ETV Bharat / state

ಏಕಕಾಲದಲ್ಲಿ ವಿವಿಧ ಕೋರ್ಸ್; ವಿದ್ಯಾರ್ಥಿನಿಯ ಸಿಎ ಅಭ್ಯಾಸದ ತೊಡಕು ಬಗೆಹರಿಸಿದ ಹೈಕೋರ್ಟ್

ಸಿಎ ಜತೆಗೆ ವಿವಿಧ ಕೋರ್ಸ್​ಗಳನ್ನು ಮಾಡಿದ್ದ ವಿದ್ಯಾರ್ಥಿನಿಗೆ ಚಾರ್ಟರ್ಡ್ ಅಕೌಂಟೆಂಟ್​​ ಆಗಿ ಅಭ್ಯಾಸ ಮಾಡಲು ಅವಕಾಶ ನೀಡುವಂತೆ ಐಸಿಎಐಗೆ ಹೈಕೋರ್ಟ್ ನಿರ್ದೇಶಿಸಿದೆ.

HIGH COURT
ಹೈಕೋರ್ಟ್
author img

By ETV Bharat Karnataka Team

Published : Dec 17, 2023, 8:22 AM IST

ಬೆಂಗಳೂರು: ವಿದ್ಯಾರ್ಥಿಗಳು ಹೆಚ್ಚು ಬುದ್ಧಿವಂತರಾಗಿದ್ದರೆ ಆಯಾ ಸಂಸ್ಥೆ ಮತ್ತು ಸಮಾಜಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್ ಚಾರ್ಟರ್ಡ್ ಅಕೌಂಟೆಂಟ್​(ಸಿ​ಎ) ಜತೆಗೆ ವಿವಿಧ ಕೋರ್ಸ್​ಗಳನ್ನು ಅಧ್ಯಯನ ಮಾಡಿದ್ದ ವಿದ್ಯಾರ್ಥಿಯೊಬ್ಬರಿಗೆ ಚಾರ್ಟರ್ಡ್ ಅಕೌಂಟೆಂಟ್​​ ​ಆಗಿ ಅಭ್ಯಾಸ ನಡೆಸಲು ಅನುಮತಿ ನೀಡುವಂತೆ ಇನ್​ಸ್ಟಿಟ್ಯೂಟ್​ ಆಫ್​ ಚಾರ್ಟರ್ಡ್ ಅಕೌಂಟೆಂಟ್ ಆಫ್​​​ ಇಂಡಿಯಾ (ಐಸಿಎಐ)ಗೆ ನಿರ್ದೇಶನ ನೀಡಿದೆ.

ಸಿಎ ಅಭ್ಯಾಸ ಮಾಡುವುದಕ್ಕೆ ಅನುಮತಿ ನೀಡದ ಐಸಿಎಐ ಕ್ರಮ ಪ್ರಶ್ನಿಸಿ ಬೆಂಗಳೂರಿನ 23 ವರ್ಷದ ಕೆ ಜೆ ನಿಕಿತಾ ಎಂಬುವರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅತ್ಯಂತ ಚುರುಕಾದ ವಿದ್ಯಾರ್ಥಿಗಳಿದ್ದರೆ ಆಯಾ ಸಂಸ್ಥೆ ಹಾಗೂ ಸಮಾಜಕ್ಕೆ ನೆರವಾಗಲಿದೆ ಎಂದು ಪೀಠ ತಿಳಿಸಿದೆ. ಜತೆಗೆ, ವಿದ್ಯಾರ್ಥಿನಿಗೆ ಅವಕಾಶ ಕಲ್ಪಿಸುವುದಕ್ಕಾಗಿ ನ್ಯಾಯದ ಕಮಾನನ್ನು ಬಾಗಿಸುವುದು ತಪ್ಪಾಗಲಾರದು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಏಕ ಕಾಲಕ್ಕೆ ಹಲವು ಕೋರ್ಸ್​ಗಳನ್ನು ಪೂರ್ಣಗೊಳಿಸಿರುವ ಬುದ್ದಿವಂತ ವಿದ್ಯಾರ್ಥಿಯನ್ನು ಸಿಎ ಆಗಿ ಅಭ್ಯಾಸ ನಡೆಸಲು ನಿಯಂತ್ರಿಸುವುದು ಆಶ್ಚರ್ಯಕರವಾಗಿದೆ. ಅಲ್ಲದೆ, ಅರ್ಜಿದಾರರು ಪ್ರತಿಯೊಂದು ಕೋರ್ಸ್ ಮಾಡುವುದಕ್ಕೂ ಐಸಿಎಐನಿಂದ ಅನುಮತಿ ಪಡೆದಿದ್ದಾರೆ. ಐಸಿಎಐ ಅದಕ್ಕೆ ಅನುಮತಿಯನ್ನೂ ನೀಡಿದೆ. ಆದರೆ, ಇದೀಗ ಅದನ್ನು ಬದಲಾಯಿಸಲು ಮುಂದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ವಿದ್ಯಾರ್ಥಿ ಸರಿಯಾದ ರೀತಿಯಲ್ಲಿ ಅನುಮತಿ ಕೋರಿಲ್ಲ. ನೀಡಿರುವ ಅನುಮತಿ ಸರಿಯಿಲ್ಲ ಎಂಬುದಾಗಿ ಐಎಸಿಐ ತಿಳಿಸುವ ಮೂಲಕ ವಿದ್ಯಾರ್ಥಿನಿ ಜೀವನವನ್ನು ಅಪಾಯಕ್ಕೆ ತಳ್ಳುವುದಕ್ಕೆ ಮುಂದಾಗಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿನಿಗೆ ಕಾನೂನಿಗೆ ಸಂಬಂಧಿಸಿದ ಪರಿಣಾಮಗಳು ಅರಿವಿರುವುದಿಲ್ಲ. ಒಬ್ಬ ಅವರಿಗೆ ಅಧ್ಯಯನ ಮಾಡಲು ಮತ್ತು ಸಾಮಗ್ರಿಗಳ ಬಗ್ಗೆ ಯೋಜಿಸಲು ಮಾತ್ರ ತಿಳಿದಿರುತ್ತದೆ. ಅನುಮತಿ ಪಡೆದು ಅಧ್ಯಯನವನ್ನು ಮಾತ್ರ ನಡೆಸಿದ್ದರೂ ವಿದ್ಯಾರ್ಥಿನಿಗೆ ತೊಂದರೆ ನೀಡುವುದಕ್ಕೆ ಮುಂದಾಗಿರುವ ಐಸಿಎಐ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರಲು ಅರ್ಹವಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ನಿಕಿತಾ ಅವರು 2017ರಲ್ಲಿ ಬಿಕಾಂ ಪದವಿ ಮತ್ತು ಸಿಎಂಎ ಫೌಂಡೇಷನ್‌ ಕೋರ್ಸ್​ಗೆ ದಾಖಲಾಗಿದ್ದರು. 2018 ರಲ್ಲಿ ಸಿಎಸ್​​-ಎಕ್ಸಿಕ್ಯೂಟಿವ್ ಕೋರ್ಸ್​ನ್ನು ಮುಂದುವರೆಸಿದ್ದರು. ಜತೆಗೆ ಹಲವು ಕೋರ್ಸ್‌ಗಳಿಗೆ ಸೇರಿಕೊಂಡಿದ್ದರು. ಆದರೆ, ಬಿಕಾಂ ಪದವಿಯನ್ನು ಹೊರತು ಪಡಿಸಿ ಉಳಿದೆಲ್ಲ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದರು. ಈ ನಡುವೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ತರಬೇತಿಗೆ ಸೇರಿಕೊಂಡಿದ್ದರು. ಬಿಕಾಂ ಪದವಿಯನ್ನು ಮುಂದುವರೆಸಲು ಅನುಮತಿ ಕೋರಿದ್ದರು. ಅನುಮತಿಯನ್ನೂ ನೀಡಲಾಗಿತ್ತು. 2020ರಲ್ಲಿ ಬಿಕಾಂ ಪೂರ್ಣಗೊಳಿಸಿದ್ದರು.

ಅವರು ಅನುಮತಿಯನ್ನು ಪಡೆದ ನಂತರ ಸಿಎಂಎಫ್ ಅಂತಿಮ ಪರೀಕ್ಷೆ ಮತ್ತು ಸಿಎಸ್ ವೃತ್ತಿಪರ ಕೋರ್ಸ್‌ನ್ನು ಪೂರ್ಣಗೊಳಿಸಿದ್ದರು.
ಅಂತಿಮವಾಗಿ 2023ರ ಮೇ 1 ರಂದು ಚಾರ್ಟರ್ಡ್ ಅಕೌಂಟೆಂಟ್ ಆಗಿ ಅಭ್ಯಾಸ ಮಾಡಲು ಸದಸ್ಯತ್ವ ನೀಡುವಂತೆ ಮನವಿ ಮಾಡಿದ್ದರು. ಅರ್ಜಿದಾರರ ಹಲವು ಕೋರ್ಸ್‌ಗಳನ್ನು ಏಕ ಕಾಲಕ್ಕೆ ಹೇಗೆ ಮುಂದುವರೆಸಿದರು ಎಂಬುದರ ಕುರಿತು ಸ್ಪಷ್ಟನೆ ಕೋರಿ ಸಂಸ್ಥೆ ಅವರ ಮನವಿಯನ್ನು ತಿರಸ್ಕರಿಸಿತ್ತು. ಜತೆಗೆ, ಹಲವು ಕೋರ್ಸ್‌ಗಳನ್ನು ಮುಂದುವರೆಸಿದ್ದಾಕ್ಕಾಗಿ 10 ಸಾವಿರ ರೂ.ಗಳ ದಂಡವನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ವಿಡಿಯೋ ಕಾನ್ಫರೆನ್ಸ್‌ ದತ್ತಾಂಶ ಹ್ಯಾಕ್‌ ಆದ ಮಾತ್ರಕ್ಕೆ ತಂತ್ರಜ್ಞಾನ ನಿರ್ಬಂಧಿಸಲಾಗದು: ಸಿಜೆಐ ಚಂದ್ರಚೂಡ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.