ಆನೇಕಲ್: ನಿನ್ನೆ ತಡ ರಾತ್ರಿಯಿಂದ ಸುರಿದ ಧಾರಾಕಾರ ಮಳೆ ಬೆಳಗ್ಗೆಯೂ ಮುಂದುವರೆದಿದ್ದು, ಸದ್ಯ ರಸ್ತೆಗಳಲ್ಲಿ ನೀರು ನಿಂತಿದೆ.
ಆನೇಕಲ್, ಬನ್ನೇರುಘಟ್ಟ, ಬೇಗೂರು, ಹುಳಿಮಾವು, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ಅತ್ತಿಬೆಲೆ ಭಾಗಗಳಲ್ಲಿಯೂ ಮಳೆ ಸುರಿದಿದೆ. ಜನರಿಲ್ಲದೇ ರಸ್ತೆಗಳು ಮಳೆ ನೀರಿಗೆ ತೋಯ್ದು ಸ್ವಚ್ಛವಾಗಿ ಕಾಣತೊಡಗಿವೆ. ರಸ್ತೆಗಳಲ್ಲಿ ನಿಂತ ನೀರಲ್ಲಿ ವಾಹನಗಳು ವೇಗವಾಗಿ ಸಾಗಿ ನೀರು ಚಿಮ್ಮಿಸುವ ದೃಶ್ಯಗಳು ಕಂಡು ಬಂದವು.