ETV Bharat / state

ಯಾರ್ಯಾರು ಏನೇನ್ ಬಿಸ್ನೆಸ್ ಮಾಡಿದ್ದಾರೆ ಅನ್ನೋದನ್ನು ಸದನದಲ್ಲಿ ಬಿಚ್ಚಿಡುತ್ತೇನೆ: ಹೆಚ್‌ಡಿಕೆ

ಜೆಡಿಎಸ್​ ವಿರುದ್ಧ ವಿಪಕ್ಷಗಳ ಟೀಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದರು.

HD Kumarswamy
HD Kumarswamy
author img

By

Published : Feb 16, 2023, 7:21 PM IST

ಬೆಂಗಳೂರು: ಜೆಡಿಎಸ್ ವಿರುದ್ಧ ನೀಡಿರುವ ಟೀಕೆಗಳಿಗೆ ಸದನದಲ್ಲಿ ಉತ್ತರ ಕೊಡುವುದರ ಜೊತೆಗೆ ಯರ್ಯಾರು ಏನೇನು ಬಿಸ್ನೆಸ್ ಮಾಡಿದ್ದಾರೆ ಎಂಬುದನ್ನು ಬಿಚ್ಚಿಡುವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ರಾಜಕೀಯ ಬೆಳವಣಿಗೆಗೆ ಬಗ್ಗೆ ಚರ್ಚೆಯಾಗಿದೆ. ಆಡಳಿತ ಪಕ್ಷದ ಶಾಸಕ ಸಿ.ಟಿ.ರವಿ ಸೇರಿದಂತೆ ಯಾರ್ಯಾರು ಏನು ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ಅವರಿಗೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದರು.

ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಅಧಿವೇಶನಕ್ಕೆ ಬರಲಾಗಿರಲಿಲ್ಲ. ಸದನದಲ್ಲಿ ರಾಜ್ಯದ ಸಮಸ್ಯೆಗಿಂತ ಹೆಚ್ಚಾಗಿ ದೇಶ, ವಿದೇಶಗಳ ಚರ್ಚೆ ನಡೆಸಲಾಗಿದೆ. ಬ್ಯುಸಿನೆಸ್ ಮಾಡಲು ಯಾರಾದರು ಬರಲಿ ಎಂದು ಕಾಯುತ್ತಿರುತ್ತಾರೆ ಎಂದು ಆರೋಪ ಮಾಡಿದ್ದಾರೆ. ಅವರ ನಾಯಕರ ಬಗ್ಗೆ ಯರ್ಯಾರು ಏನೇನು ಮಾತನಾಡಿದ್ದಾರೆ ಎಂಬುದನ್ನು ಸದನದ ಗಮನಕ್ಕೆ ತರುತ್ತೇನೆ. ಕೆಜೆಪಿಯಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏನು ಆರೋಪ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ನ ಕೇಂದ್ರ ಸ್ಥಾನವೇ ನಾನು. ಬಿಜೆಪಿಯ ಬಿ ಟೀಮ್ ಎಂದು ಒಬ್ಬರು ಮತ್ತೊಬ್ಬರು ಕಾಂಗ್ರೆಸ್‍ನ ಬಿ ಟೀಂ ಎಂದು ಮತ್ತೊಬ್ಬರು ಆರೋಪಿಸುತ್ತಾರೆ. ವಿರೋಧ ಪಕ್ಷದ ನಾಯಕರು ಅಧಿಕಾರ ಹಸ್ತಾಂತರ ಮಾಡದೇ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣ ಎಂದು ಹೇಳಿರುವುದಾಗಿ ತಿಳಿಸಿದರು.

ಶೃಂಗೇರಿ ಮಠದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ಅಲ್ಲಿ ಬೇರೆ ರೀತಿಯ ಸಂಪ್ರದಾಯವಿದೆ. ಟಿಪ್ಪು, ಸಾವರ್ಕರ್ ಸೇರಿದಂತೆ ಹಲವರು ಅಮರರಾಗಿದ್ದಾರೆ. ಆದರೆ, ಜೀವಂತವಾಗಿರುವ ನಮ್ಮ ಜನಗಳ ಬಗ್ಗೆ ಚರ್ಚೆಯಾಗಬೇಕಲ್ಲವೆ ಎಂದು ಪ್ರಶ್ನಿಸಿದ ಅವರು, ಸಚಿವ ಅಶ್ವಥನಾರಾಯಣ ಅವರು ಮಾತನಾಡುವ ಹುಮ್ಮಸ್ಸಿನಲ್ಲಿ ಹೃದಯದಲ್ಲಿರುವುದನ್ನು ಹೊರಗೆ ಹಾಕಿದ್ದಾರೆ. ಟಿಪ್ಪು ಶೃಂಗೇರಿ ದೇವಾಲಯಕ್ಕೆ ರಕ್ಷಣೆ ಕೊಟ್ಟಿದ್ದಾರೆ. ಈ ನಾಡಿಗೆ ರೇಷ್ಮೆ ತಂದಿದ್ದಾರೆ. ಇದನ್ನು ಹೇಳಬೇಕಲ್ಲವೆ. ಬಿಜೆಪಿ ಅವರು ಟಿಪ್ಪು ವಿಚಾರದಲ್ಲಿ ವಿವಾದಾತ್ಮಕ ವಿಚಾರಗಳ ಬಗ್ಗೆ ಬಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಯಾರಿಗೂ ಚಿತ್ರಹಿಂಸೆ ಕೊಡಬಾರದು. ಹಾಗೆ ಮಾಡಿದರೆ ವಿಕೃತ ಮನಸ್ಥಿತಿ ಎಂದರು.

ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ: ಪಂಚರತ್ನ ರಥಯಾತ್ರೆ 70 ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ. ಪ್ರತಿ ಕ್ಷೇತ್ರದಲ್ಲಿ 30 ರಿಂದ 40 ಹಳ್ಳಿಯ ಪರಿಸ್ಥಿತಿಯ ಚಿತ್ರಣವೇ ನಮಗೆ ರಿಪೋರ್ಟ್ ಕಾರ್ಡ್. ಸದನಕ್ಕೆ ಬಂದರೆ ಮುಖ್ಯಮಂತ್ರಿ ಸಚಿವರಾಗುತ್ತಾರೆ ಎಂದು ಆಡಳಿತ ಪಕ್ಷದವರೇ ಹೇಳಿದ್ದಾರೆ ಎಂದ ಮೇಲೆ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಜೆಡಿಎಸ್ ಗುರಿಯಾಗಿಸಿ ಮಾತುನಾಡುತ್ತಿರುವುದೇ ಬಿಜೆಪಿಗೆ ಜೆಡಿಎಸ್ ಎದುರಾಳಿ ಎಂಬುದನ್ನು ಸಾಬೀತುಪಡಿಸುತ್ತಿದೆ. ಅಮಿತ್ ಶಾ ಹೇಳಿಕೆಯಿಂದ ಸಕಾರಾತ್ಮಕ ಹಾಗೂ ನಕಾರಾತ್ಮಕ ವಿಚಾಚರ ಬೇಕಿಲ್ಲ. ಬಡವರ, ಜನರ ಸಮಸ್ಯೆ ಪರಿಹಾರವಾಗಬೇಕು ಎಂದು ಹೇಳಿದರು. ಇದೇ ವೇಳೆ, ಸದ್ಯದಲ್ಲೇ ಹಾಸನ ಸೇರಿದಂತೆ ಉಳಿದ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು. ಬಜೆಟ್ ಮಂಡನೆಯ ನಂತರ ಮತ್ತೆ ಪಂಚರತ್ನ ರಥಯಾತ್ರೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಮನಗರದಲ್ಲಿನ ರಾಜೀವ್‍ಗಾಂಧಿ ವಿಶ್ವವಿದ್ಯಾಲಯಕ್ಕೆ 400 ಕೋಟಿ ರೂ ಟೆಂಡರ್ ಪ್ರಕ್ರಿಯೆ 24 ಗಂಟೆಯಲ್ಲಿ ಪ್ರಾರಂಭಿಸಿದ್ದಾರೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾಡಿರುವ ಟೆಂಡರ್ ಪ್ರಕರಣದ ಆರೋಪದಲ್ಲಿ ಇದು ಒಂದು. ರಾಜೀವ್‍ಗಾಂಧಿ ವಿವಿ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದವರು ಬಿಜೆಪಿಯವರು. 15 ವರ್ಷಗಳ ನನ್ನ ಕನಸು ಈಗಲಾದರೂ ನನಸಾಗುತ್ತಿದೆ ಎಂಬುದೇ ಸಮಾಧಾನ ಎಂದರು.

ಇದನ್ನೂ ಓದಿ: ಹಳ್ಳಿಹಕ್ಕಿ ಪರ ಕಾಂಗ್ರೆಸ್ ಸದಸ್ಯ ಪ್ರಶ್ನೆ ಕೇಳಿದ್ದಕ್ಕೆ ಸಿಎಂ ಉದ್ಘಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.