ETV Bharat / state

ಲೋಕಸಭೆ ಚುನಾವಣೆ: ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್ - ಲೋಕಸಭೆ ಚುನಾವಣೆ

ವಿಧಾನ ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್ ಅವರು ಕಾಂಗ್ರೆಸ್​ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

Lok Sabha elections  H Vishwanath  ಹೆಚ್ ವಿಶ್ವನಾಥ್  ಲೋಕಸಭೆ ಚುನಾವಣೆ  ಕಾಂಗ್ರೆಸ್
ಹೆಚ್. ವಿಶ್ವನಾಥ್
author img

By ETV Bharat Karnataka Team

Published : Jan 5, 2024, 5:37 PM IST

ವಿಧಾನ ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಕಾಂಗ್ರೆಸ್​ನಿಂದ ಕಣಕ್ಕಿಳಿಯುವ ಒಲವು ತೋರಿದ್ದಾರೆ. ಪ್ರೆಸ್ ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ''ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸುತ್ತಿದ್ದೇನೆ. ನಾನು ಟೆಕ್ನಿಕಲಿ ಬಿಜೆಪಿ, ಮೆಂಟಲಿ ಕಾಂಗ್ರೆಸ್ಸಿಗ. ಹಾಗಾಗಿ ಮಾನಸಿಕ ನಿರ್ಧಾರದ ಜೊತೆ ಹೋಗಲು ನಿರ್ಧರಿಸಿದ್ದೇನೆ. ಕಾಂಗ್ರೆಸ್​ನಿಂದಲೇ ಟಿಕೆಟ್ ಬಯಸಿದ್ದೇನೆ. ಕೊಟ್ಟರೆ ಸ್ಪರ್ಧಿಸುವೆ. ಇಲ್ಲದಿದ್ರೆ ಪಕ್ಷಕ್ಕಾಗಿ ಕೆಲಸ ಮಾಡುವೆ. ನನಗೂ ಪಾರ್ಲಿಮೆಂಟ್ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇದೆ. ಬೇರೆ ಬೇರೆ ಇಲಾಖೆಗಳಲ್ಲಿ ಮಂತ್ರಿ ಸ್ಥಾನ ನಿಭಾಯಿಸಿದ್ದೇನೆ. ನಾನು ಮಾಡಿದ ಯೋಜನೆಗಳು ಈಗಲೂ ಮುಂದುವರಿದಿವೆ. ನಾನು ಮಾಡಿದ ಸೇವೆಯನ್ನು ಗುರುತಿಸಿ ಅವಕಾಶ ಕೊಡಿ ಎಂದು ಕೇಳಿದ್ದೇನೆ'' ಎಂದರು.

ಹಿಂದೂ ಕಾರ್ಯಕರ್ತನ ಬಂಧನ ವಿಚಾರ: ಹಿಂದೂ ಕಾರ್ಯಕರ್ತನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, "ವಿವಾದ ಆಗ್ತಾ ಇಲ್ಲ. ವಿವಾದ ಮಾಡಲಾಗುತ್ತಿದೆ. ನನ್ನ ಹೆಸರು, ಫೋಟೋ ಠಾಣೆಯಲ್ಲಿದ್ದರೆ, ಪೊಲೀಸರು ನೋಟಿಸ್ ನೀಡುತ್ತಾರೆ. ನಾಡಿನ ಕಾನೂನು ಗೌರವಿಸಬೇಕಾಗುತ್ತದೆ. ಶ್ರೀಕಾಂತ್ ಪೂಜಾರಿ ಯಾರು? ದೊಡ್ಡ ಸಮಾಜ ಸೇವಕರಾ? ಅವನ ಮೇಲೆ 16 ಕೇಸ್​ಗಳು ಇವೆ. ಕ್ರಿಮಿನಲ್ ಕೇಸ್​ನಲ್ಲಿ ಭಾಗಿಯಾದ ಅವರು ಹಿಂದೂ ಕಾರ್ಯಕರ್ತರಾ'' ಎಂದು ಪ್ರಶ್ನಿಸಿದರು.

''ಕರ ಸೇವಕ ಅಂದರೆ ಏನು ಅರ್ಥ? ದೇವರನ್ನು ನಿರ್ಮಲ ಭಾವದಿಂದ ಪೂಜೆ ಮಾಡುವವನು ಕರ ಸೇವಕ. ಕ್ರಮಿನಲ್ ಹಿನ್ನೆಲೆಯುಳ್ಳವನು ಕರಸೇವಕನಾ? ಒಂದು ಮೂಲೆಯಿಂದ ನೀ ಕಳ್ಳ ಅಂತಾರೆ, ಇನ್ನೊಂದು ಮೂಲೆಯಲ್ಲಿ ಕೂತವನು ನಿನ್ನ ಅಪ್ಪ ಕಳ್ಳ ಅಂತಾರೆ. ಯಾವ ದಿಕ್ಕಿನತ್ತ ರಾಜ್ಯ ರಾಜಕಾರಣ ಹೋಗುತ್ತಿದೆ? ವಿಪಕ್ಷ ವಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ'' ಎಂದು ಕಿಡಿಕಾರಿದರು.

ಮರಗಳ್ಳನ‌ ಪರ ನಿಂತಿದ್ದಾರೆ: ಸಂಸದ ಪತ್ರಾಪ್ ಸಿಂಹ ಸಹೋದರನ ಪರ ಹೆಚ್‌ಡಿಕೆ ಸುದ್ದಿಗೋಷ್ಟಿ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ''ಮರಗಳ್ಳನ‌ ಪರವಾಗಿ ವಕಾಲತ್ತು ವಹಿಸಿದರೆ ಹೇಗೆ? ಎರಡು ಬಾರಿ ಸಿಎಂ ಆದವರು. 156 ಮರ ಕಡಿದು ಪರಿಸರ ನಾಶ ಮಾಡಿದವನ ಪರವಾಗಿ ಮಾತನಾಡುವುದು ಎಷ್ಟು ಸರಿ? ಪರಿಸರ ವಿರೋಧಿ ಪರವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಇದು ಹುಚ್ಚರ ಸಂತೆಯಾಗುತ್ತಿದೆ'' ಎಂದರು.

ಹೆಚ್ಚುವರಿ ಡಿಸಿಎಂ ಸೃಷ್ಟಿ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಅನಾವಶ್ಯಕವಾಗಿ ಈ ವಿಚಾರವನ್ನೇಕೆ ಪ್ರಸ್ತಾಪ ಮಾಡುತ್ತೀರಾ? ಅದು ಹಳೇ ಬೇಡಿಕೆ, ಐದರಿಂದ ಸದ್ಯ ಮೂರಕ್ಕೆ ಬಂದಿದೆ. ಮುಂದೆ ಎರಡಾಗ ಬಹುದು ನೋಡೋಣ.‌ ಆದರೆ, ಅಧಿಕಾರ ಪಕ್ಷದಲ್ಲಿ ಇಂತಹ ಬೇಡಿಕೆ ಬೇಡವಾಗಿತ್ತು. ಜನ ಕೊಟ್ಟಿರುವ ಜವಾಬ್ದಾರಿ ಹಾಗೂ ಆಡಳಿತ ನಡೆಸಲಿ. ಅನಾವಶ್ಯಕ ಬೇಡಿಕೆಗಳು ಈಗ ಥರವಲ್ಲ'' ಎಂದು ಸಲಹೆ ನೀಡಿದರು.

''ರಾಜ್ಯದಲ್ಲಿ ಆಡಳಿತ ಪಕ್ಷವಾಗಿ, ವಿರೋಧ ಪಕ್ಷವಾಗಿ ಕಾರ್ಯವೈಖರಿ ಸರಿ ಇಲ್ಲ. ಇನ್ನೊಂದು ಪಕ್ಷ ಜೆಡಿಎಸ್ ಅದೇ ತರ ಆಗುತ್ತಿದೆ. ಇದು ದುರ್ದೈವ. ಜನತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಪಡೆದ ಸರ್ಕಾರ ಅದರ ಆಡಳಿತದ ವೈಖರಿ, ಅದನ್ನು ಟೀಕೆ ಮಾಡುತ್ತಿರುವ ವಿಪಕ್ಷದ ವೈಖರಿ ಕಾಣುತ್ತಿಲ್ಲ'' ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ನಾವು ಕಾನೂನು ಬಿಟ್ಟು ಏನೂ ಮಾಡಿಲ್ಲ, ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ: ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.