ETV Bharat / state

ಮೈತ್ರಿ ಸರ್ಕಾರ ರಚಿಸಿದ ವೇಳೆ ಕಾಂಗ್ರೆಸ್ ಸರಿಯಾಗಿತ್ತಾ?.. ಮಾಜಿ ಸಿಎಂ ಹೆಚ್‌ಡಿಕೆಗೆ ಹೆಚ್ ಕೆ ಪಾಟೀಲ್ ಪ್ರಶ್ನೆ - ಕುಮಾರಸ್ವಾಮಿ ವಿರುದ್ಧ ಗುಡುಗಿದ ಎಚ್.ಕೆ ಪಾಟೀಲ್

ಈಗ ಕಾಂಗ್ರೆಸ್ ಮೇಲೆ ಬೊಟ್ಟು ಮಾಡಿ ತೋರಿಸುವುದು ಹೆಚ್​ಡಿಕೆಗೆ ಶೋಭೆ ತರೋದಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ಶಾಸಕರ ಸಭೆ ನಡೆಯಲಿದ್ದು, ಈ ವಿಚಾರ ಸೇರಿದಂತೆ ಇನ್ನೂ ಅನೇಕ ವಿಚಾರಗಳನ್ನು ಚರ್ಚಿಸುತ್ತೇವೆ..

ಎಚ್.ಕೆ ಪಾಟೀಲ್
H K Patil
author img

By

Published : Dec 6, 2020, 1:06 PM IST

ಬೆಂಗಳೂರು : ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲ ಪಡೆದು 14 ತಿಂಗಳು ಸಿಎಂ ಆಗಿದ್ದಾಗ ಅವರಿಗೆ ಕಾಂಗ್ರೆಸ್ ಸರಿಯಾಗಿತ್ತಾ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್ ಕೆ ಪಾಟೀಲ್ ಪ್ರಶ್ನಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್ ಕೆ ಪಾಟೀಲ್

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಮುಂಭಾಗ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಈ ಮಾತು ಹೇಳಬೇಕಿತ್ತು. ಆಗ ಯಾಕೆ ಸುಮ್ಮನಿದ್ದರು.

ಈಗ ಕಾಂಗ್ರೆಸ್ ಮೇಲೆ ಬೊಟ್ಟು ಮಾಡಿ ತೋರಿಸುವುದು ಹೆಚ್​ಡಿಕೆಗೆ ಶೋಭೆ ತರೋದಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ಶಾಸಕರ ಸಭೆ ನಡೆಯಲಿದ್ದು, ಈ ವಿಚಾರ ಸೇರಿದಂತೆ ಇನ್ನೂ ಅನೇಕ ವಿಚಾರಗಳನ್ನು ಚರ್ಚಿಸುತ್ತೇವೆ ಎಂದರು.

ಈ ಸುದ್ದಿಯನ್ನು ಓದಿ: 'ಕೈ' ನಂಬಿ ಕೆಟ್ಟೆ, ದೇವೇಗೌಡರ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದೆ: ಹೆಚ್​ಡಿಕೆ ಹೀಗೆ ಹೇಳಿದ್ಯಾಕೆ?

ನಾಳೆಯಿಂದ ಆರಂಭ ಆಗುವ ಅಧಿವೇಶನದಲ್ಲಿ ವಿಪಕ್ಷಗಳ ತಂತ್ರಗಳ ಕುರಿತು ಚರ್ಚಿಸಲಿದ್ದೇವೆ. ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನರ ನೆರವಿಗೆ ಧಾವಿಸಲಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಹಲವು ವರ್ಗಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಸಂಪುಟ ವಿಸ್ತರಣೆ ಗಲಾಟೆಯಲ್ಲಿ ಆಡಳಿತವನ್ನು ಬಿಜೆಪಿ ಸರ್ಕಾರ ಮರೆತಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.