ETV Bharat / state

ಕೋ ವರ್ಕಿಂಗ್ ಸ್ಪೇಸ್ ಪರಿಕಲ್ಪನೆ ಬೆಂಬಲಿಸಲು ಬಜೆಟ್​ನಲ್ಲಿ ದೊಡ್ಡ ಯೋಜನೆ: ಸಿಎಂ ಬೊಮ್ಮಾಯಿ

ಕೋ‌ ವರ್ಕಿಂಗ್ ಸ್ಪೇಸ್​ಗೆ ಬಿಹೈವ್ ಎನ್ನುವ ಹೆಸರು ಅತ್ಯಂತ ಸೂಕ್ತ. ಇದನ್ನು ಬೆಂಬಲಿಸಲು ಬಜೆಟ್​ನಲ್ಲಿ ದೊಡ್ಡ ಮಟ್ಟದ ಯೋಜನೆ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

bommai
ಬಸವರಾಜ ಬೊಮ್ಮಾಯಿ
author img

By

Published : Jan 22, 2023, 6:44 AM IST

ಬೆಂಗಳೂರು: "ಕೋ ವರ್ಕಿಂಗ್ ಸ್ಪೇಸ್ ಪರಿಕಲ್ಪನೆಯನ್ನು ಬಜೆಟ್​ನಲ್ಲಿ ದೊಡ್ಡ ಮಟ್ಟದ ಯೋಜನೆಯ ಮೂಲಕ ಪ್ರೋತ್ಸಾಹಿಸುತ್ತೇವೆ. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಈಗಿನ ಯುವಕ, ಯುವತಿಯರ ಬೆಳವಣಿಗೆಯನ್ನು ನಾನು ಬೆಂಬಲಿಸುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಹೆಚ್.ಎಸ್.ಆರ್ ಲೇಔಟ್​ನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ವಿಶ್ವದ ಅತಿ ದೊಡ್ಡ ಖಾಸಗಿ ಕೋ ವರ್ಕಿಂಗ್ ಸ್ಪೇಸ್ ಬಿಹೈವ್ ಉದ್ಘಾಟಿಸಿ ಮಾತನಾಡಿದ ಅವರು, "ನಮ್ಮ ಸ್ಥಳೀಯ ಹುಡುಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಹಳ ದೊಡ್ಡ ಕೋ ವರ್ಕಿಂಗ್ ಸ್ಪೇಸ್ ಪ್ರಾರಂಭಿಸಿದ್ದಾರೆ. ಬಜೆಟ್ ಸಭೆಗಳ ಮಧ್ಯೆಯೂ ಇವರನ್ನು ಪ್ರೋತ್ಸಾಹಿಸಲು ಇಲ್ಲಿಗೆ ಬಂದಿದ್ದೇನೆ. ಕೋ ವರ್ಕ್ ಸ್ಪೇಸ್​ಗಳಿಂದ ಯುವಕರು ಮತ್ತು ಸ್ಟಾರ್ಟಪ್​ಗಳು ಹೆಚ್ಚಿನ ಬಂಡವಾಳ‌ ಇಲ್ಲದೇ ತಮ್ಮ ಕಂಪನಿಯನ್ನು ಪ್ರಾರಂಭಿಸಬಹುದು" ಎಂದು ಹೇಳಿದರು.

ಜನರೇ ಆರ್ಥಿಕತೆ ಸೃಷ್ಟಿಸುತ್ತಾರೆ: "ಹಣ ಆರ್ಥಿಕತೆ ಅಲ್ಲ. ಕಠಿಣ ಕೆಲಸ ಮಾಡುವ ಸಮಾಜದಿಂದ ಆರ್ಥಿಕತೆ ಸೃಷ್ಟಿಯಾಗುತ್ತದೆ. ನಾನು ಈಗಿನ ಯುವಕ, ಯುವತಿಯರ ಬೆಳವಣಿಗೆಯನ್ನು ಬೆಂಬಲಿಸುತ್ತೇನೆ. ನಮ್ಮ ದೇಶದ 46% ಜನಸಂಖ್ಯೆ ಯುವಪಡೆ ಇದೆ. ನಮ್ಮ ಪ್ರಧಾನಿಯವರ ಕನಸಿನಂತೆ ನಮ್ಮ ದೇಶ ಅಭಿವೃದ್ಧಿಯಾಗುತ್ತಿದೆ. ಇಡೀ ವಿಶ್ವದ ಆರ್ಥಿಕ ಬೆಳವಣಿಗೆ ಈಗ ಶೇ 1-2 ರಷ್ಟಿದ್ದರೆ, ಭಾರತದ ಆರ್ಥಿಕತೆ ಶೇ 7 ರಷ್ಟಿದೆ. ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ" ಎಂದರು.

ಇದನ್ನೂ ಓದಿ: ಹೈಫೈ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿದ ಯುವಕರು: 100 ಮಂದಿಗೆ ಉದ್ಯೋಗ ಕೊಟ್ಟ 'ಡಿಸೈನ್ ವಾಲ್ಸ್'

"ನಮ್ಮ ಯುವಕರು ಭಾರತದಲ್ಲಿರುವುದು, ಭಾರತದಲ್ಲಿ ವಿದ್ಯಾಭ್ಯಾಸ ಪಡೆಯುವುದು ಮತ್ತು ಭಾರತದಲ್ಲೇ ಕೆಲಸ ಮಾಡುವುದು ಅತ್ಯಂತ ಮುಖ್ಯ. ಆದರೆ ಅದಕ್ಕಿಂತಲೂ ಮುಖ್ಯವಾದುದೆಂದರೆ ಭಾರತದಲ್ಲೇ ವಾಣಿಜ್ಯೋದ್ಯಮಿ ಆಗುವುದು. ಮುಂದಿನ ಒಂದೆರಡು ದಶಕಗಳಲ್ಲಿ ಇವರು ವಿಶ್ವದಲ್ಲೇ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ. ನಮ್ಮ ಯುವ ಶಕ್ತಿ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಅವರನ್ನೂ‌ ಸೋಲಿಸುವ ಮಟ್ಟಕ್ಕೆ ಬೆಳೆಯಬೇಕು. ನಮ್ಮ ಯುವಕರು ಆಕಾಶದೆತ್ತರಕ್ಕೆ ಬೆಳೆದು ವಿಶ್ವವನ್ನು ಗೆಲ್ಲಬೇಕು" ಎಂದು ಕರೆ ನೀಡಿದರು.

ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲಿ ಒಂದು ದಿನದ ‘‘ಉದ್ಯಮಿಯಾಗು ಉದ್ಯೋಗ ನೀಡು’’ ಕಾರ್ಯಾಗಾರ: ಸಚಿವ ನಿರಾಣಿ

"ಕೋ‌ ವರ್ಕಿಂಗ್ ಸ್ಪೇಸ್​ಗೆ ಬಿಹೈವ್ ಎನ್ನುವ ಹೆಸರು ಅತ್ಯಂತ ಸೂಕ್ತವಾಗಿದೆ. ಬೇರೆ ಬೇರೆ ಹೂಗಳಿಂದ ಮಧು ಸಂಗ್ರಹಿಸಿ ಒಂದೆಡೆ ಜೇನು ಉತ್ಪಾದಿಸುವ ಸ್ಥಳ. ಕಠಿಣ ಪರಿಶ್ರಮದಿಂದ ಜೇನು ತಯಾರಾಗುತ್ತದೆ. ಅದೇ ರೀತಿ ಇಲ್ಲಿ ಸ್ಥಳ‌ ಪಡೆಯುವ ಪ್ರತಿಯೊಬ್ಬರೂ ದುಂಬಿಯಂತೆ ತಮ್ಮ ಜ್ಞಾನವೆಂಬ ಮಧುವನ್ನು‌ ಸಂಗ್ರಹಿಸಿ ಇಲ್ಲಿ ಜೇನನ್ನು ಉತ್ಪಾದಿಸಬೇಕು ಎನ್ನುವುದು ನನ್ನ ಆಸೆ" ಎಂದು ಸಿಎಂ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.