ಬೆಂಗಳೂರು: ಕೋವಿಡ್ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ಒಮಿಕ್ರಾನ್ ಪತ್ತೆಗೆ ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶವು ಪ್ರಮುಖವಾಗಿದೆ. ಹೀಗಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್ನಲ್ಲಿ ವರದಿಯಾಗುವ ಕೋವಿಡ್ ಸ್ಯಾಂಪಲ್ ಅನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳಿಸಲು ಸೂಚಿಸಲಾಗಿದೆ.
ಸೋಮವಾರ(ಡಿ.27) ಡಿ.06 (11 ದಿನಗಳ ವರೆಗೆ) ವರದಿಯಾಗುವ ಸಿಟಿ ವ್ಯಾಲ್ಯೂ 30ಕ್ಕಿಂತ ಕಡಿಮೆ ಇರುವ ಎಲ್ಲಾ ಕೋವಿಡ್ ಪ್ರಕರಣಗಳನ್ನು ಸೆಂಟಿನೆಲ್ ಸೈಟ್‌ಗಳ ಮೂಲಕ ಐಎನ್ಎಸ್ಎಸಿಒಜಿ(INSACOG) ಪ್ರಮಾಣಿತ ಇನ್ಟಿಮ್ (Instem) ಲ್ಯಾಬ್ಗಳಿಗೆ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಡ್ಡಾಯವಾಗಿ ಕಳುಹಿಸುವಂತೆ ಸೂಚಿಸಿದೆ.
ಮುಂದುವರೆದು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿದ ಮಾದರಿಗಳ ಮಾಹಿತಿ ಹಾಗೂ ನಂತರದ ಫಲತಾಂಶವನ್ನು ಐಹೆಚ್ಐಪಿ (IHIP) ಪೋರ್ಟಲ್‌ನಲ್ಲಿ ನಮೂದಿಸುವಂತೆ ತಿಳಿಸಲಾಗಿದೆ. ಇದನ್ನು ಖಚಿತ ಪಡಿಸಿಕೊಳ್ಳುವುದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿದೆ.
ಇದನ್ನೂ ಓದಿ: ಸರ್ಕಾರಿ ನಿಯಮಾನುಸಾರ ನೈಟ್ ಕರ್ಫ್ಯೂ: ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ