ಬೆಂಗಳೂರು: ಸದನದಲ್ಲಿ ವಿಶ್ವಾಸಮತ ಕಳೆದುಕೊಳ್ಳುತ್ತಿದ್ದಂತೆ ರಾಜಭವನಕ್ಕೆ ತೆರಳಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದರು. ರಾಜ್ಯಪಾಲ ವಜೂಬಾಯಿ ವಾಲಾ ರಾಜೀನಾಮೆ ಅಂಗೀಕರಿಸಿದ್ದಾರೆ.
ಸುಮಾರು 14 ತಿಂಗಳ ಕಾಲ ಆಡಳಿತ ನೀಡಿದ್ದ ಕುಮಾರಸ್ವಾಮಿ, ಸದನದಲ್ಲಿ ತಮ್ಮ ಬಹುಮತ ಸಾಬೀತು ಮಾಡುವಲ್ಲಿ ಹೆಚ್ಡಿಕೆ ನೇತೃತ್ವದ ದೋಸ್ತಿ ಸರ್ಕಾರ ವಿಫಲಗೊಂಡಿತ್ತು. ಹೀಗಾಗಿ ವಿಧಾನಸಭೆಯಿಂದ ನೇರವಾಗಿ ರಾಜ್ಯಪಾಲರನ್ನ ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
-
Karnataka Governor, Vajubhai Vala accepts HD Kumaraswamy's resignation. pic.twitter.com/AVuD082In4
— ANI (@ANI) July 23, 2019 " class="align-text-top noRightClick twitterSection" data="
">Karnataka Governor, Vajubhai Vala accepts HD Kumaraswamy's resignation. pic.twitter.com/AVuD082In4
— ANI (@ANI) July 23, 2019Karnataka Governor, Vajubhai Vala accepts HD Kumaraswamy's resignation. pic.twitter.com/AVuD082In4
— ANI (@ANI) July 23, 2019
ಈ ವೇಳೆ ಡಿಕೆ ಶಿವಕುಮಾರ್,ಹೆಚ್ಡಿ ರೇವಣ್ಣ, ಜಿ ಪರಮೇಶ್ವರ್ ಸೇರಿದಂತೆ ಅನೇಕ ಜೆಡಿಎಸ್-ಕಾಂಗ್ರೆಸ್ನ ಶಾಸಕರು ಉಪಸ್ಥಿತರಿದ್ದರು.
ವಿಧಾನಸಭೆಯಲ್ಲಿ ಕಳೆದ ಗುರುವಾರ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತ ನಿರ್ಣಯದ ಮೇಲೆ ನಾಲ್ಕು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆ ನಡೆಯಿತು. ಇವತ್ತು 2 ಗಂಟೆಗಳ ಕಾಲ ಭಾಷಣ ಮಾಡಿದ ಕುಮಾರಸ್ವಾಮಿ, ಬಳಿಕ ವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವಂತೆ ಕೋರಿದರು. ಧ್ವನಿಮತದ ನಂತರ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಮತ ವಿಭಜನೆಗೆ ಒತ್ತಾಯಿಸಿದರು. ಬಳಿಕ ಕೋರಂ ಬೆಲ್ ಹೊಡೆದ ನಂತರ ಪರ ವಿರುದ್ಧ ಶಾಸಕರ ತಲೆ ಎಣಿಕೆ ನಡೆಯಿತು. ಇಲ್ಲಿ ನಿರ್ಣಯದ ಪರವಾಗಿ 99 ಮತಗಳು, ವಿರುದ್ಧವಾಗಿ 105 ಮತಗಳು ಬಂದವು. ಈ ಮೂಲಕ ಅಧಿಕೃತವಾಗಿ ಸಮ್ಮಿಶ್ರ ಸರ್ಕಾರ ಪತನವಾಯ್ತು.