ETV Bharat / state

ಕಾನೂನಾತ್ಮಕವಾಗಿ ಆಸ್ತಿ ವಿವರ ಕೇಳಿರುತ್ತಾರೆ, ಸಲ್ಲಿಸಿದರಾಯಿತು: ತಾಯಿಗೆ ಐಟಿ ನೋಟಿಸ್‌ ಬಗ್ಗೆ ಹೆಚ್‌ಡಿಕೆ

ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಮಹತ್ವ ಕೊಟ್ಟಿಲ್ಲ. ನಾವೂ ಸಹ ನಮ್ಮ ರಾಜಕೀಯ ಜೀವನದಲ್ಲಿ ದುಡ್ಡಿಗೆ ಪ್ರಾಮುಖ್ಯತೆ ಕೊಟ್ಟವರಲ್ಲ. ನಾವು ಪರಿಶುದ್ಧವಾಗಿರಬೇಕು ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

hdk
ಹೆಚ್​ಡಿಕೆ
author img

By

Published : Mar 28, 2022, 6:50 PM IST

ಬೆಂಗಳೂರು: ತಾಯಿ ಚೆನ್ನಮ್ಮ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ವಿಧಾನಸೌಧದಲ್ಲಿಂದು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ನೋಟಿಸ್ ನೀಡಿರುವ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ' ಎಂದು ಹೇಳಿದರು.

ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಮಹತ್ವ ಕೊಟ್ಟಿಲ್ಲ. ನಾವೂ ಸಹ ನಮ್ಮ ರಾಜಕೀಯ ಜೀವನದಲ್ಲಿ ದುಡ್ಡಿಗೆ ಪ್ರಾಮುಖ್ಯತೆ ಕೊಟ್ಟವರಲ್ಲ. ನಾವು ಪರಿಶುದ್ಧವಾಗಿರಬೇಕು ಅಷ್ಟೇ.

'ಕಾನೂನಾತ್ಮಕವಾಗಿ ಆಸ್ತಿ ವಿವರ ಕೇಳಿರುತ್ತಾರೆ': ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ಏನು ಉತ್ತರ ಕೊಡಬೇಕೋ ಕೊಟ್ಟರಾಯಿತು. ನನ್ನ ಸಹೋದರ ರೇವಣ್ಣ ಅವರಿಗೂ ಇದನ್ನೇ ಹೇಳಿದ್ದೇನೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ. ಆದಾಯ ತೆರಿಗೆ ಇಲಾಖೆ ಕಾನೂನಾತ್ಮಕವಾಗಿ ಆಸ್ತಿ ವಿವರ ಕೇಳಿರುತ್ತಾರೆ. ಆ ವಿವರಗಳನ್ನು ಸಲ್ಲಿಕೆ ಮಾಡಿದರಾಯಿತು ಎಂದು ಹೆಚ್‌ಡಿಕೆ ಹೇಳಿದರು.

ಇದನ್ನೂ ಓದಿ: 'ಮನೆ ಮನೆಗೆ ಗಂಗೆ 'ಎಂಬ ಕಾರ್ಯಕ್ರಮದಡಿ 97.91 ಲಕ್ಷ ನಲ್ಲಿ ಸಂಪರ್ಕ : ಸಚಿವ ಕೆ.ಎಸ್. ಈಶ್ವರಪ್ಪ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.