ಬೆಂಗಳೂರು : ನಗರದಲ್ಲಿ ಕೊರೊನಾದಿಂದ ಗುಣಮುಖರಾಗಿ ಬಂದ ವ್ಯಕ್ತಿಗೆ ಕುಟುಂಬಸ್ಥರು ಮತ್ತೆ ನೆರೆಹೊರೆಯವರು ಸೇರಿ ಆರತಿ ಬೆಳಗಿ ಸ್ವಾಗತ ಮಾಡಿದರು.
ಕೊರೊನಾ ಅಂದರೆ ಸಾಕು ಜನ ಭಯ ಪಡುವಂತಾಗಿದೆ. ಕೊರೊನಾಗಷ್ಟೇ ಅಲ್ಲ ಕೊರೊನಾ ಬಂದವರನ್ನು ಕಂಡು ಆತಂಕಕ್ಕೆ ಒಳಗಾಗುತ್ತಾರೆ. ಇಂತಹ ಆತಂಕ, ಭಯ ದೂರ ಮಾಡಿ, ಜಾಗೃತಿ ಮೂಡಿಸುವ ಸಲುವಾಗಿ, ಮಹಾಲಕ್ಷ್ಮಿ ಲೇಔಟ್ನ ಮಾರಪ್ಪನ ಪಾಳ್ಯ ವಾರ್ಡ್-44ರ ನಿವಾಸಿಗೆ ಕೊರೊನಾ ವೈರಸ್ ಪಾಸಿಟಿವ್ ಬಂತು. ನಂತರ ರಾಜಾಜಿನಗರ ಇಎಸ್‌ಐ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ನೀಡಿದ ಚಿಕಿತ್ಯೆ ಪಡೆದು ಸಂಪೂರ್ಣ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಕೂಡ ಬಿಡುಗಡೆಯಾದರು.
ಕೊರೊನಾದಿಂದ ಗುಣಮುಖರಾದ ವ್ಯಕ್ತಿಯು ತಮ್ಮ ನಿವಾಸಕ್ಕೆ ಆಗಮಿಸಿದಾಗ, ಕುಟುಂಬಸ್ಥರು ಮತ್ತೆ ನೆರೆಹೊರೆಯವರು ಸೇರಿ ಆರತಿ ಬೆಳಗಿ ಸ್ವಾಗತಿಸಿದರು. ಕೊರೊನಾ ವೈರಸ್ ಬಗ್ಗೆ ಭಯ ಪಡಬೇಡ, ಜಾಗೃತರಾಗಿರಿ. ಮಾಸ್ಕ್ ಧರಿಸಿ ಮನೆಯಿಂದ ಹೊರಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.