ETV Bharat / state

ಯಡಿಯೂರಪ್ಪ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿದ್ದೇನು? - ಕರ್ನಾಟಕ ಆರ್ಥಿಕ ಬೆಳವಣಿಗೆ

ಬೀದರ್​ನ ಬಸವಕಲ್ಯಾಣಕ್ಕೆ 200 ಕೋಟಿ ರೂ., ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ, ಕಲಬುರಗಿ ಜಿಲ್ಲೆಯ ಫಿರೋಜಾಬಾದ್​ನಲ್ಲಿ 500 ಮೆಗಾ ವ್ಯಾಟ್​ ಸಾಮರ್ಥ್ಯದ ಸೌರಶಕ್ತಿ ಪಾರ್ಕ್​​, ಯಾದಗಿರಿ ಕಡೆಚೂರಿನಲ್ಲಿ 1,478 ಕೋಟಿ ರೂ. ವೆಚ್ಚದಲ್ಲಿ ಬಲ್ಕ್​ ಡ್ರಗ್​ ಪಾರ್ಕ್​ ಅನ್ನು ಈ ಬಾರಿ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಬಜೆಟ್​ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಬಂಪರ್
ಬಜೆಟ್​ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಬಂಪರ್
author img

By

Published : Mar 8, 2021, 4:40 PM IST

Updated : Mar 8, 2021, 7:06 PM IST

ಬೆಂಗಳೂರು: ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,500 ಕೋಟಿ ರೂ. ಘೋಷಣೆ ಮಾಡಲಾಗಿದ್ದು, ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3,000 ಕೋಟಿ ರೂ. ಒದಗಿಸಲಾಗಿದೆ. ಕೃಷ್ಣಾ ಭಾಗ್ಯ ಜಲನಿಗಮಕ್ಕೆ 5,600 ಕೋಟಿ ರೂ. ಘೋಷಿಸಲಾಗಿದೆ.

ಮಹದಾಯಿ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ 1,677 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು, ರಾಷ್ಟ್ರೀಯ ಯೋಜನೆ ಎಂದು ಘೋಷಣೆಗೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಬಳ್ಳಾರಿಯ ಆಲದಮಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ, ಬಳ್ಳಾರಿಯ ಕುಡುತಿನಿ ಬೂದಿದಿಬ್ಬ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ಸಂವರ್ಧನ ಕೇಂದ್ರ, ಬೀದರ್​ನ ಬಸವಕಲ್ಯಾಣಕ್ಕೆ 200 ಕೋಟಿ ರೂ., ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ, ಕಲಬುರಗಿ ಜಿಲ್ಲೆಯ ಫಿರೋಜಾಬಾದ್​ನಲ್ಲಿ 500 ಮೆಗಾ ವ್ಯಾಟ್​ ಸಾಮರ್ಥ್ಯದ ಸೌರಶಕ್ತಿ ಪಾರ್ಕ್​​, ಯಾದಗಿರಿ ಕಡೆಚೂರಿನಲ್ಲಿ 1,478 ಕೋಟಿ ರೂ. ವೆಚ್ಚದಲ್ಲಿ ಬಲ್ಕ್​ ಡ್ರಗ್​ ಪಾರ್ಕ್​ ಅನ್ನು ಈ ಬಾರಿ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಇದನ್ನೂ ಓದಿ: ಮೊದಲ‌ ಬಾರಿಗೆ ವಿತ್ತೀಯ ಹೊಣೆಗಾರಿಕೆ ಮಿತಿ ಮೀರಿದ ಬಜೆಟ್: 71,332 ಕೋಟಿ ರೂ. ಸಾಲಕ್ಕೆ‌ ಮೊರೆ!

Last Updated : Mar 8, 2021, 7:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.