ಬೆಂಗಳೂರು: ಪತಿಯನ್ನು ಪುಂಡಪೋಕರಿ ಎಂದು ನಿಂದಿಸಿ ಹಾಗೂ ಪದೇ ಪದೆ ಕರೆ ಮಾಡಿ ಕಿರುಕುಳ ನೀಡುವ ಮೂಲಕ ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಡಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಜಮೀನು ವಿವಾದದ ಸಂಬಂಧ ಮಹಿಳೆಯೊಬ್ಬರ ಪತಿಯನ್ನು ಆರೋಪಿ ಶ್ರೀನಿವಾಸ ರಾಜು ಎಂಬಾತ ಮಾಧ್ಯಮಗಳ ಮುಂದೆ 'ಪುಂಡ ಪೋಕರಿ' ಎಂದು ನಿಂದಿಸಿದ್ದರು. ಇದರಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಶ್ರೀನಿವಾಸ ರಾಜು ವಿರುದ್ಧ ಯಲಹಂಕ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠ ಆದೇಶಿಸಿದೆ.
ಇದನ್ನೂ ಓದಿ: ಡ್ರಗ್ಸ್ ದಂಧೆ ಭೇದಿಸಿದ NCB: 9 ಮಂದಿ ಆರೋಪಿಗಳ ಬಂಧನ, 34.79 ಕೆಜಿ ಹೆರಾಯಿನ್ ಜಪ್ತಿ
ಅಲ್ಲದೇ, ಪುಂಡ ಪೋಕರಿ ಎಂದು ಕರೆದರೆ ಅದು ಆತ್ಮಹತ್ಯೆ ಪ್ರಚೋದನೆಯಾಗುವುದಿಲ್ಲ ಎಂಬ ಅರ್ಜಿದಾರರ ವಾದ ತಿರಸ್ಕರಿಸಿರುವ ಹೈಕೋರ್ಟ್, ಶಬ್ದಗಳ ಗ್ರಹಿಕೆ ವ್ಯಕ್ತಿಗಳ ನಡುವೆ ವಿಭಿನ್ನವಾಗಿರುತ್ತದೆ. ಕೆಲವರು ಬೈಗುಳಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಕೆಲ ಸೂಕ್ಷ್ಮ ಮನಸ್ಸಿನವರು ಅದನ್ನೇ ತೀರಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.