ETV Bharat / state

ಸದ್ಯಕ್ಕೆ ರಿಲೀಫ್​ ನೀಡದ ಮಳೆರಾಯ.. ಕೆರೆಯಂತಾದ ಬೆಂಗಳೂರು ರಸ್ತೆಗಳು - bangalore latest news

ವಾಯುಭಾರ ಕುಸಿತದಿಂದ ಬೆಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನ ಜೀವನ, ವಾಹನ ಸವಾರರು ಪರದಾಡುವಂತಾಗಿದೆ.

Heavy rain fall in bangalore today
ಬೆಂಗಳೂರಿನಲ್ಲಿ ಧಾರಾಕಾರ ಮಳೆ
author img

By

Published : Sep 19, 2020, 7:17 PM IST

ಬೆಂಗಳೂರು: ನಗರದ ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿದ್ದು, ಮಧ್ಯಾಹ್ನ ಆರಂಭವಾದ ಮಳೆ ಎಡೆಬಿಡದೆ ಸುರಿಯುತ್ತಿದೆ.

ಇಲ್ಲಿನ ಜಯನಗರ, ಯಶವಂತಪುರ, ಮೆಜೆಸ್ಟಿಕ್, ಕಾರ್ಪೊರೇಷನ್, ಬಸವನಗುಡಿ, ಗಾಂಧಿನಗರ, ಇಂದಿರಾ ನಗರ, ಕೋರಮಂಗಲ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗುತ್ತಿದೆ.

ಇನ್ನೂ ವಾಹನ ಸವಾರರು ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿದೆ. ಅನೇಕ ರಸ್ತೆಗಳು ಜಲಾವೃತವಾಗಿದೆ. ಅಂಡರ್ ಪಾಸ್​​ಗಳಲ್ಲಿ ನೀರು ನಿಂತಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಬಂಗಾಳಕೊಲ್ಲಿ ಉಪಸಾಗರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ, ನಗರದಲ್ಲಿ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ಮುನ್ಸೂಚನೆ ನೀಡಿತ್ತು.

ಸದ್ಯ ನಗರದಲ್ಲಿ ಯಾವುದೇ ಮರಗಳು ಬಿದ್ದಿಲ್ಲ, ಮನೆಗಳಿಗೆ ನೀರು ನುಗ್ಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.