ETV Bharat / state

ಬಡಾವಣೆಗಳ ಎಲ್ಲ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ದಾಖಲಿಸಲು ಬಿಡಿಎಗೆ ಹೈಕೋರ್ಟ್​ ಸೂಚನೆ - etv bharat kannada

ಬಿಡಿಎ ಮಾಹಿತಿ ಹಕ್ಕು ಕಾಯಿದೆಯಡಿ ಬರಲಿದೆ. ಸಂಸ್ಥೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ದಾಖಲಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಹೈಕೋರ್ಟ್ ತಿಳಿಸಿದೆ.

hc-instruct-to-record-all-information-of-bda-layout-on-website
ಬಿಡಿಎ ಬಡಾವಣೆಗಳ ಎಲ್ಲ ಮಾಹಿತಿ ವೆಬ್​ಸೈಟ್​ನಲ್ಲಿ ದಾಖಲಿಸಲು ಹೈಕೋರ್ಟ್​ ಸೂಚನೆ
author img

By

Published : Sep 11, 2022, 1:30 PM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸುವ ಎಲ್ಲ ಬಡಾವಣೆಗಳ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ತನ್ನ ವೆಬ್​ಸೈಟ್​ನಲ್ಲಿ ದಾಖಲಿಸುವಂತೆ ಹೈಕೋರ್ಟ್​ ನಿರ್ದೇಶನ ನೀಡಿದೆ.

ಬಿಡಿಎ ನಿರ್ಮಿಸುವ ಬಡಾವಣೆಗಳನ್ನು ಆನ್​ಲೈನ್​ನಲ್ಲಿ ಲಭ್ಯವಾಗುವಂತೆ ಸೂಚನೆ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಡಿಎ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರಿದ್ದ ದ್ವಿಸದಸ್ಯ ಪೀಠ, ಎಲ್ಲ ದಾಖಲೆಗಳ ವಿವರವನ್ನು ವೆಬ್​ಸೈಟ್​ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದಿದೆ. ಅಲ್ಲದೆ, ಈ ಪ್ರಕರಣವನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳುವಂತೆ ಹೈಕೋರ್ಟ್​ನ ರಿಜಿಸ್ಟ್ರಾರ್​ ಅವರಿಗೆ ನ್ಯಾಯಪೀಠ ಇದೇ ವೇಳೆ ಸೂಚನೆ ನೀಡಿದೆ.

ಯಾವ ಅಂಶ ದಾಖಲಿಸಬೇಕು?: ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿದ ಭೂಮಿಯ ಒಟ್ಟು ವಿಸ್ತೀರ್ಣ(ಗ್ರಾಮಗಳ ನಕ್ಷೆ, ಗೂಗಲ್​ ಮ್ಯಾಪ್​, ಆರ್​ಎಂಪಿ), ಡಿನೋಟಿಫೈಡ್​ ಜಮೀನು, ಅಭಿವೃದ್ಧಿಗಾಗಿ ಎಂಜಿನಿಯರ್​ ವಿಭಾಗಕ್ಕೆ ಹಸ್ತಾಂತರಿಸಿರುವ ಜಮೀನು, ನಿವೇಶನಗಳ ಸಂಖ್ಯೆ ಮತ್ತು ಅವುಗಳ ರಚನೆ, ಒಟ್ಟು ನಿವೇಶನಗಳು, ಮೂಲೆ ನಿವೇಶನಗಳು, ಭೂಮಾಲೀಕರಿಗೆ ನೀಡಿರುವ ಪರಿಹಾರ, ಈ ಸಂಬಂಧ ದಾಖಲಾಗಿರುವ ಪ್ರಕರಣಗಳು, ಹರಾಜು ಮಾಡಿರುವ ವಿವರವನ್ನು ಆನ್​ಲೈನ್​ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ.

ಅಲ್ಲದೆ, ಸ್ಯಾಟಲೈಟ್​ ಚಿತ್ರಗಳು, ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವವರಲ್ಲಿ ಜೇಷ್ಟತೆಯ ಆಧಾರದಲ್ಲಿ ಪಟ್ಟಿ ಮಾಡಬೇಕು. ನಿವೇಶನ ಮಂಜೂರಾಗಿರುವವರ ಹೆಸರು ಮತ್ತು ಅವರ ನಿವೇಶನದ ಸಂಖ್ಯೆ ಬದಲಾವಣೆಗಳಿದ್ದಲ್ಲಿ ಕಾರಣ ಸಮೇತ ದಾಖಲಿಸಬೇಕು. ಈವರೆಗೂ ಮಂಜೂರು ಮಾಡದ ನಿವೇಶನಗಳು, ಅವುಗಳ ಸಂಖ್ಯೆ, ಗ್ರಾಮ ಮತ್ತು ಸರ್ವೇ ಸಂಖ್ಯೆಯನ್ನು ಹಾಕಬೇಕು. ಜೊತೆಗೆ, ಪುನರ್ ಮಂಜೂರು ಮಾಡಿರುವ ನಿವೇಶನಗಳು, ಮಂಜೂರು ರದ್ಧತಿಯನ್ನು ಮಾಹಿತಿಯೊಂದಿಗೆ ದಾಖಲಿಸಬೇಕು ಎಂದು ತಿಳಿಸಿದೆ.

ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಇ-ಗೌರ್ನೆನ್ಸ್​ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಸಲಹೆಗಳನ್ನು ಪಡೆದು ಜಾರಿ ಮಾಡಬೇಕು ಎಂದು ನ್ಯಾಯಾಲಯ ಬಿಡಿಎಗೆ ತಿಳಿಸಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ಭಂಗಿ​ ನಿಷೇಧಿತ ಪಾನೀಯವಲ್ಲ, ಶಿವನ ದೇವಸ್ಥಾನಗಳ ಬಳಿ ಬಹುತೇಕರು ಸೇವಿಸುತ್ತಾರೆ: ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.