ETV Bharat / state

'ಜನತಾ ಮಿತ್ರ' ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ ಹೆಚ್​ಡಿಕೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಗಳವಾರ ಜನತಾ ಮಿತ್ರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದರು.

HDK who held a preliminary meeting of the Janata Mitra program
ಜನತಾ ಮಿತ್ರ ಕಾರ್ಯಕ್ರಮದ ಪೂರ್ವಭಾವಿ ಸಭೆ
author img

By

Published : Jun 21, 2022, 8:27 PM IST

ಬೆಂಗಳೂರು: ಜುಲೈ 1ರಿಂದ 17ರವರೆಗೆ 17 ದಿನಗಳ ಕಾಲ ಜನತಾ ಮಿತ್ರ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಹೆಚ್.ಡಿ. ಕುಮಾರಸ್ವಾಮಿ ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಬಸವನಗುಡಿ ವಿಧಾನಸಭೆ ಕ್ಷೇತ್ರಗಳ ಮುಖಂಡರ ಜೊತೆ ನಡೆಸಿದರು.

ಒಟ್ಟಾಗಿ ಕೆಲಸ ಮಾಡಲು ಸೂಚನೆ: ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಂಗಳವಾರ ಮೂರು ಕ್ಷೇತ್ರಗಳ ಮುಖಂಡರ ಸಭೆಯನ್ನು ಪ್ರತ್ಯೇಕವಾಗಿ ನಡೆಸಿದ ಹೆಚ್​ಡಿಕೆ, ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್​ಇಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು. ನನ್ನನ್ನು ಒಳಗೊಂಡಂತೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲ ಪ್ರಮುಖರು ತಮ್ಮ ನೇತೃತ್ವದ ತಂಡಗಳ ಮೂಲಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದೇವೆ.

HDK who held a preliminary meeting of the Janata Mitra program

ಈ ವಾಹನಗಳು ಬರುವ ಮುನ್ನ ಆಯಾ ಕ್ಷೇತ್ರಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆ-ಮನೆಗೂ ಮುಟ್ಟಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ ಎನ್ನಲಾಗ್ತಿದೆ. ಜನತಾ ಮಿತ್ರ ವಾಹನ ಬಂದಾಗ ಏನೆಲ್ಲಾ ಮಾಡಬೇಕು, ಜನರಿಗೆ ಯಾವೆಲ್ಲ ಸಂದೇಶ ನೀಡಬೇಕು? ಎಂಬ ಬಗ್ಗೆಯೂ ಸೂಚನೆಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿಗಳು, ಈ ಕಾರ್ಯಕ್ರಮದ ಮುಖ್ಯಾಂಶಗಳನ್ನು ವಿವರಿಸಿದರು.

ಜನತಾ ಮಿತ್ರ ಉದ್ದೇಶ: 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನಾವು ನಗರದ ಜನತೆಗೆ ಮನದಟ್ಟು ಮಾಡಿಕೊಡಬೇಕು. ಅಲ್ಲದೆ, ಪ್ರಾದೇಶಿಕ ಆಸ್ಮಿತೆಯ ಪಕ್ಷವಾದ ಜಾತ್ಯತೀತ ಜನತಾದಳವು ಈ ಯಾತ್ರೆಯ ಮೂಲಕ ಜನರಿಂದ ಭವಿಷ್ಯದ ಸರ್ಕಾರ ಹೇಗೆ ಕೆಲಸ ಮಾಡಬೇಕು? ಜನರ ನಿರೀಕ್ಷೆಗಳೇನು? ಇತ್ಯಾದಿ ಅಂಶಗಳ ಬಗ್ಗೆ ನೇರವಾಗಿ ಜನತೆಯಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಹೆಚ್​ಡಿಕೆ ತಿಳಿಸಿದರು. ‌

ಜನರಲ್ಲಿ ವಿಶ್ವಾಸ ಮೂಡಿಸಬೇಕು: ಎಲ್ಲರಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯ, ಕುಡಿಯುವ ನೀರು, ಜಲಮೂಲಗಳ ಸಂರಕ್ಷಣೆ, ಕೆರೆ ಕಟ್ಟೆಗಳ ರಕ್ಷಣೆ, ತ್ಯಾಜ್ಯ ನೀರಿನ ಸಮರ್ಪಕ ನಿರ್ವಹಣೆ, ಸುಗಮ ಸಂಚಾರ, ಸ್ವಚ್ಛತೆ, ನೈರ್ಮಲ್ಯ, ಸಮರ್ಪಕ ಕಸ ವಿಲೇವಾರಿ, ಆರ್ಥಿಕವಾಗಿ ದುರ್ಬಲರಾಗಿರುವವರ ಸಬಲೀಕರಣ ಇತ್ಯಾದಿ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಲು ನಿರ್ಧರಿಸಿದ್ದು, ಈ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜನತಾ ಮಿತ್ರ ವಾಹನ ಹೇಗಿರುತ್ತದೆ?: ಜನತಾ ಮಿತ್ರ ವಾಹನಗಳನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಈ ವಾಹನದಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ಆ ಪರದೆಗಳ ಮೂಲಕ ಈವರೆಗೆ ಜನತಾ ಸರ್ಕಾರಗಳು ಬೆಂಗಳೂರು ನಗರಕ್ಕೆ ನೀಡಿರುವ ಕೊಡುಗೆ ಮಾಹಿತಿಯನ್ನು ವೀಕ್ಷಣೆ ಮಾಡಬಹುದು ಎಂದು ವಿವರಿಸಿದರು.

ಜನತಾ ಮಿತ್ರದಲ್ಲಿ ಅಭಿಪ್ರಾಯ ಸಂಗ್ರಹ ಹೇಗೆ?: ಸಮಾಜದ ಎಲ್ಲ ವರ್ಗದ ಜನರೂ ಸುನಾಯಾಸವಾಗಿ ಭವಿಷ್ಯದ ಸರ್ಕಾರ ಹೇಗಿರಬೇಕು? ಏನೆಲ್ಲ ಕೆಲಸಗಳನ್ನು ಮಾಡಬೇಕು ಎಂಬ ಬಗ್ಗೆ ಮುಕ್ತ ಅಭಿಪ್ರಾಯ ನೀಡಬಹುದು. ಆ ಅಭಿಪ್ರಾಯಗಳನ್ನು ಸಾರ್ವಜನಿಕರು ಕಾಗದದಲ್ಲಿ ಬರೆದು ವಾಹನದಲ್ಲಿರುವ 'ಜನತಾ ಮಿತ್ರ; ಬಾಕ್ಸ್‌'ನಲ್ಲಿ ಹಾಕಬಹುದು. ಜತೆಗೆ, ವಾಹನದಲ್ಲಿಯೇ ಒಂದು ಪೋಡಿಯಂ ಇದ್ದು, ಅದರಲ್ಲಿ ಒಂದು ಟ್ಯಾಬ್‌ ಅಡಕವಾಗಿರುತ್ತದೆ. ಅದರಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಬರೆದು ಸೇವ್‌ ಮಾಡಬಹುದು.

ಇದನ್ನೂ ಓದಿ: ಚುನಾವಣೆ ಹತ್ತಿರ ಬರ್ತಿದ್ದಂಗೆ ಮೋದಿಗೆ ಕರ್ನಾಟಕ ನೆನಪಾಗಿದೆ.. ಹೆಚ್​.ಡಿ. ಕುಮಾರಸ್ವಾಮಿ

ಹಾಗೆಯೇ, ವಾಹನಕ್ಕೆ ಮಾಡಲಾಗಿರುವ ಕಲಾತ್ಮಕ ವಿನ್ಯಾಸದ ಕಂಬಗಳ ಮೇಲೆ ಕ್ಯೂ ಆರ್‌ ಕೋಡ್‌ ಕೂಡ ಇದ್ದು, ಮೊಬೈಲ್‌ ಮೂಲಕ ಅದನ್ನು ಸ್ಕ್ಯಾನ್‌ ಮಾಡಿ ಅಭಿಪ್ರಾಯವನ್ನು ದಾಖಲು ಮಾಡಬಹುದು. ಹೀಗೆ ತಂತ್ರಜ್ಞಾವನ್ನು ಬಳಕೆ ಮಾಡಿಕೊಂಡು ಹಗಲಿರಳು ಸಂಚಾರ ಮಾಡುವುದಕ್ಕೆ ಅನುವಾಗುವಂತೆ ವಾಹನವನ್ನು ವಿನ್ಯಾಸ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ವಿಶೇಷ ತಂಡಗಳ ರಚನೆ: ಹದಿನೇಳು ದಿನಗಳ ಕಾಲ ನಡೆಯಲಿರುವ ಜನತಾ ಮಿತ್ರ ಯಾತ್ರೆಯಲ್ಲಿ ಪ್ರತಿ ವಾಹನದ ನೇತೃತ್ವವಹಿಸಲು ಮಾಜಿ ಮುಖ್ಯಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ಶಾಸಕರು, ಹಿರಿಯ ಮುಖಂಡರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಿದ್ದಾರೆ. ತಂಡದ ನೇತೃತ್ವ ವಹಿಸಿರುವವರು ಜನತಾಮಿತ್ರ ವಾಹನವನ್ನು ಮುನ್ನಡೆಸಲಿದ್ದು, ಅವರವರಿಗೆ ನಿಗದಿ ಮಾಡಲಾದ ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿರುವ ಅಭಿಪ್ರಾಯ ಸಂಗ್ರಹ, ಸಭೆ, ಜಾಥಾ, ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಹೊಣೆಯನ್ನು ವಹಿಸಲಾಗಿದೆ ಎಂದು ತಿಳಿಸಿದರು.

ಬೃಹತ್‌ ಸಮಾವೇಶ: ಜುಲೈ 17ರಂದು ಜನತಾ ಮಿತ್ರ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಆ ದಿನವೇ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.