ಬೆಂಗಳೂರು: ಗುಜರಾತ್ ಚುನಾವಣೆಯ ಫಲಿತಾಂಶ ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಬಹಳ ದೊಡ್ಡ ಬೆಂಬಲ ಬರುತ್ತದೆ. ನೈತಿಕ ಬಲದ ಜೊತೆಗೆ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಿದ್ರೆ, ಇಲ್ಲಿ ನಮಗೆ ಜಯ ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ: ಅಶೋಕ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ನಲ್ಲಿ ಬಿಜೆಪಿ ಸ್ಪಷ್ಟವಾಗಿ ಬಹುಮತ ಪಡೆದುಕೊಂಡಿದೆ. ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಿದೆ. ಗುಜರಾತ್ ನಲ್ಲಿ ಕಳೆದ ಬಾರಿಗಿಂತ ಅತಿ ಹೆಚ್ಚು ಸ್ಥಾನ ಪಡೆದುಕೊಂಡಿದೆ. ಎಕ್ಸಿಟ್ ಪೋಲ್ಗಳಲ್ಲಿಯೂ ಇದನ್ನೇ ಹೇಳಲಾಗಿತ್ತು. ಗುಜರಾತ್ನಲ್ಲಿ 7 ನೇ ಬಾರಿ ಗೆಲ್ಲುತ್ತಿದ್ದೇವೆ, ಅದು ಸುಲಭದ ಮಾತಲ್ಲ. ಚೆನ್ನಾಗಿ ಆಡಳಿತ ಮಾಡಿದ್ದಕ್ಕೆ ಗುಜರಾತ್ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ.
ಹಿಮಾಚಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಇದಕ್ಕೆ ಅಡಿಪಾಯ ಹಾಕಿದ್ದು, ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿ. ಅವರ ನಾಯಕತ್ವದಲ್ಲಿ ಒಂದು ಪೀಳಿಗೆ ದಾಟಿದ್ದರೂ ಕೂಡ ಹಳೇ ಮತ್ತು ಹೊಸ ಪೀಳಿಗೆಯ ಜನರು ಮೋದಿಯವರ ಆಡಳಿತವನ್ನ ಒಪ್ಪಿಕೊಂಡಿದ್ದಾರೆ. ದೇಶ ಮುನ್ನಡೆಸುವ ಅವರ ನಾಯಕತ್ವ ಒಪ್ಪಿಕೊಂಡಿದ್ದಾರೆ. ಗುಜರಾತ್, ಗೋವಾ ಸೇರಿದಂತೆ ಹಲವು ಕಡೆ ಬಿಜೆಪಿ ಗೆಲುವು ಕಂಡಿದೆ. ಹಿಮಾಚಲ ಪ್ರದೇಶದಲ್ಲಿ ಕ್ಲೋಸ್ ಫೈಟ್ ಇದೆ. ಅಲ್ಲಿಯೂ ಬಿಜೆಪಿ ಬರುತ್ತೆ ಅನ್ನೋ ವಿಶ್ವಾಸವಿದೆ ಎಂದರು.
ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಹಿನ್ನಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ದೆಹಲಿಯಲ್ಲಿ ಲೋಕಲ್ ಬಾಡಿಯಲ್ಲಿ 15 ವರ್ಷ ಆಡಳಿತ ಮಾಡೋದೇ ದೊಡ್ಡ ಸಾಧನೆ. ಲೋಕಲ್ ಇಷ್ಯೂಗಳು ಬಹಳ ಇರುತ್ತವೆ. ಒಂದೊಂದು ವಾರ್ಡ್ ನಲ್ಲಿ ಒಂದೊಂದು ರೀತಿ ಸಮಸ್ಯೆ ಇರುತ್ತದೆ. ಮತದಾರರ ಸಂಖ್ಯೆ ಸಹ ಕಡಿಮೆ. ಮುನ್ಸಿಪಲ್ ಎಲೆಕ್ಷನ್ ಅನ್ನು ಜನರಲ್ ಎಲೆಕ್ಷನ್ಗೆ ಹೊಲಿಕೆ ಮಾಡಲು ಆಗೋದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪ್ರಭಾವ ಬೀರುವುದಿಲ್ಲ: ಸಿದ್ದರಾಮಯ್ಯ
ಗುಜರಾತ್ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಅವರು ಹಾಗೆಯೇ ಹೇಳಬೇಕು ಅಲ್ವಾ?. ಬೇರೆ ರೀತಿ ಹೇಳಲು ಹೇಗೆ ಸಾಧ್ಯ?. ಪ್ರತಿಪಕ್ಷಗಳು ಹೇಳಿದ್ದು ಯಾವುದು ನಿಜವಾಗಿದೆ?. ಅವರು ಹೇಳಿದ್ದು ಯಾವುದೂ ನಿಜವಾಗಿಲ್ಲ. ಅವರ ಹೇಳಿಕೆಗಳಿಗೆಲ್ಲಾ ತಲೆಕಡೆಸಿಕೊಳ್ಳಬೇಡಿ ಎಂದರು.