ETV Bharat / state

ಅಸಾನಿ ಚಂಡಮಾರುತದ ಎಫೆಕ್ಟ್​​: ಬೆಂಗಳೂರಲ್ಲಿ ಗಾಳಿ ಸಹಿತ ಮಳೆ

author img

By

Published : Mar 22, 2022, 9:03 PM IST

ಕರ್ನಾಟಕದಲ್ಲಿ ಮಾರ್ಚ್ 24 ರ ತನಕ ಅಸಾನಿ ಚಂಡಮಾರುತದ ಪ್ರಭಾವದಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರದಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.

ಗಾಳಿ ಸಹಿತ ಮಳೆ
ಗಾಳಿ ಸಹಿತ ಮಳೆ

ಬೆಂಗಳೂರು: 'ಅಸಾನಿ' ಚಂಡಮಾರುತ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೂ ಸಿಲಿಕಾನ್​ ಸಿಟಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಆದರೆ ನಗರದ ಹಲವೆಡೆ ಸಂಜೆಯಿಂದ ಗಾಳಿ ಸಹಿತ ಮಳೆಯಾಗುತ್ತಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಂಡು, ಚಂಡಮಾರುತದ ಪರಿಣಾಮ ಮಳೆಯಾಗುತ್ತಿದೆ.

ಅಸಾನಿ ಚಂಡಮಾರುತದ ಪರಿಣಾಮ ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಗರದ ವಿ.ವಿ.ಪುರಂ, ಶಾಂತಿನಗರ, ಕೆ.ಆರ್​.ಮಾರ್ಕೆಟ್, ಗಿರಿನಗರ, ಬಸವನಗುಡಿ, ಕಲಾಸಿಪಾಳ್ಯ, ಲಾಲ್​ಬಾಗ್​, ಮೆಜೆಸ್ಟಿಕ್​, ಕೋರಮಂಗಲ, ಆಡುಗೋಡಿ ರಸ್ತೆ ಸೇರಿದಂತೆ ಹಲವೆಡೆ ವರುಣಾರ್ಭಟವಾಗಿದೆ. (ಇದನ್ನೂ ಓದಿ: ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರು: 1 ಗಂಟೆ ನಂತರ ಪ್ರಶ್ನೆ ಪತ್ರಿಕೆ ವಾಪಸ್ ಪಡೆದು ಹೊರಕಳಿಸಿದ ಸಂಸ್ಥೆ)

ಮಾರ್ಚ್ 24ರ ತನಕ ಮಳೆ: ಕರ್ನಾಟಕದಲ್ಲಿ ಮಾರ್ಚ್ 24 ರವರೆಗೆ ಅಸಾನಿ ಚಂಡಮಾರುತದ ಪ್ರಭಾವದಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರದಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇಂದು ಅಪ್ಪಳಿಸುವ ಅಸಾನಿ ಚಂಡಮಾರುತದಿಂದ ಕರ್ನಾಟಕಕ್ಕೆ ಹೆಚ್ಚಿನ ಅಪಾಯ ಇಲ್ಲವಾದರೂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.