಸಿಕೊಂಡಿದ್ದು, ಹಣಕಾಸು ನಿರ್ವಹಣೆ ಮಾಡುವುದು ರಾಜ್ಯಕ್ಕೆ ಸವಾಲಾಗಿದೆ.

CM Bommai
ಸಿಎಂ ಬೊಮ್ಮಾಯಿ
author img

By

Published : Feb 3, 2023, 9:15 AM IST

ಬೆಂಗಳೂರು: ಜಿಎಸ್​​ಟಿ ಪರಿಹಾರ ನೀಡುವಿಕೆ ಕಳೆದ ಜೂನ್‌ನಲ್ಲೇ ಮುಕ್ತಾಯವಾಗಿದೆ. ಬಜೆಟ್ ತಯಾರಿಯಲ್ಲಿರುವ ರಾಜ್ಯ ಸರ್ಕಾರಕ್ಕೆ ಇನ್ನು ಮುಂದೆ ಜಿಎಸ್​​ಟಿ ಪರಿಹಾರ ಹಣ ಇಲ್ಲದೆಯೇ ಹಣಕಾಸು ನಿರ್ವಹಣೆ ಮಾಡಬೇಕಾಗಿರುವುದು ದೊಡ್ಡ ಸವಾಲಾಗಿದೆ. ಆದರೆ. ದುರಂತ ಅಂದರೆ ಇನ್ನೂ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ. ಜಿಎಸ್​ಟಿ ಪರಿಹಾರ ಹಣ ಬಾಕಿ ಉಳಿಸಿಕೊಂಡಿದೆ.

ಬೊಮ್ಮಾಯಿ ಸರ್ಕಾರ ಇದೀಗ ತಮ್ಮ ಚುನಾವಣಾ ವರ್ಷದ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಜನಪ್ರಿಯ ಯೋಜನೆ, ಹೊರೆ ಇಲ್ಲದ ಬಜೆಟ್ ಮಂಡನೆಗೆ ಸಿಎಂ ಕಸರತ್ತು ನಡೆಸುತ್ತಿದ್ದಾರೆ. ಆದಾಯ ಸಂಗ್ರಹ ನಿರೀಕ್ಷೆಗಿಂತಲೂ ಉತ್ತಮ ಚೇತರಿಕೆ ಕಂಡಿದ್ದರೂ, ಹೆಚ್ಚಲಿರುವ ಬದ್ಧತಾ ವೆಚ್ಚ, ಜನಪ್ರಿಯ ಘೋಷಣೆಗಳಿಗೆ ಹಣ ಹೊಂದಿಸಲು ಅಧಿಕ ಸಂಪನ್ಮೂಲದ ಅನಿವಾರ್ಯತೆ ಇದೆ. ಇತ್ತ ಕೇಂದ್ರ ಬಜೆಟ್​​ನಲ್ಲಿ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಹೊರತು ಪಡಿಸಿ ಉಳಿದಂತೆ ಗಣನೀಯ ಅನುದಾನ ಹರಿದು ಬಂದಿಲ್ಲ.

ಹೀಗಾಗಿ ಈ ಬಾರಿ ಅಧಿಕ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಜಿಎಸ್​​ಟಿ ಪರಿಹಾರ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುವ ಪರಿಹಾರ ಮೊತ್ತ. ಜಿಎಸ್​ಟಿ ಜಾರಿಯಾದ ಬಳಿಕ ರಾಜ್ಯಗಳು ಅನುಭವಿಸುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಐದು ವರ್ಷಗಳಿಂದ ಜಿಎಸ್​​ಟಿ ಪರಿಹಾರವನ್ನು ಕೊಡುತ್ತಾ ಬರುತ್ತಿದೆ. ಅದರಂತೆ ಜಿಎಸ್​​ಟಿ ಪರಿಹಾರ ಕಳೆದ ವರ್ಷ ಜೂನ್​​ಗೆ ಮುಕ್ತಾಯವಾಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ಜಿಎಸ್​ಟಿ ಪರಿಹಾರ ದೊಡ್ಡ ವರದಾನವಾಗಿತ್ತು. ಅದೀಗ ಮುಕ್ತಾಯವಾಗಿದೆ. ಆದರೆ, ಬೊಮ್ಮಾಯಿ‌ ಸರ್ಕಾರಕ್ಕೆ ಕೇಂದ್ರ ಸರ್ಕಾರ ಇನ್ನೂ ಸಾವಿರಾರು ಕೋಟಿ ಜಿಎಸ್​ಟಿ ಪರಿಹಾರ ಹಣವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಇದು ಬೊಮ್ಮಾಯಿ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

12,100 ಕೋಟಿ ರೂ. ಜಿಎಸ್​​ಟಿ ಪರಿಹಾರ ಬಾಕಿ: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಇನ್ನೂ ಬರೋಬ್ಬರಿ 12,101 ಕೋಟಿ ರೂ. ಜಿಎಸ್​ಟಿ ಪರಿಹಾರ ಹಣ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಬೆನ್ನುತಟ್ಟುವ ಸರ್ಕಾರಕ್ಕೆ ಜಿಎಸ್​​ಟಿ ಪರಿಹಾರ ಹಣ ತರಿಸುವುದು ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಜಿಎಸ್​ಟಿ ಪರಿಹಾರ ಮೊತ್ತ ನೀಡುವಿಕೆ ಕಳೆದ ಜೂನ್​ನಲ್ಲೇ ಮುಕ್ತಾಯವಾಗಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಇದುವರೆಗೆ ಬರೋಬ್ಬರಿ 12,101 ಕೋಟಿ ರೂ. ಜಿಎಸ್​ಟಿ ಪರಿಹಾರ ಹಣ ರಾಜ್ಯಕ್ಕೆ ಪಾವತಿಸದೇ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ.

2023-24ರಲ್ಲಿ ಜಿಎಸ್​ಟಿ ಪರಿಹಾರ ಮೊತ್ತವಾಗಿ ಸುಮಾರು 4,000 ಕೋಟಿ ಬಾಕಿ ಹಣ ಬರಬೇಕಾಗಿದೆ. ಈ ಹಿಂದಿನದ್ದು ಬಾಕಿ ಮೊತ್ತ ಸೇರಿ ಬರೋಬ್ಬರಿ 12,101 ಕೋಟಿ ರೂ. ಪರಿಹಾರ ಹಣ ಬಾಕಿ ಉಳಿಸಿಕೊಂಡಿದೆ ಎಂದು ವಾಣಿಜ್ಯ ಇಲಾಖೆ ಆಯುಕ್ತೆ ಶಿಖಾ ಮಾಹಿತಿ ನೀಡಿದ್ದಾರೆ. ಇದರಲ್ಲಿ ಕರ್ನಾಟಕಕ್ಕೆ ಕೊಡ ಮಾಡುವ ವಿಶೇಷ ಜಿಎಸ್​ಟಿ ಸಾಲದ ರೂಪದ ಹಣವೂ ಒಳಗೊಂಡಿದೆ ಎಂದು ಹೇಳಲಾಗಿದೆ.

ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಬಾಕಿ ಪರಿಹಾರ ಮೊತ್ತ ಪಾವತಿಸುವಂತೆ ಮನವಿ ಮಾಡುತ್ತಲೇ ಬಂದಿದೆ. ಆದರೆ ಇದುವರೆಗೆ ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ. ಕೇಂದ್ರದ ಬಜೆಟ್ ಮುನ್ನ ರಾಜ್ಯ ನೀಡಿದ ಬೇಡಿಕೆಗಳ ಪಟ್ಟಿಯಲ್ಲೂ ಜಿಎಸ್​ಟಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೋರಲಾಗಿತ್ತು ಎನ್ನಲಾಗಿದೆ. ಆದರೆ, ಅದಕ್ಕೂ ಕೇಂದ್ರ ಸರ್ಕಾರ ಕಿವಿಕೊಟ್ಟಿಲ್ಲ. ಇಷ್ಟು ದೊಡ್ಡ ಪ್ರಮಾಣದ ಜಿಎಸ್​ಟಿ ಪರಿಹಾರ ಮೊತ್ತ ಪಾವತಿಯಾಗದೇ ಬಾಕಿ ಉಳಿದುಕೊಂಡಿರುವುದು ಬೊಮ್ಮಾಯಿ‌ ಸರ್ಕಾರದ ಹಣಕಾಸು ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ಆದರೆ, ಮುಂದಿನ ದಿನಗಳಲ್ಲಿ ಬಾಕಿ ಹಣವನ್ನು ಪಾವತಿಸುವ ವಿಶ್ವಾಸವನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಇಲಾಖೆ ನೀಡಿರುವ ಮಾಹಿತಿಯಂತೆ 2020-21ರಲ್ಲಿ ಜಿಎಸ್​​ಟಿ ಪರಿಹಾರ ಹಣ ಮತ್ತು ಸಾಲದ ರೂಪದಲ್ಲಿ ಸರ್ಕಾರ ಒಟ್ಟು 26,000 ಕೋಟಿ ರೂ. ಪಡೆದಿದೆ. 2021-22ರಲ್ಲಿ ಜಿಎಸ್​ಟಿ ಪರಿಹಾರ ಹಾಗೂ ಸಾಲದ ರೂಪದಲ್ಲಿ 18,000 ಕೋಟಿ ರೂ‌. ಸ್ವೀಕರಿಸಲಾಗಿತ್ತು. ಕಳೆದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ 8,633 ಕೋಟಿ ರೂ. ಜಿಎಸ್​​ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಿತ್ತು. ಈ ಹಿಂದಿನ ಬಾಕಿಗಳು ಸೇರಿ ಸದ್ಯ ಸುಮಾರು 12,101 ಕೋಟಿ ರೂ. ಜಿಎಸ್​​ಟಿ ಪರಿಹಾರ ಹಣ ಕರ್ನಾಟಕಕ್ಕೆ ಬರಬೇಕಾಗಿದೆ.

ಇದನ್ನೂ ಓದಿ: ಕೇಂದ್ರಕ್ಕೆ ಹಣ ಬರುವುದು ಎಲ್ಲಿಂದ? ಹೆಚ್ಚು ಖರ್ಚು ಯಾವುದಕ್ಕೆ?: ₹ ಲೆಕ್ಕಾಚಾರದಲ್ಲಿ ಬಜೆಟ್‌ ವಿವರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.