ಬೆಂಗಳೂರು : ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರೋ ವಲಸೆ ಕಾರ್ಮಿಕರನ್ನ ಅವರವರ ಊರಿಗೆ ಕಳುಹಿಸಲು ಸರ್ಕಾರ ಮುಂದಾಗಿದೆ.
![_HEALTH_ departent CONDITIONSfor migrant labours](https://etvbharatimages.akamaized.net/etvbharat/prod-images/7038283_corona.jpg)
ಜಿಲ್ಲೆಗಳಿಂದ ಜಿಲ್ಲೆಗಳಿಗೆ ಹೋಗುವ ಕೂಲಿ ಕಾರ್ಮಿಕರು, ವಲಸಿಗರಿಗೆ ಆರೋಗ್ಯ ಇಲಾಖೆ ಹಲವು ಕಂಡೀಷನ್ ಹಾಕಿದೆ. ಜಿಲ್ಲೆಯಿಂದ ಜಿಲ್ಲೆಗೆ ತೆರಳಲು ಒನ್ ಟೈಮ್ ಪಾಸ್ ನೀಡಲಾಗುತ್ತೆ. ಆ ಪಾಸ್ ಇದ್ದವರನ್ನ ಜಿಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಸ್ಕ್ರೀನಿಂಗ್ ಮಾಡಿ ಒಳಗಡೆ ಸೇರಿಸಿಕೊಳ್ಳಬೇಕು.
ಚೆಕ್ಪೋಸ್ಟ್ಗಳಲ್ಲಿ ಆಯಾ ಜಿಲ್ಲಾಡಳಿತ ಅಧಿಕಾರಿಗಳು, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇರುತ್ತಾರೆ. ಕಾರ್ಮಿಕರನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಕ್ರೀನಿಂಗ್ ಮಾಡುತ್ತಾರೆ. ಈ ವೇಳೆ ಅವರಿಗೆ ಕೆಮ್ಮು, ನೆಗಡಿ, ಜ್ವರದಂತಹ ರೋಗ ಲಕ್ಷಣಗಳಿದ್ರೆ ಅಲ್ಲೇ ಪಕ್ಕದ ಫೀವರ್ ಕ್ಲಿನಿಕ್‌ಗಳಿಗೆ ಕಳುಹಿಸಲಾಗುತ್ತೆ. ಅಲ್ಲಿ ವೈದ್ಯರು ಸ್ವಾಬ್ ಟೆಸ್ಟ್‌ಗೆ ಸೂಚಿಸಿದರೆ ರಿಪೋರ್ಟ್ ಬರುವವರೆಗೂ ಒಂದು ದಿನ ಅಲ್ಲೇ ಇರಬೇಕು.
ಒಂದು ವೇಳೆ ಪಾಸಿಟಿವ್ ಬಂದ್ರೆ ಸ್ಥಳೀಯ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತೆ. ನೆಗೆಟಿವ್ ಬಂದ್ರೆ ಎಡಗೈ ಮೇಲೆ ಸೀಲ್ ಹಾಕಿ 14 ದಿನಗಳ ಹೋಮ್ ಕ್ವಾರೆಂಟೈನ್‌ಗೊಳಪಡಿಸಲಾಗುತ್ತೆ.