ಬೆಂಗಳೂರು : ತುಮಕೂರು ಫ್ಲೈಓವರ್ ಕಳಪೆ ಕಾಮಗಾರಿಯಿಂದ ಸಮಸ್ಯೆಯಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ವಿಧಾನಸೌಧಲ್ಲಿ ಮಾತನಾಡಿದ ಅವರು, ಫ್ಲೈಓವರ್ ಕಳಪೆ ಕಾಮಗಾರಿಯಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಶೀಘ್ರವಾಗಿ ಕಾಮಗಾರಿ ಮಾಡಬೇಕು. ಸದನದಲ್ಲಿ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದರು.
ಸರ್ಕಾರ ಹೋಗುತ್ತಿರುವ ವೇಗ ನೋಡಿದ್ರೆ ಇನ್ನು ಎಷ್ಟು ದಿನ ಆಗತ್ತೋ ಏನೋ. ಅದರಿಂದಾಗುತ್ತಿರುವ ಸಮಸ್ಯೆಯಿಂದ ಜನ ಎಲ್ಲಾ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದು ಒಂದು ಭಾಗವಾದರೆ, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂದು ಹೆಚ್ಡಿಕೆ ಒತ್ತಾಯಿಸಿದರು.
ಇನ್ನು ನಿರ್ಧಾರವಾಗಿಲ್ಲ : ಪೀಣ್ಯ ಫ್ಲೈಓವರ್ ಸಂಪೂರ್ಣ ನೆಲಸಮ ಮಾಡಬೇಕೋ ಅಥವಾ ಪಿಲ್ಲರ್ ಮಾತ್ರ ಬದಲಾವಣೆ ಮಾಡಬೇಕೋ ಎಂಬುವುದು ಇನ್ನೂ ನಿರ್ಧಾರವಾಗಿಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಪ್ರಮುಖ ಬ್ರಿಡ್ಜ್. ರಾಜ್ಯದ ಮುಕ್ಕಾಲು ಭಾಗ ವಾಹನ ಸಂಚಾರ ಅಲ್ಲೇ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಎರಡು ಪಿಲ್ಲರ್ಗಳ ಸಮಸ್ಯೆ ಆಗಿತ್ತು. ಅದಷ್ಟು ಬೇಗ ಸಮಸ್ಯೆ ಮುಗಿಯುತ್ತದೆ ಎಂದುಕೊಂಡಿದ್ದೆವು. ಆದ್ರೆ, ಸಮಸ್ಯೆ ಬಗೆಹರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.
ಸುಮಾರು ಎರಡು ತಿಂಗಳಿಂದ ಸಮಸ್ಯೆಯಾಗಿದೆ. ಮುಖ್ಯಮಂತ್ರಿ ಕೂಡ ಹೇಳಿದ್ದಾರೆ. ಇದರ ಬಗ್ಗೆ ಟೆಕ್ನಿಕಲ್ನವರು ಪರಿಶೀಲನೆ ಮಾಡಬೇಕಿದೆ. ಹೊಸದಾಗಿ ನಿರ್ಮಾಣ ಮಾಡುವ ಬಗ್ಗೆ ಚಿಂತನೆಯಿದೆ. ಸಿಎಂ ಗಡ್ಕರಿಯವರಿಗೂ ಪತ್ರ ಬರೆದಿದ್ದು, ಸಮಸ್ಯೆ ಪರಿಹಾರದತ್ತ ಗಮನ ಹರಿಸುತ್ತೇವೆ ಎಂದು ತಿಳಿಸಿದರು.