ETV Bharat / state

ಏರೋ ಇಂಡಿಯಾ 2023: ಮಾರಿಷಸ್ ಪೊಲೀಸ್‌ ಪಡೆಗೆ ಹೆಚ್ಎಎಲ್‌ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್ ಮಾರ್ಕ್ -3 ಹಸ್ತಾಂತರ - ಈಟಿವಿ ಭಾರತ ಕನ್ನಡ

ಏರೋ ಇಂಡಿಯಾ 2023: ಮಾರ್ಕ್ 3 ಹೆಲಿಕಾಪ್ಟರ್ ಮಾರಿಷಸ್ ಪೊಲೀಸ್‌ ಪಡೆಗೆ ಹಸ್ತಾಂತರ - ಹೆಚ್.ಎ.ಎಲ್‌ ನಿರ್ದೇಶಕ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಜಯದೇವ ಸಮ್ಮುಖದಲ್ಲಿ ಹೆಲಿಕಾಪ್ಟರ್​ ಹಸ್ತಾಂತರ

-mark-3-helicopter
ಮಾರ್ಕ್ 3 ಹೆಲಿಕಾಪ್ಟರ್
author img

By

Published : Feb 14, 2023, 8:01 AM IST

ಬೆಂಗಳೂರು: ಏರೋ ಇಂಡಿಯಾ ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ ಸುಧಾರಿತ ಲಘು ಹೆಲಿಕಾಪ್ಟರ್ ಮಾರ್ಕ್ -3 ಅನ್ನು ಮಾರಿಷಸ್ ಪೊಲೀಸ್‌ ಪಡೆಗೆ ಹಸ್ತಾಂತರಿಸಲಾಗಿದೆ. ಹೆಚ್.ಎ.ಎಲ್‌ ನಿರ್ದೇಶಕ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಜಯದೇವ, ಸೇರಿದಂತೆ ಮಾರಿಷಸ್ ಪ್ರಮುಖರ ಸಮ್ಮುಖದಲ್ಲಿ ಹೆಲಿಕಾಪ್ಟರ್ ಹಸ್ತಾಂತರ ಮಾಡಲಾಗಿದೆ. ಹೆಲಿಕಾಪ್ಟರ್ ಹಸ್ತಾಂತರದಿಂದ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಬಲಿಷ್ಠವಾಗಿದೆ. ಮಾರಿಷಸ್ ಪೊಲೀಸ್ ಪಡೆಗೆ ಹೆಲಿಕಾಪ್ಟರ್ ಸೇರಲಿವೆ. ಇದರಿಂದ ದೇಶದ ಭದ್ರತೆಗೆ ಮತ್ತಷ್ಟು ಸಹಕಾರಿಯಾಗಲಿದೆ. ಭಾರತ ಮತ್ತು ಮಾರಿಷಸ್ ಮೂರು ದಶಕಗಳಿಂದ ಬಲವಾದ ವ್ಯಾಪಾರ ಸಂಬಂಧ ಹಂಚಿಕೊಂಡಿವೆ. ಎಚ್‌ಎಎಲ್ ತಯಾರಿಸಿದ ಹೆಲಿಕಾಪ್ಟರ್ ಈಗಾಗಲೇ ಮಾರಿಷಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆ: ಐದು ದಿನಗಳ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಸ್ವದೇಶಿ ಉಪಕರಣಗಳು, ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆ ರೂಪಿಸಲು ಹೆಚ್.ಎ.ಎಲ್‌ ಮುಂದಾಗಿದೆ.

ಹಿಂದೂಸ್ತಾನ್ ಲೀಡ್ ಇನ್‌ ಫೈಟರ್‌ ಟ್ರೈನರ್ ಮಾಡೆಲ್ ಪ್ರದರ್ಶನ: ಏರೋ ಐಡಿಯಾ 2023ರಲ್ಲಿ ಹಿಂದುಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್ ಮೊಟ್ಟಮೊದಲ ಬಾರಿಗೆ, ಹಿಂದೂಸ್ತಾನ್ ಲೀಡ್ ಇನ್‌ ಫೈಟರ್‌ ಟ್ರೈನರ್ ಮಾಡೆಲ್ ಅನ್ನು ಪ್ರದರ್ಶಿಸುತ್ತಿದೆ. ಯುದ್ಧ ವಿಮಾನ ತರಬೇತಿಯಲ್ಲಿ ನಿರ್ಣಾಯಕ ಉಪಯುಕ್ತತೆಯೊಂದಿಗೆ ನೆಕ್ಸ್-ಚೆನ್ ಸೂಪರ್‌ಸಾನಿಕ್‌ ಟ್ರೈನರ್' ಎಂದು ಇದಕ್ಕೆ ಕರೆಯಲಾಗುತ್ತದೆ. ತರಬೇತುದಾರರು ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ ಅದೇ, ಎಲೆಕ್ಟ್ರಾನಿಕ್ ವಾರ್ ಫೇರ್ ಮಾಡೆಲ್ ಸೂಟ್, ಇನ್‌ಫಾರಡ್ ಸರ್ಚ್ ಮತ್ತು ಬ್ಯಾಕ್ ಸೇರಿದಂತೆ ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಈ ವಿಮಾನದಲ್ಲಿ ಬರಲಿದೆ. ಕಂಪ್ಯೂಟರ್-ನಿಯಂತ್ರಿತ ವ್ಯವಸ್ಥೆ ಶಾಫ್ಟ್ ವಿಮಾನದಲ್ಲಿದೆ.

handover of mark-3 helicopter
ಮಾರಿಷಸ್ ಪೊಲೀಸ್‌ ಪಡೆಗೆ ಮಾರ್ಕ್ 3 ಹೆಲಿಕಾಪ್ಟರ್ ಹಸ್ತಾಂತರ

ಏರ್ ಶೋನಲ್ಲಿ, ಹೆಚ್.ಎ.ಎಲ್ ತನ್ನ 15-ಹೆಲಿಕಾಪ್ಟರ್ ರಚನೆಯನ್ನು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯ ವಿಷಯವಾಗಿ ಪ್ರದರ್ಶಿಸುತ್ತದೆ. 'ಆತ್ಮನಿರ್ಭರ ರಚನೆ' ವಿಮಾನವು ಸುಧಾರಿತ ಲಘು ಹೆಲಿಕಾಪ್ಟರ್, ಪ್ರಚಂಡ್ ಲೈಟ್ ಯುದ್ಧ ಹೆಲಿಕಾಪ್ಟರ್ ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ನ ಎಲ್ಲಾ ರೂಪಾಂತರಗಳನ್ನು ಒಳಗೊಂಡಿದೆ.

ಒಟ್ಟು 40 ವಿಮಾನಗಳ ಪ್ರದರ್ಶನ: ಸ್ಥಿರ-ವಿಂಗ್ ಮುಂಭಾಗದಲ್ಲಿ ಹಾಕ್-I, ಲೈಟ್ ಕಾಂಪ್ಯಾಟ್‌ ವಿ‌ಕಾಸ್‌ ಆಸ್ಟರ್ ರೂಪಾಂತರ, ಇಂಟರ್ಮೀಡಿಯೇಟ್ ಹೆಡ್ ಟ್ರೈನರ್ ಮತ್ತು ಹಿಂದೂಸ್ತಾನ್ ಟರ್ಬೋ ಟ್ರೈನರ್ ಸೇರಿದಂತೆ ಒಟ್ಟು 40 ವಿಮಾನಗಳನ್ನು ಹೆಚ್.ಎ.ಎಲ್ ಪ್ರದರ್ಶಿಸುತ್ತಿದೆ. ಭಾರತೀಯ ಮಲ್ಟಿ-ರೋಲ್ ಹೆಲಿಕಾಪ್ಟರ್‌ನ ಸ್ಟೇಲ್ ವಾ‌ಫೇರ್ ಮಾಡೆಲ್, ಮುಂದಿನ ಪೀಳಿಗೆಯ ಹೆಚ್.ಎಲ್.ಟಿ.ಎಫ್- 42 ಮತ್ತು ಎಲ್.ಸಿ.ಎ ಎಂ. ಕೆ 2 ಹಿಂದೂಸ್ತಾನ್ ಟರ್ಬೋ- ಶಾಫ್ಟ್ ಎಂಜಿನ್-1200, ರೋಟರಿ ಮಾನವರಹಿತ ವಿಮಾನ ಮತ್ತು ಹಿಂದೂಸ್ತಾನ್-226 ಹೆಲಿಕಾಪ್ಟರ್ ಮಾದರಿಗಳು ಪ್ರದರ್ಶನದ ಭಾಗವಾಗಿವೆ. ಹೊರಾಂಗಣ ಪ್ರದರ್ಶನದಲ್ಲಿರುವ ರೋಟರಿ ವಿಂಗ್ ಉತ್ಪನ್ನಗಳಾದ ಎಲ್.ಯು. ಹೆಚ್ ಮತ್ತು ಎ.ಎಲ್.ಹೆಚ್ ವೈದ್ಯಕೀಯ ತೀವ್ರ ನಿಗಾ ಘಟಕದ ರೂಪಾಂತರವನ್ನು ಹೊಂದಿರುತ್ತವೆ. ಎ.ಎಲ್.ಹೆಚ್, ಡಾರ್ನಿರ್, ಹಾಕ್-1, ಹೆಚ್.ಟಿ.ಟಿ-40 ದೈವಾರ್ಷಿಕ ಸ್ಥಿರ ಪ್ರದರ್ಶನದಲ್ಲಿರುತ್ತವೆ. ಡು-228 ಲಘು ಸಾರಿಗೆ ವಿಮಾನವನ್ನು ವಾಣಿಜ್ಯ ಹಾರುವ ವಲಯದಲ್ಲಿ ಬಳಕೆಗಿದ್ದು ಅದನ್ನು ಪ್ರದರ್ಶಿಸಲಾಗುತ್ತಿದೆ.

ಇದನ್ನೂ ಓದಿ: ಏರೋ ಇಂಡಿಯಾ ಶೋಗೆ ಗ್ರೀನ್ ಸಿಗ್ನಲ್ : ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.