ETV Bharat / state

ಇನ್ನಷ್ಟು ಜನಸ್ನೇಹಿ ಆಗಲಿದೆ ನಮ್ಮ ಕ್ಲಿನಿಕ್​.. ರಾತ್ರಿ 8 ಗಂಟೆವರೆಗೂ ಓಪನ್​ ಇರುವಂತೆ ಕ್ರಮ

author img

By

Published : Aug 10, 2023, 7:39 AM IST

Updated : Aug 10, 2023, 12:26 PM IST

Namma Clinic Timings Change: ರಾಜ್ಯದಲ್ಲಿ ನಮ್ಮ ಕ್ಲಿನಿಕ್​ಗಳನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಸಮಯ ಬದಲಾವಣೆಗೆ ಮುಂದಾಗಿದೆ.

Etv Bharat
Etv Bharat
ನಮ್ಮ ಕ್ಲಿನಿಕ್ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಬೆಂಗಳೂರು: ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ನಮ್ಮ ಕ್ಲಿನಿಕ್​​ಗಳಿಗೆ ಆರೋಗ್ಯ ಸಚಿವರು ಜನಸ್ನೇಹಿ ಸ್ಪರ್ಶ ನೀಡಿದ್ದು, ಕ್ಲಿನಿಕ್​​ಗಳ ಸಮಯ ಬದಲಾವಣೆ ಮಾಡಿ ಸಂಜೆ ವೇಳೆಯೂ ಚಿಕಿತ್ಸೆ ಲಭಿಸುವಂತೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಕ್ಲಿನಿಕ್​​ಗಳ ಪೈಕಿ ಶೇಕಡಾ 25ರಷ್ಟು ನಮ್ಮ ಕ್ಲಿನಿಕ್​ಗಳ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಆದೇಶಿಸಿದ್ದಾರೆ. ಸಂಜೆ 4.30ಕ್ಕೆ ಬಾಗಿಲು ಮುಚ್ಚುತ್ತಿದ್ದ ನಮ್ಮ ಕ್ಲಿನಿಕ್​ಗಳು ಇನ್ನು ಮುಂದೆ ರಾತ್ರಿ 8 ಗಂಟೆಯ ತನಕ ಚಿಕಿತ್ಸೆ ನೀಡಲಿವೆ.

ನಗರ ಪ್ರದೇಶಗಳಲ್ಲಿನ ಬಡವರು ಮತ್ತು ಕಡುಬಡವರಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಹಲವಾರು ವಿಭಿನ್ನ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ಇದರ ಒಂದು ಭಾಗವಾಗಿ ನಮ್ಮ ಕ್ಲಿನಿಕ್​ಗಳನ್ನು ನಂ 1 ಕ್ಲಿನಿಕ್​ಗಳನ್ನಾಗಿ ಮಾರ್ಪಡಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.

ರಾತ್ರಿ 8 ಗಂಟೆವರೆಗೆ ಕ್ಲಿನಿಕ್​ ಓಪನ್​​: ರಾಜ್ಯದಲ್ಲಿ 415 ನಮ್ಮ ಕ್ಲಿನಿಕ್​ಗಳಿದ್ದು, ಇವುಗಳಲ್ಲಿ ಶೇಕಡಾ 25ರಷ್ಟು ಕ್ಲಿನಿಕ್​ಗಳ ಸಮಯವನ್ನು ಬದಲಾವಣೆ ಮಾಡಲು ಆರೋಗ್ಯ ಸಚಿವರು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ. ಈ ಕ್ಲಿನಿಕ್​ಗಳು ಬೆಳಗ್ಗೆ 9 ಗಂಟೆಗೆ ಬಾಗಿಲು ತೆಗೆದು ಮಧ್ಯಾಹ್ನ 12.30ಕ್ಕೆ ಮುಚ್ಚಲ್ಪಡುತ್ತಿದ್ದವು. ಮಧ್ಯಾಹ್ನ ಊಟದ ಬಳಿಕ 2 ಗಂಟೆಗೆ ಬಾಗಿಲು ತೆರೆದು ಸಂಜೆ 4.30ಕ್ಕೆ ಬಂದ್ ಆಗುತ್ತಿದ್ದವು. ಈ ಸಮಯದಿಂದ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತಿರಲಿಲ್ಲ. ಬಹಳಷ್ಟು ರೋಗಿಗಳು ಆಸ್ಪತ್ರೆಗೆ ಬಂದು ಬಾಗಿಲು ಮುಚ್ಚಿರುವುದನ್ನು ನೋಡಿಕೊಂಡು ವಾಪಸ್​​ ತೆರಳಬೇಕಾಗಿತ್ತು.

ಬೆಳಗ್ಗೆ 9 ಗಂಟೆಯ ಬದಲಿಗೆ ಅಪರಾಹ್ನ 12 ಗಂಟೆಗೆ ಪ್ರಾರಂಭಗೊಂಡು, ರಾತ್ರಿ 8 ಗಂಟೆಯ ತನಕ ನಮ್ಮ ಕ್ಲಿನಿಕ್​ಗಳು ತೆರೆದಿರಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಬಂದ ಬಳಿಕವೂ ಚಿಕಿತ್ಸೆ ದೊರೆಯುವಂತೆ ನಮ್ಮ ಕ್ಲಿನಿಕ್​ಗಳ ಸಮಯ ಬದಲಾವಣೆ ಮಾಡಲಾಗುತ್ತಿದೆ. ರಾತ್ರಿಯವರೆಗೂ ಕ್ಲಿನಿಕ್ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಾಯೋಗಿಕ ಹಂತ: ನಮ್ಮ ಕ್ಲಿನಿಕ್​ಗಳು ಬೆಳಗ್ಗೆ 7 ಗಂಟೆಗೆ ತೆರೆಯಲಿದ್ದು, ಈ ಸಮಯದಲ್ಲಿ ಲ್ಯಾಬ್ ಟೆಕ್ನಿಷಿಯನ್​​ಗಳು ಮಾತ್ರ ಇರುತ್ತಾರೆ. ಅಪರಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ.‌ ಸದ್ಯ ರಾಜ್ಯದಲ್ಲಿ ಶೇ. 25ರಷ್ಟು ಕ್ಲಿನಿಕ್​ಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ಸಮಯ ಬದಲಾವಣೆ ಮಾಡಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದಲ್ಲಿನ ಎಲ್ಲಾ ನಮ್ಮ ಕ್ಲಿನಿಕ್ ಸಮಯ ಬದಲಾವಣೆ ಮಾಡುವ ಆಲೋಚನೆ ಆರೋಗ್ಯ ಇಲಾಖೆಯದ್ದಾಗಿದೆ.

ರಾಜ್ಯದಲ್ಲಿನ ನಮ್ಮ ಕ್ಲಿನಿಕ್​ಗಳಲ್ಲಿ ಇಲ್ಲಿಯವರೆಗೆ ಸುಮಾರು ಮೂರು ಲಕ್ಷದ 96 ಸಾವಿರ ಮಹಿಳೆಯರು ಹಾಗೂ 4 ಲಕ್ಷದ 21 ಸಾವಿರ ಪುರುಷರು ಚಿಕಿತ್ಸೆ ಪಡೆದಿದ್ದಾರೆ. ನಿತ್ಯ ಸರಾಸರಿ 35ರಿಂದ 40 ಜನರು ಚಿಕಿತ್ಸೆ ಪಡೆಯಲು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದಲ್ಲದೇ 2 ಲಕ್ಷದ 88 ಸಾವಿರ ಜನರು ರೋಗ ಪರೀಕ್ಷೆಗಳನ್ನ ಮಾಡಿಸಿಕೊಂಡಿದ್ದಾರೆ. ಹೆಚ್ಚಿನ ಜನರಿಗೆ ಆರೋಗ್ಯ ಸೇವೆ ದೊರಕಿಸಿಕೊಡಲು ಆರೋಗ್ಯ ಇಲಾಖೆ ಮತ್ತಷ್ಟು ಜನಸ್ನೇಹಿ ಯೋಜನೆ ಜಾರಿಗೆ ಹೆಜ್ಜೆ ಇಡಲು ಸಜ್ಜಾಗುತ್ತಿದೆ.

ಆರೋಗ್ಯ ಸಚಿವರ ಪ್ರತಿಕ್ರಿಯೆ: ''ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವುದು ಹಾಗೂ ನಮ್ಮ ಕ್ಲಿನಿಕ್​ಗಳು ಓಪನ್​ ಇರುವ ಸಮಯ ಎರಡು ಕೂಡ ಒಂದೇ ಆಗುತ್ತಿದೆ. ಇದರಿಂದ ಬಡವರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ರಾತ್ರಿಯವರೆಗೂ ನಮ್ಮ ಕ್ಲಿನಿಕ್ ಕಾರ್ಯ ನಿರ್ವಹಿಸುವಂತೆ ಸಮಯ ಬದಲಾವಣೆ ಮಾಡುವ ಬಗ್ಗೆ ಯೋಚಿಸಲಾಗಿದೆ. ರಾತ್ರಿವರೆಗೂ ಕಾರ್ಯ ನಿರ್ವಹಿಸಬೇಕಾದರೆ ಎರಡು ಶಿಫ್ಟ್ ಮಾಡಬೇಕಾಗಬಹುದು.‌ ಆಗ ಹೆಚ್ಚಿನ‌ ವೈದ್ಯರು ಬೇಕಾಗುತ್ತಾರೆ. ಈಗಾಗಲೇ ವೈದ್ಯರ ಕೊರತೆಯಿದೆ. ಅಂತಿಮವಾಗಿ ಎರಡು ಶಿಫ್ಟ್ ಮಾಡುವ ಬದಲು ಒಂದೇ ಶಿಫ್ಟ್​ನಲ್ಲಿ ಸಮಯ ಬದಲಾವಣೆ ಮಾಡುವ ಬಗ್ಗೆ ಸಮಾಲೋಚನೆ ಮಾಡಲಾಗುವುದು'' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇದನ್ನೂ ಓದಿ: ಇ-ಸ್ವತ್ತು ಯೋಜನೆಯನ್ನು ಜನಸ್ನೇಹಿಗೊಳಿಸಲು ಸುಧಾರಣೆ ಮಾಡಿ: ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

Last Updated : Aug 10, 2023, 12:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.