ETV Bharat / state

ಪರಿಷತ್​​​​ನಲ್ಲಿ ಮ್ಯಾನ್​ಹೋಲ್​ ಪ್ರಕರಣ ಕುರಿತು ಹರಿಪ್ರಸಾದ್ ಪ್ರಶ್ನೆ: ಕೈ-ಕಮಲ ಸದಸ್ಯರ ಜಟಾಪಟಿ - council

ಒಂದು‌ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ ಎಂದು ಹರಿಹಾಯ್ದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ನಂತರ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಪರಿಸ್ಥಿತಿ ತಿಳಿಗೊಳಿಸಿದರು..

hariprasad
ಹರಿಪ್ರಸಾದ್
author img

By

Published : Mar 17, 2021, 4:51 PM IST

ಬೆಂಗಳೂರು : ವಿಧಾನ ಪರಿಷತ್ ಕಲಾಪದಲ್ಲಿ ಕಾನೂನು ಬಾಹಿರ ಸ್ಕ್ಯಾವೆಂಜಿಂಗ್​ನಿಂದ ಕಾರ್ಮಿಕರು ಮೃತಪಡುತ್ತಿರುವ ಘಟನೆ ಕುರಿತು ಚರ್ಚೆ ನಡೆಯಿತು. ಈ ವೇಳೆ ಆಡಳಿತ ಪಕ್ಷದ ಆಯನೂರು ಮಂಜುನಾಥ್ ಪ್ರತಿಪಕ್ಷ ಸದಸ್ಯ ಹರಿಪ್ರಸಾದ್ ನಡುವೆ ಜಟಾಪಟಿಯೂ ನಡೆದು ವಾಕ್ಸಮರಕ್ಕೆ ವೇದಿಕೆಯಾಯಿತು.

ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, ಕಳೆದ 5 ವರ್ಷದಿಂದ ಸ್ಕ್ಯಾವೆಂಜಿಂಗ್‌ನಿಂದ 30-32 ಜನ ಮೃತಪಟ್ಟಿದ್ದಾರೆ.

ಕಾನೂನು ಬಾಹಿರವಾಗಿ ಹಸ್ತಚಾಲಿತ ಸ್ಕ್ಯಾವೆಂಜಿಂಗ್ ಕೆಲಸಗಳನ್ನು ಮಾಡಲಾಗುತ್ತಿದೆ, ಇದನ್ನು ಕಠಿಣ ಕಾನೂನು ಮೂಲಕ‌ ಸರಿಪಡಿಸಬೇಕಿದೆ, ಕಾನೂನು ಪಾಲಿಸಬೇಕು ಎನ್ನುವ ಆದೇಶವಿದ್ದರೂ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ಪರಿಷತ್​​​​ನಲ್ಲಿ ಮ್ಯಾನ್​ಹೋಲ್​ ಪ್ರಕರಣ ಕುರಿತು ಹರಿಪ್ರಸಾದ್ ಪ್ರಶ್ನೆ

ನಂತರ ಉಪ ಪ್ರಶ್ನೆಗೆ ಉತ್ತರ ನೀಡಿದ ಶ್ರೀರಾಮುಲು, ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗಿದೆ. ಹೈಕೋರ್ಟ್​​ನಲ್ಲಿ ಕೇಸ್ ಇದೆ, ಆರ್​ಡಿಪಿಆರ್, ಜಲಮಂಡಳಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ಚರ್ಚೆ ನಡೆಯುತ್ತಿದೆ, ಶಾಶ್ವತ ಪರಿಹಾರಕ್ಕೆ ಪ್ರಯತ್ನ ಕಲ್ಪಿಸಲಾಗುತ್ತದೆ. ಕಲಬುರಗಿ ಘಟನೆ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ ಎಂದರು.

ನಂತರ ಸಚಿವರ ನೆರವಿಗೆ ಧಾವಿಸಿದ ಡಿಸಿಎಂ ಕಾರಜೋಳ, ಸಾಮಾಜಿಕ ಕಳಕಳಿ, ಕಾಳಜಿ ಇಲ್ಲದ ಕಾರಣಕ್ಕೆ ಈ ದುರಂತವಾಗುತ್ತಿವೆ, ಮನುಷ್ಯನ ಹೊಲಸನ್ನು, ಮನುಷ್ಯನ ಕೈಯಿಂದ‌ ತೆಗೆಸುವುದು, ತಲೆಯ ಮೇಲೆ ಹೊರುವುದಕ್ಕೆ ನಿಷೇಧ ಹೇರಿದೆ. ಸಫಾಯಿ ಕರ್ಮಚಾರಿ ಆಯೋಗ ಆರಂಭಿಸಿ ಅವರಿಗೆಲ್ಲಾ ನೆರವು ಕಲ್ಪಿಸಲಾಗಿತ್ತಿದೆ. ಪೌರಕರ್ಮಿಕರು ಶೇ.90ರಷ್ಟು ನನ್ನ ಸಮುದಾಯವರೇ ಇದ್ದಾರೆ.

ಎಸ್​​ಪಿ ಟಿಎಸ್​ಪಿ ಅನುದಾನ ಬಳಕೆಗೆ ಅವಕಾಶ ಇದೆ. ಸಫಾಯಿ ಕರ್ಮಚಾರಿಗಳ ಅನುಕೂಲಕ್ಕೆ ಇನ್ನಷ್ಟು ಅನುದಾನ ಕೊಡಲಾಗುತ್ತದೆ. ಇದು ಸಾವಿರ ವರ್ಷದ ಪಿಡುಗು ಇನ್ನೂ ಹೋಗುತ್ತಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗುತ್ತಿದೆ. ಇನ್ಮುಂದೆ ಕಾರ್ಮಿಕರು ಸ್ಕ್ಯಾವೆಂಜಿಂಗ್ ವೇಳೆ ಮೃತರಾಗುವ ಘಟನೆ ಜರುಗಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುತ್ತದೆ ಎಂದರು.

ಆಯನೂರು ಹರಿಪ್ರಸಾದ್ ಜಟಾಪಟಿ : ಡಿಸಿಎಂ ಉತ್ತರದ ನಂತರ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸಂಸದರಾಗಿದ್ದವರು, ಶಾಸಕರಾಗಿದ್ದವರು ಬಳಸುವ ಪದಗಳ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಕಿಡಿಕಾರಿದ ಕಾಂಗ್ರೆಸ್ ಸದಸ್ಯರು ಪ್ರಶ್ನೋತ್ತದಲ್ಲಿ ಚರ್ಚೆ ಬೇಡ ಎಂದು ನಮಗೆ ಹೇಳಿ ಆಯನೂರ್​​​​ಗೆ ಅವಕಾಶ ನೀಡಿದ್ದೀರಿ, ಇದು ತಾರತಮ್ಯ ಎಂದು ಅಸಮಧಾನ ಹೊರ ಹಾಕಿದರು. ನಂತರ ಚರ್ಚೆಗೆ ಅವಕಾಶವಿಲ್ಲ ಎನ್ನುವ ರೂಲಿಂಗ್ ನೀಡಿ ಸಲಹೆ ನೀಡಲು ಅವಕಾಶ ಕಲ್ಪಿಸಿದರು.

ಈ ವೇಳೆ ಆಯನೂರು ಹರಿಪ್ರಸಾದ್ ನಡುವೆ ಮಾತಿನ ಚಕಮಕಿ ನಡೆಯಿತು. ನೈತಿಕತೆ ಪಾಠ ಮಾಡುವವರು ನಾಲ್ಕು ನಾಲ್ಕು ಪಕ್ಷ ಬದಲಾವಣೆ ಮಾಡಿದ್ದಾರೆ. ಅವರಿಂದ ನಾವು ಕಲಿಯಬೇಕಿಲ್ಲ ಎಂದು ಹರಿಪ್ರಸಾದ್ ತಿರುಗೇಟು ನೀಡಿದರು. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ ಆಯನೂರು ಮಂಜುನಾಥ್, ಯಾರೋ ರೌಡಿಗಳಿಗೆ ಹೆದರಲ್ಲ, ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ, ಚಮಚಾಗಿರಿ ಮಾಡಿ ಬಂದಿಲ್ಲ.

ಒಂದು‌ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ ಎಂದು ಹರಿಹಾಯ್ದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ನಂತರ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ಅಸಾಂವಿಧಾನಿಕ ಪದ ಕಡತದಿಂದ ತೆಗೆಯುವಂತೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪಟ್ಟುಹಿಡಿದರು. ಇದಕ್ಕೆ ಸಮ್ಮತಿಸಿದ ಉಪ ಸಭಾಪತಿ ಪ್ರಾಣೇಶ್, ಅಸಂಬದ್ಧವಾದ ಪದ ಇದ್ದರೆ ಕಡತದಿಂದ ತೆಗೆಯಲು ಸೂಚಿಸಿದರು.

ಆದರೆ, ಇದಕ್ಕೆ ಅಸಮಾಧಾನ ವ್ಯಕ್ತಪಡಿದ ಆಯನೂರು, ಅಸಾಂವಿಧಾನಿಕ ಪದ ಇದ್ದರೆ ಮಾತ್ರ ವಾಪಸ್ ಪಡೆಯಬೇಕು, ನನ್ನ ಪದಗಳಿಗೆ ನಾನು ಜವಾಬ್ದಾರ ಇದ್ದೇನೆ. ಅದು ನನ್ನ ಹಕ್ಕು ಎಂದರು.

ಇದನ್ನೂ ಓದಿ: ಸೆಪ್ಟಿಕ್​ ಟ್ಯಾಂಕ್​ ಅಗೆಯುವಾಗ ಮಣ್ಣು ಕುಸಿದು ಐವರು ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.