ಬೆಂಗಳೂರು: ಈ ಸರ್ಕಾರ ಬರಲು ಬಾಂಬೆ ಬಾಯ್ಸ್ ಕಾರಣ. ಆದರೆ ಈಗ ಅವರ ಕತೆ ಏನಾಯ್ತು? ಎಂದು ಹೆಚ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪರಿಷತ್ ಸದಸ್ಯ ಆರ್.ಶಂಕರ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಭೆಯಲ್ಲಿ ಆರ್.ಶಂಕರ್ ನೋವು ತೋಡಿಕೊಂಡರು. ರಾಣೆಬೆನ್ನೂರಿನಲ್ಲಿ ಸ್ಪರ್ಧೆಗೆ ಅವಕಾಶ ಕೊಡಲಿಲ್ಲ. ಆರ್.ಶಂಕರ್ಗೆ ಟಿಕೆಟ್ ಕೊಡಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಆರ್.ಶಂಕರ್ ಮನೆಗೆ ಹೋಗಿ ಕರೆದುಕೊಂಡು ಬಂದರು. ಪ್ರತಾಪ್ ಗೌಡ ಪಾಟೀಲ್ ಕಥೆ ಏನಾಯ್ತು?. ಅವರು, ನಾನು ಬೀದಿಗೆ ಬಿದ್ದಿದ್ದೇವೆ. ಈಶ್ವರಪ್ಪ ಯಾಕೆ ಅಸಮಾಧಾನ ಪಡಬೇಕು. ಅವರು ಎಲ್ಲಾ ಅನುಭವಿಸಿರೋರು ಎಂದರು.
ಇದನ್ನೂ ಓದಿ: ಮತ್ತೆ ಸಚಿವ ಸ್ಥಾನ ನೀಡದಿರುವುದು ಬೇಸರ ತಂದಿದೆ: ಕೆ.ಎಸ್.ಈಶ್ವರಪ್ಪ