ETV Bharat / state

2ನೇ ನೋಟಿಸ್​ಗೂ ಹಾಜರಾದ Hacker ಶ್ರವಣ್‌ : ನಾಲ್ಕು ಗಂಟೆಗಳ ಕಾಲ SIT ಡ್ರಿಲ್..! - SIT Team investigated to hacker shravan

ಹ್ಯಾಕಿಂಗ್, ಐಪಿ ಅಡ್ರೆಸ್ ಮಾರ್ಪಾಡು ಮಾಡಿರುವ ಬಗ್ಗೆ ಶ್ರವಣ್​ ಅವರಿಂದ ಹೇಳಿಕೆ ಪಡೆಯಲಾಗಿದೆ. ಶ್ರವಣ್​ನಿಂದ ಹೇಗೆಲ್ಲಾ ತಾಂತ್ರಿಕವಾಗಿ ಹಲವು ವಿಚಾರಗಳು ಬಳಕೆಯಾಗಿವೆ? ಈತ ಯಾವೆಲ್ಲಾ ತಾಂತ್ರಿಕ ವಿಚಾರದಲ್ಲಿ ಚಾಣಾಕ್ಷತನ ಹೊಂದಿದ್ದ? ಬ್ಲಾಕ್ ಮೇಲ್ ಕೇಸ್​ನಲ್ಲಿ ಆತನ ಪಾತ್ರವೇನು? ಅದಕ್ಕೆ ಶ್ರವಣ್​​​ನ ಸ್ಪಷ್ಟನೆ ಏನು‌? ಎಂಬುದರ ಕುರಿತು ಎಸ್​ಐಟಿ ಮಾಹಿತಿ ಪಡೆದಿದೆ.

SIT
ಎಸ್​ಐಟಿ
author img

By

Published : Jun 15, 2021, 7:47 PM IST

Updated : Jun 15, 2021, 7:55 PM IST

ಬೆಂಗಳೂರು: ಒತ್ತಡ ಹೇರಿ ಹಣ ಪಡೆದುಕೊಂಡು‌ ರಾಜಕೀಯ ಜೀವನ ಅಸ್ಥಿರ ಮಾಡಿರುವುದಾಗಿ ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ ದೂರಿನ‌ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ಶಂಕಿತ ಆರೋಪಿ ಶ್ರವಣ್​ನನ್ನು ವಿಚಾರಣೆ ನಡೆಸಿತು.

ಪ್ರಕರಣದ ತನಿಖೆ ದಿನೇ ದಿನೆ ಹೊಸ ದಿಕ್ಕಿನತ್ತ ಸಾಗುತ್ತಿದೆ‌. ಒಮ್ಮೆ ಇಬ್ಬರು ಆರೋಪಿಗಳಿಗೆ ಏಕಕಾಲದಲ್ಲಿ ವಿಚಾರಣೆ ನಡೆಸಿದರೆ ಮತ್ತೊಮ್ಮೆ ಇಬ್ಬರಿಗೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಎಥಿಕಲ್ ಹ್ಯಾಕರ್ ಎಂಬ ಆರೋಪ ಹೊತ್ತಿರುವ ಶ್ರವಣ್​​ಗೆ ಎಸ್​ಐಟಿ ತೀವ್ರ ವಿಚಾರಣೆ ನಡೆಸಿ, ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ.

4 ಗಂಟೆ ನಡೀತು​​ ಶ್ರವಣ್ ವಿಚಾರಣೆ​!

ಮಾಜಿ ಸಚಿವರು ದಾಖಲಿಸಿದ್ದ ಬ್ಲಾಕ್ ಮೇಲ್ ಕೇಸ್​ನ ತನಿಖೆಯನ್ನು ಎಸ್​ಐಟಿ ಮತ್ತಷ್ಟು ಚುರುಕುಗೊಳಿಸಿದೆ. ಕಳೆದ‌ ಶನಿವಾರ ನರೇಶ್ ಜೊತೆ ಶ್ರವಣ್ ವಿಚಾರಣೆ ಕೂಡ ನಡೆದಿತ್ತು. ಆದರೆ, ಕೆಲವೊಂದು ಹೆಚ್ಚಿನ ಮಾಹಿತಿ ಅಗತ್ಯವಿದ್ದ ಕಾರಣಕ್ಕೆ ಎಸ್​ಐಟಿ ಶ್ರವಣ್​ಗೆ 2ನೇ ನೋಟಿಸ್ ನೀಡಿತ್ತು. ಅದರಂತೆ ಇಂದು ಆರೋಪಿ ಶ್ರವಣ್, 2ನೇ ನೋಟಿಸ್​ಗೂ ಹಾಜರಾಗಿದ್ದಾನೆ. ಬೆಂಗಳೂರಿನ ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಶ್ರವಣ್​​​ಗೆ ನಾಲ್ಕು ಗಂಟೆಗಳ ಕಾಲ ಎಸ್ಐಟಿ ಸುದೀರ್ಘ ವಿಚಾರಣೆಗೆ ಒಳಪಡಿಸಲಾಯಿತು.

ಎಸ್​​ಐಟಿ ಅಧಿಕಾರಿಗಳಿಗೆ ಶ್ರವಣ್​ ಹೇಳಿದ್ದೇನು?

ಎಸ್​ಐಟಿ, ಶ್ರವಣ್ ವಿಚಾರಣೆಯುದ್ದಕ್ಕೂ ಆತ ಸೈಬರ್ ಎಕ್ಸ್​ಪರ್ಟ್​ ಎಂಬ ಆರೋಪದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಿದೆ. ಹ್ಯಾಕಿಂಗ್, ಐಪಿ ಅಡ್ರೆಸ್ ಮಾರ್ಪಾಡು ಮಾಡಿರುವ ಬಗ್ಗೆ ಶ್ರವಣ್​ ಅವರಿಂದ ಹೇಳಿಕೆ ಪಡೆಯಲಾಗಿದೆ. ಶ್ರವಣ್​ನಿಂದ ಹೇಗೆಲ್ಲಾ ತಾಂತ್ರಿಕವಾಗಿ ಹಲವು ವಿಚಾರಗಳು ಬಳಕೆಯಾಗಿವೆ? ಈತ ಯಾವೆಲ್ಲಾ ತಾಂತ್ರಿಕ ವಿಚಾರದಲ್ಲಿ ಚಾಣಾಕ್ಷತನ ಹೊಂದಿದ್ದ? ಬ್ಲಾಕ್ ಮೇಲ್ ಕೇಸ್​ನಲ್ಲಿ ಆತನ ಪಾತ್ರವೇನು? ಅದಕ್ಕೆ ಶ್ರವಣ್​​​​ನ ಸ್ಪಷ್ಟನೆ ಏನು‌? ಎಂಬುದರ ಕುರಿತು ಎಸ್​ಐಟಿ ಮಾಹಿತಿ ಪಡೆದಿದೆ. ಜೊತೆಗೆ ಯುವತಿ ಸಂಪರ್ಕದ ಬಗ್ಗೆಯೂ ಎಸ್​ಐಟಿ ಮಾಹಿತಿ ಪಡೆದಿದೆ ಎನ್ನಲಾಗಿದೆ.

ನಾಳೆ ನರೇಶ್​ ವಿಚಾರಣೆ:

ಶ್ರವಣ್ ವಿಚಾರಣೆ ಮುಗಿಯುತ್ತಿದ್ದಂತೆ ಶಂಕಿತ ಆರೋಪಿ ನರೇಶ್​ಗೆ ಎಸ್​ಐಟಿ ಮೂರನೇ ನೋಟಿಸ್ ನೀಡಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಮತ್ತೆ ಎಸ್​ಐಟಿ ಎದುರು ಹಾಜರಾಗುವಂತೆ ಸೂಚಿಸಿದೆ.

ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಯುವಕರ ಮೇಲೆ ಕಠಿಣ ಕ್ರಮ: ಡಿಸಿಪಿ ವಿಕ್ರಮ ಆಮಟೆ

Last Updated : Jun 15, 2021, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.