ETV Bharat / state

ಸಿಎಂ ಆದವರು ಖಾತೆ ಇಲ್ಲದೆ ಅಭಿವೃದ್ಧಿಗೆ ಕೆಲಸ ಮಾಡಬೇಕು; ಯಡಿಯೂರಪ್ಪಗೆ ಹಳ್ಳಿ ಹಕ್ಕಿ ಟಾಂಗ್

ಹಣಕಾಸು ಇಲಾಖೆಯವರು ಮುಖ್ಯಮಂತ್ರಿಗಳಿಗೆ ಸರಿಯಾಗಿ ಟೋಪಿ ಹಾಕಿದ್ದಾರೆ. ನಿಗಮ ಮಂಡಳಿಯಿಂದ 23 ಸಾವಿರ ಕೋಟಿ ಸಂಗ್ರಹ ಮಾಡುತ್ತೇವೆ ಅಂತಾರೆ. ಆದರೆ ಆ ನಿಗಮಗಳೇ ಸರ್ಕಾರದ ಹಣದಲ್ಲಿ ನಡೆಯುತ್ತಿವೆ. ಹೀಗೆ ದಿಕ್ಕು ತಪ್ಪಿಸೋದು ಬೇಡ. ಯಾಕೆ ಎಲ್ಲಾ ಇಲಾಖೆಗಳನ್ನು ಸಿಎಂ ಇಟ್ಟುಕೊಳ್ಳುತ್ತಾರೆ. ಪ್ರಧಾನಿ ಮೋದಿ ಯಾವುದೇ ಖಾತೆ ಇಟ್ಟುಕೊಂಡಿಲ್ಲ ಎಂದು ಬಿಎಸ್​ವೈ ಕುರಿತು ಹೇಳಿಕೆ ನೀಡಿದ್ದಾರೆ.

H Vishwanath
ಹೆಚ್​​​.ವಿಶ್ವನಾಥ್
author img

By

Published : Mar 10, 2021, 4:50 PM IST

ಬೆಂಗಳೂರು: ಪದೇ ಪದೇ ಸರ್ಕಾರವನ್ನು ಕುಟುಕುತ್ತಿರುವ ಹಳ್ಳಿಹಕ್ಕಿ ವಿಶ್ವನಾಥ್, ಬಜೆಟ್ ಮೇಲಿನ ಚರ್ಚೆಯ ವೇಳೆಯಲ್ಲೂ ಸ್ವಪಕ್ಷದ ವಿರುದ್ಧವೇ ಪ್ರಶ್ನೆ ಎತ್ತಿದ್ದಾರೆ.

ಬಜೆಟ್ ಮೇಲಿನ ಚರ್ಚೆ ಆರಂಭಿಸಿ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಆರ್ಥಿಕ ತಜ್ಞರಲ್ಲ. ಅವರೆಲ್ಲಾ ಬಜೆಟ್ ಟೇಬಲ್ ಮಾಡಿದ್ದಾರೆ ಅಷ್ಟೇ, ಕೇಂದ್ರದ ರೀತಿ ರಾಜ್ಯ ಕೂಡ ಕಡ್ಡಾಯವಾಗಿ ಪ್ರತ್ಯೇಕ ಹಣಕಾಸು ಸಚಿವರನ್ನು ಹೊಂದಿರಬೇಕು ಎನ್ನುತ್ತಾ ಮುಖ್ಯಮಂತ್ರಿಗಳೇ ಹಣಕಾಸು‌ ಖಾತೆ ನಿರ್ವಹಿಸುವ ಪರಿಪಾಠವನ್ನು ಟೀಕಿಸಿದರು.

ಹಿಂದೆ 30 ದಿನ ಅಧಿವೇಶನ ನಡೆದು ಪ್ರತಿ ಇಲಾಖೆ ಮೇಲೆ ಚರ್ಚೆ ಆಗುತ್ತಿತ್ತು. ಅದೇ ಇಲಾಖೆ ಸಚಿವರು ಉತ್ತರ ಕೊಡುತ್ತಿದ್ದರು. ಆದರೆ ಎರಡು ದಶಕಗಳಿಂದ ಈ ವ್ಯವಸ್ಥೆ ಬದಲಾವಣೆ ಆಗಿದೆ. ಕೇವಲ ರಾಜಕೀಯದ ಚರ್ಚೆ ಆಗುತ್ತಿದೆ ಅಷ್ಟೆ ಎಂದು ಅಧಿವೇಶನ ನಡೆಯುವ ವ್ಯವಸ್ಥೆಗೆ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್​​​ನಲ್ಲಿ ಹೆಚ್​ ವಿಶ್ವನಾಥ್ ಭಾಷಣ

ಲಂಡನ್​ನಲ್ಲಿ ಪ್ರತಿ ವರ್ಷ ಜೂನ್ 5ರಂದು ಪಾರ್ಲಿಮೆಂಟ್ ಶುರುವಾಗುತ್ತದೆ. ಆರಂಭದಲ್ಲೇ ಅಲ್ಲಿ ಬಜೆಟ್ ಮಂಡನೆ ಆಗುತ್ತದೆ. ಜನರು ಅದರ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ನಮ್ಮಲ್ಲಿ ಬಜೆಟ್ ಬಗ್ಗೆ ಸರಿಯಾದ ಚರ್ಚೆ ಆಗುತ್ತಿಲ್ಲ. ಹೀಗಾಗಿ ಬಜೆಟ್ ಬಗ್ಗೆ ಸರಿಯಾಗಿ ಚರ್ಚೆ ಆಗಬೇಕು. ನಮ್ಮ ಚರ್ಚೆ ತೆರಿಗೆದಾರನಿಗೂ ಖುಷಿ ಆಗುವಂತೆ ಇರಬೇಕು ಎಂದು ಪ್ರತಿಪಾದಿಸಿದರು.

ಹಣಕಾಸು ಇಲಾಖೆಯವರು ಮುಖ್ಯಮಂತ್ರಿಗಳಿಗೆ ಸರಿಯಾಗಿ ಟೋಪಿ ಹಾಕಿದ್ದಾರೆ. ನಿಗಮ ಮಂಡಳಿಯಿಂದ 23 ಸಾವಿರ ಕೋಟಿ ಸಂಗ್ರಹ ಮಾಡುತ್ತೇವೆ ಅಂತಾರೆ. ಆದರೆ ಆ ನಿಗಮಗಳೇ ಸರ್ಕಾರದ ಹಣದಲ್ಲಿ ನಡೆಯುತ್ತಿವೆ. ಹೀಗೆ ದಿಕ್ಕು ತಪ್ಪಿಸೋದು ಬೇಡ. ಯಾಕೆ ಎಲ್ಲಾ ಇಲಾಖೆಗಳನ್ನು ಸಿಎಂ ಇಟ್ಟುಕೊಳ್ಳುತ್ತಾರೆ. ಪ್ರಧಾನಿ ಮೋದಿ ಯಾವುದೇ ಖಾತೆ ಇಟ್ಟುಕೊಂಡಿಲ್ಲ. ಹಾಗೇ ಸಿಎಂಗಳು ಖಾತೆ ಇಲ್ಲದೆ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಹೆಚ್ಚು ಖಾತೆ ಇಟ್ಟುಕೊಂಡಿರುವ ಸಿಎಂ ಯಡಿಯೂರಪ್ಪಗೆ ಮೋದಿ ಹೆಸರು ಹೇಳಿ ಟಾಂಗ್ ನೀಡಿದರು.

ದೇವರಾಜ್ ಅರಸು, ವೀರೇಂದ್ರ ಪಾಟೀಲರು ಹಣಕಾಸು ಇಲಾಖೆಯನ್ನು ಬೇರೆಯವರಿಗೆ ಕೊಡುತ್ತಿದ್ದರು. ಕುಮಾರಸ್ವಾಮಿ ಅವರಿಗೆ ಹಣಕಾಸು ಇಲಾಖೆ ಬೇರೆಯವರಿಗೆ ಕೊಡಿ ಅಂದೆ. ಅದಕ್ಕೆ ಅವರು ನಮಗೆ ಸಾಮರ್ಥ್ಯ ಇಲ್ಲವಾ ಅಂತ ನಮ್ಮ ಬಗ್ಗೆ ಮಾತನಾಡಿದರು. ಯಾವುದೇ ಸಿಎಂ ಗಾದರೂ ಸಮಯ ಇರೋದಿಲ್ಲ. ಕೆಲಸದ ಮಧ್ಯೆ ಇಲಾಖೆ ನೋಡೋದು ಕಷ್ಟ. 33 ಇಲಾಖೆಗಳಲ್ಲಿ ಡಿಪಿಆರ್, ಕಾನೂನು ಇಲಾಖೆ, ಹಣಕಾಸು ಇಲಾಖೆ ಅತ್ಯಂತ ಮಹತ್ವದ್ದು. ಉಳಿದ ಇಲಾಖೆಗಳು ಟಚ್ ಅಂಡ್ ಗೋ ಅಷ್ಟೆ. ವಿಪರ್ಯಾಸವೆಂದರೆ ಪ್ರಮುಖ 3 ಇಲಾಖೆಯಲ್ಲಿ 2 ಇಲಾಖೆ ಸಿಎಂ ಬಳಿಯಲ್ಲೇ ಇವೆ. ಸಿಎಂ ಆರ್ಥಿಕ ತಜ್ಞರು ಅಲ್ಲ. ಸಿದ್ದರಾಮಯ್ಯ 14 ಬಜೆಟ್ ಮಂಡಿಸಿರಬಹುದು, ಯಡಿಯೂರಪ್ಪ 8, ಕುಮಾರಸ್ವಾಮಿ 5 ಬಜೆಟ್ ಮಂಡಿಸಿದ್ದಾರೆ. ಆದರೆ ಅವೆಲ್ಲ ಟೇಬಲ್ ಮಾಡಿರೋದಷ್ಟೇ ಎಂದು ಸಿಎಂಗಳಿಂದ ಬಜೆಟ್ ಮಂಡನೆ ಪ್ರವೃತ್ತಿಯನ್ನು ಟೀಕಿಸಿದರು.

ಈ ಬಜೆಟ್ 5 ವರ್ಷ ತೂಗುವಂತೆ ಇರಬೇಕು. ಆದರೆ ಆ ಬಗ್ಗೆ ಚರ್ಚೆಗಳು ಆಗೋದಿಲ್ಲ. ಇಂದು 2.46 ಲಕ್ಷ ಕೋಟಿ ಬಜೆಟ್ ಆಗಿದೆ‌. ಯಾಕೆ ಆಗಿದೆ ಅಂತಾ ಚರ್ಚೆ ಆಗಬೇಕು. ಕೊರೊನಾ ಹಿನ್ನೆಲೆ ಐಟಿ-ಬಿಟಿಗಳು ಇವತ್ತು ಶೇ 40 ಸಂಬಳ ಹಿಡಿದಿದ್ದಾರೆ. ನಮ್ಮ ಸಂಬಳದಲ್ಲಿ ಶೇ 30 ರಷ್ಟನ್ನು ಸಿಎಂ ಹಿಡಿದರು. ಆದರೆ ಅಧಿಕಾರಿಗಳಿಗೆ ಶೇ 100 ಸಂಬಳ ಕೊಟ್ಟರು. ಕೇಂದ್ರ ಸರ್ಕಾರ ಕೂಡಾ ಸಂಬಳ ಕಟ್ ಮಾಡಿತು. ಆದರೆ ನಮ್ಮಲ್ಲಿ ಅಧಿಕಾರಿಗಳಿಗೆ ಪೂರ್ಣ ವೇತನ ಕೊಟ್ಟಿದೆ ಎಂದು ಅಧಿಕಾರಿಗಳು ಸರ್ಕಾರದ ದಾರಿ ತಪ್ಪಿಸುವ ಬಗೆಯನ್ನು ವಿವರಿಸಿದರು.

ಅಧಿಕಾರಿಗಳಿಗಿಲ್ಲದ ವೇತನ ಕಡಿತ ನಮಗೇಕೆ?

ಈ ವೇಳೆ ಮಾತನಾಡಿದ ಜೆಡಿಎಸ್​​​​ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ನಾವು ಚುನಾವಣೆಗೆ ಕೂಡಾ ಖರ್ಚು ಮಾಡಬೇಕು. ಚುನಾವಣೆಯಲ್ಲಿ ಗೆದ್ದು ಬಂದ ನಂತರವೂ ಖರ್ಚು ಮಾಡಬೇಕು. ಪ್ರತಿನಿತ್ಯ ಮನೆ ಬಳಿ ಅನೇಕ ಜನ ಬರುತ್ತಾರೆ. ಶಾಲಾ ಶುಲ್ಕ, ಆಸ್ಪತ್ರೆ ಖರ್ಚು, ಮದುವೆ ಮುಂಜಿ ಇತ್ಯಾದಿಗಳಿಗೆ ಹಣದ ಸಹಾಯ ಕೇಳಿಕೊಂಡು ಜನ ಬರುತ್ತಾರೆ. ನಾವು ಹಣ ಖರ್ಚು ಮಾಡಲೇಬೇಕು. ಚುನಾವಣೆಗೆ ಅಂತಾ ನಾನು ಮಾಡಿರುವ ಸಾಲ ಇನ್ನೂ ತೀರಿಸಿಲ್ಲ. ನಮ್ಮ ವೇತನದಲ್ಲಿ ಯಾಕೆ ಕಡಿತ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಸರ್ಕಾರಿ ಅಧಿಕಾರಿಗಳ, ನೌಕರರ ಸಂಬಳ ಪೂರ್ತಿ ಕೊಡಲಾಗುತ್ತಿದೆ. ಆದರೆ ಪರಿಷತ್ ಸದಸ್ಯರ ವೇತನದಲ್ಲಿ ಮಾತ್ರ 30 ಪರ್ಸೆಂಟ್ ಕಡಿತ ಮಾಡಲಾಗಿದೆ. ನೌಕರರು ಒಮ್ಮೆ ಕೆಲಸಕ್ಕೆ ಸೇರಿದರೆ ನಂತರ ಯಾರಿಗೂ ಖರ್ಚು ಮಾಡಬೇಕಿಲ್ಲ, ಆದರೆ ನಮ್ಮ ಪರಿಸ್ಥಿತಿ ಹಾಗಲ್ಲ ಎಂದು ಬಜೆಟ್ ಚರ್ಚೆ ವೇಳೆ ವೇತನ ಕಡಿತ ವಿಚಾರ ಪ್ರಸ್ತಾಪಿಸಿ ಕೊರೊನಾ ನೆಪದಲ್ಲಿ ನಮ್ಮ ವೇತನಕ್ಕೆ ಕತ್ತರಿ ಹಾಕಲಾಗಿದೆ ಎಂದರು.

ಶಿಕ್ಷಣ ಸಚಿವನಾಗಿ ಸಾಧನೆ ಮಾಡಿದ್ದೇನೆ

ಬಳಿಕ ಮಾತನಾಡಿದ, ಜೆಡಿಎಸ್​​ನ ಮರಿತಿಬ್ಬೇಗೌಡ, ನಿಮ್ಮನ್ನು ಮಂತ್ರಿ ಮಾಡದೇ ತಪ್ಪು ಮಾಡಿಬಿಟ್ಟರು. ಇಷ್ಟೊಂದೆಲ್ಲಾ ತಿಳಿದುಕೊಂಡಿರುವ ನಿಮ್ಮನ್ನು ಮಂತ್ರಿ ಮಾಡದೇ ತಪ್ಪು ಮಾಡಿದ್ದಾರೆ ಎಂದರು. ಇದಕ್ಕೆ‌ ಪ್ರತಿಯಾಗಿ ಉತ್ತರಿಸಿದ ವಿಶ್ವನಾಥ್, ನಾನು ಈಗಾಗಲೇ ಮಂತ್ರಿಯಾಗಿ ಹೆಜ್ಜೆ ಗುರುತು ಉಳಿಸಿದ್ದೇನೆ. ಈ ಹಿಂದೆ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಕಟ್ಟಿಸಿ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಶಾಲಾ ಮಕ್ಕಳಿಗೆ ಬಿಸಿಯೂಟದಂತಹ ಯೋಜನೆ ತಂದಿದ್ದು ನನ್ನ ಕಾಲದಲ್ಲಿಯೇ ಎಂದರು.

ಭಾರತಿ ಶೆಟ್ಟಿಗೆ ಸುಂದರಿ ಎಂದು ಹಾಸ್ಯ ಮಾಡಿದ ವಿಶ್ವನಾಥ್:

ಬಜೆಟ್ ಮೇಲೆ ಚರ್ಚೆ ವೇಳೆ ತಮ್ಮ ಹಳ್ಳಿ ಹಕ್ಕಿ ಪುಸ್ತಕದ ಬಗ್ಗೆ ಪ್ರಸ್ತಾಪ ಮಾಡಿದ ವಿಶ್ವನಾಥ್, ವಿಧಾನಸೌಧ ನಿತ್ಯ ಸುಂದರಿ ಇದ್ದ ಹಾಗೆ. ಇದಕ್ಕೆ ಮಾರು ಹೋಗದವರೇ ಇಲ್ಲ. ಎಷ್ಟೋ ಜನ ಮನೆ ಮಠ ಮಾರಿ ಇಲ್ಲಿ ಬರಲು ಆಗದೆ ಪಿಶಾಚಿಗಳಾಗಿದ್ದಾರೆ ಎಂದರು. ಈ ವೇಳೆ ಸುಂದರನಾ ಅಥವಾ ಸುಂದರಿನಾ ಎಂದು ಭಾರತಿ ಶೆಟ್ಟಿ ಕಾಲೆಳೆದರು. ಇದಕ್ಕೆ ವಿಧಾನಸೌಧ ನಿಮಗಿಂತ ಸುಂದರಿ ಅಲ್ಲ ಬಿಡಿ ಎಂದು ವಿಶ್ವನಾಥ್ ಹಾಸ್ಯ ಚಟಾಕಿ ಹಾರಿಸಿದರು. ವಿಶ್ವನಾಥ್ ಮಾತಿಗೆ ಸದನ ನಗೆಗಡಲಲ್ಲಿ ತೇಲಿತು.

ಇದನ್ನೂ ಓದಿ: ಸಿಡಿ ಹಿಂದೆ ಯಾರಿದ್ದಾರೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ: ಎಸ್.ಟಿ. ಸೋಮಶೇಖರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.