ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ 14 ತಿಂಗಳ ಮೈತ್ರಿ ಸರ್ಕಾರ ಇಂದು ಪತನಗೊಂಡಿದೆ. ವಿಶ್ವಾಸಮತಯಾಚನೆಗೂ ಮುನ್ನ ಬರೋಬ್ಬರಿ 2ಗಂಟೆಗಳ ಕಾಲ ಕುಮಾರಸ್ವಾಮಿ ಮಾತನಾಡಿದರು. ಈ ವೇಳೆ ತಮ್ಮ ಆಡಳಿತ ಅವಧಿಯಲ್ಲಿ ಮಾಡಿರುವ ಅನೇಕ ಅಭಿವೃದ್ಧಿ ಪರ ಕೆಲಸಗಳನ್ನ ರಾಜ್ಯದ ಜನರ ಮುಂದೆ ತೆರೆದಿಟ್ಟರು. ವಿಶ್ವಾಸಮತಯಾಚನೆ ವೇಳೆ ವಿಶ್ವಾಸಮತ ನಿರ್ಣಯದ ಪರವಾಗಿ 99 ಮತಗಳು, ವಿರುದ್ಧವಾಗಿ 105 ಮತಗಳು ಬಂದವು. ಹೆಚ್ ಡಿ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸ ಮತ ಪ್ರಸ್ತಾಪ ಬಿದ್ಹೋಗಿದೆ. ಹಾಗಾಗಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಕುರ್ಚಿ ಕಳೆದುಕೊಳ್ಳಬೇಕಾಯಿತು.
-
HD Kumaraswamy walks out of the Karnataka Assembly, Congress-JD(S) government lost trust vote in the assembly, today. pic.twitter.com/QFooJqLZOR
— ANI (@ANI) July 23, 2019 " class="align-text-top noRightClick twitterSection" data="
">HD Kumaraswamy walks out of the Karnataka Assembly, Congress-JD(S) government lost trust vote in the assembly, today. pic.twitter.com/QFooJqLZOR
— ANI (@ANI) July 23, 2019HD Kumaraswamy walks out of the Karnataka Assembly, Congress-JD(S) government lost trust vote in the assembly, today. pic.twitter.com/QFooJqLZOR
— ANI (@ANI) July 23, 2019
ವಿಶ್ವಾಸಮತಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸೋಲು ಕಾಣುತ್ತಿದ್ದಂತೆ ಹೆಚ್ಡಿಕೆ ಸದನದಿಂದ ನಿರಾಸೆಯಿಂದ ಹೊರನಡೆದರು. ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಬಿಜೆಪಿ ನಾಯಕರು ಹಾಗೂ ಯಡಿಯೂರಪ್ಪ ಸದನದೊಳಗೆ ವಿಕ್ಟರಿ ಸಿಂಬಲ್ ತೋರಿಸಿದರು.