ETV Bharat / state

ಖಾಸಗಿ ಕಂಪನಿಗಳು ಸಾಂಖ್ಯಿಕ ದತ್ತಾಂಶ ಸಲ್ಲಿಸದಿರುವುದು ದೇಶದ ನೀತಿ ನಿರೂಪಣೆ ಮೇಲೆ ಪರಿಣಾಮ ಬೀರಲಿವೆ: ಹೈಕೋರ್ಟ್

ಖಾಸಗಿ ಕಂಪನಿಯ ವಿರುದ್ಧ ಕೇಂದ್ರ ಸರ್ಕಾರ ದಾಖಲಿಸಿದ್ದ ಕ್ರಿಮಿನಲ್ ಅರ್ಜಿ ರದ್ದಿಗೆ ಹೈಕೋರ್ಟ್​ ನಿರಾಕರಣೆ

ಹೈಕೋರ್ಟ್
ಹೈಕೋರ್ಟ್
author img

By

Published : Aug 1, 2023, 6:55 AM IST

Updated : Aug 1, 2023, 2:19 PM IST

ಬೆಂಗಳೂರು: ಸಾಂಖ್ಯಿಕ ದತ್ತಾಂಶ ಸಲ್ಲಿಸದಿರುವುದು ದೇಶದ ನೀತಿ ನಿರೂಪಣೆ ಮೇಲೆ ಮತ್ತು ಆರ್ಥಿಕ ಅಭಿವೃದ್ಧಿ ಮೇಲೆ ಪರಿಣಾಮಗಳನ್ನು ಬೀರಲಿವೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಖಾಸಗಿ ಕಂಪನಿಯ ವಿರುದ್ಧ ಕೇಂದ್ರ ಸರ್ಕಾರ ದಾಖಲಿಸಿದ್ದ ಕ್ರಿಮಿನಲ್ ಅರ್ಜಿ ರದ್ದು ಗೊಳಿಸಿಲು ನಿರಾಕರಿಸಿದೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಮೆಸರ್ಸ್ ಮಸ್ತೂರ್ಲಾಲ್ ಪ್ರವೈಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜಾಗತೀಕರಣ, ಕೈಗಾರಿಕೀಕರಣ ಮತ್ತು ಸರಳೀಕರಣ ಸವಾಲುಗಳನ್ನು ಎದುರಿಸಲು ಕೈಗಾರಿಕಾ ವಲಯದ ಅಭಿವೃದ್ಧಿಗೆ ಅಗತ್ಯ ನೀತಿ ನಿರೂಪಣೆಗಳನ್ನು ಮಾಡುವ ಉದ್ದೇಶದಿಂದ ಸಾಂಖ್ಯಿಕ ಸಂಗ್ರಹ ಕಾಯಿದೆ 2008 ಜಾರಿಗೊಳಿಸಲಾಗಿದೆ. ಹಾಗಾಗಿ ಆರ್ಥಿಕ ನೀತಿಗಳನ್ನು ರೂಪಿಸಲು ದತ್ತಾಂಶ ಸಂಗ್ರಹ ಅತ್ಯಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಕಂಪನಿ ತನ್ನ ಮಾಹಿತಿಯನ್ನು ಒದಗಿಸದೇ ಇರುವುದರಿಂದ ರಾಷ್ಟ್ರದ ಆರ್ಥಿಕ ನೀತಿ ನಿರೂಪಣೆಗಳ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೇ, ಅದು ದೇಶದ ಅಭಿವೃದ್ಧಿ ಗುರಿಗಳ ಸಾಧನೆಗೂ ಅಡ್ಡಿಯಾಗಲಿದೆ. ಆದ್ದರಿಂದ ಸಾಂಖ್ಯಿಕ ದತ್ತಾಂಶ ದೇಶದ ಆರ್ಥಿಕ ನೀತಿಯ ಜೀವರಕ್ತವಿದ್ದಂತೆ ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಜವಳಿಗೆ ಅಗತ್ಯವಾದ ತಾಂತ್ರಿಕ ಘಟಕಗಳ ಉತ್ಪಾದನೆಯಲ್ಲಿ ತೊಡಗಿರುವ ಮೆಸರ್ಸ್ ಮಸ್ತೂರ್ಲಾಲ್ ಪ್ರವೈಟ್ ಲಿಮಿಟೆಡ್ 2010-11ನೇ ಸಾಲಿನಲ್ಲಿ ತನ್ನ ಸಾಂಖ್ಯಿಕ ದತ್ತಾಂಶ ಸಲ್ಲಿಸಿರಲಿಲ್ಲ. ಆಗ ಕೇಂದ್ರ ಸರ್ಕಾರ ನೋಟಿಸ್ ನೀಡಿತ್ತು. ನಂತರ ಕಂಪನಿ 2013ರಲ್ಲಿ 6 ಸಾವಿರ ರೂ. ದಂಡ ಪಾವತಿಸಿ ಕ್ಷಮೆ ಕೋರಿತ್ತು. ಆದರೆ, ಅಗತ್ಯ ಸಾಂಖ್ಯಿಕ ಮಾಹಿತಿಯನ್ನು ಒದಗಿಸಿರಲಿಲ್ಲ. ಹಾಗಾಗಿ 2016ರಲ್ಲಿ ಮತ್ತೆ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಿದ್ದ ಕೇಂದ್ರ ಸರ್ಕಾರ ಸಾಂಖ್ಯಿಕ ಸಂಗ್ರಹ ಕಾಯಿದೆ 2008ರ ಸೆಕ್ಷನ್ 15(2), 19,22 ಮತ್ತು 23 ರಡಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ಹೂಡಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.

ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಿ ಅರ್ಜಿ ವಿಚಾರಣೆ ಮುಂದೂಡಿಕೆ

ನಾಡಗೀತೆ ಹಾಡುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಸಂಗೀತ ತಜ್ಞರನ್ನು ಕರೆಸಿ ನ್ಯಾಯಾಲಯಕ್ಕೆ ನೆರವಾಗಲು ಸಹಕರಿಸುವಂತೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ದಾಟಿಯಲ್ಲಿ 2 ನಿಮಿಷ 30 ಸೆಕೆಂಡ್​​​​​​ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಮುಂದುವರಿದ ಕಾಮಗಾರಿಗಳಿಗೆ ತಡೆ ಹಿಡಿಯಲಾಗಿದ್ದ ಅನುದಾನ ಬಿಡುಗಡೆಗೆ ಸರ್ಕಾರ ಆದೇಶ

Last Updated : Aug 1, 2023, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.