ETV Bharat / state

ಸಾರಿಗೆ ನೌಕರರ ಜೊತೆ ಮಾತುಕತೆಗೆ ಸರ್ಕಾರ ಮುಂದಾಗಲಿ: ಕಾಂಗ್ರೆಸ್ ನಾಯಕರ ಒತ್ತಾಯ - congress leaders forced to govt for implimentation of 6th pay commision

ನಮ್ಮ ರಾಜ್ಯ ಮತ್ತು ನಗರಕ್ಕೆ ಅತೀ ಅವಶ್ಯಕವಾದ ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಲೇಬೇಕು ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.

govt-should-talk-with-transport-employees-says-congress-leaders
ಮಾಜಿ ಡಿಸಿಎಂ ಜಿ ಪರಮೇಶ್ವರ್
author img

By

Published : Apr 8, 2021, 10:12 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಸಾರಿಗೆ ನೌಕರರ ಹೋರಾಟವನ್ನು ಬೆಂಬಲಿಸಿದ್ದು, ಆದಷ್ಟು ಬೇಗ ಸರ್ಕಾರ ಇವರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಜಿ ಡಿಸಿಎಂ ಜಿ.ಪರಮೇಶ್ವರ್ ಟ್ವೀಟ್ ಮಾಡಿದ್ದು, ನಮ್ಮ ರಾಜ್ಯ ಮತ್ತು ನಗರಕ್ಕೆ ಅತೀ ಅವಶ್ಯಕವಾದ ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಲೇಬೇಕು. ಈ ಮುಷ್ಕರದಿಂದ ನಾಗರಿಕರಿಗೂ ಕಷ್ಟ, ನೌಕರರಿಗೂ ಕಷ್ಟ. ಸರ್ಕಾರವು ಈ ಹಿಂದೆ ಕೊಟ್ಟ ವಾಗ್ದಾನದಂತೆ ನಡೆದುಕೊಂಡು ಈ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ.

  • ನಮ್ಮ ರಾಜ್ಯ ಮತ್ತು ನಗರಕ್ಕೆ ಅತೀ ಅವಶ್ಯವಾದ ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಲೇಬೇಕು. ಈ ಮುಷ್ಕರದಿಂದ ನಾಗರಿಕರಿಗೂ ಕಷ್ಟ, ನೌಕರರಿಗೂ ಕಷ್ಟ. ಸರ್ಕಾರವು ಈ ಹಿಂದೆ ಕೊಟ್ಟ ವಾಗ್ದಾನದಂತೆ ನಡೆದುಕೊಂಡು ಈ ಸಮಸ್ಯೆ ಬಗೆಹರಿಸಬೇಕು.

    — Dr. G Parameshwara (@DrParameshwara) April 8, 2021 " class="align-text-top noRightClick twitterSection" data=" ">

ಮಾಜಿ ಸಚಿವ ಡಾ. ಮಹದೇವಪ್ಪ ಟ್ವೀಟ್ ಮಾಡಿದ್ದು, 6ನೇ ವೇತನ ಆಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದ ಸಾರಿಗೆ ನೌಕರರ ಬೇಡಿಕೆಯನ್ನು ಗಾಳಿಗೆ ತೂರಿ ಅವರ ಕಣ್ಣೆದುರೇ ದೇವಾಲಯದ ಅರ್ಚಕರುಗಳಿಗೆ 6ನೇ ವೇತನ ಆಯೋಗದ ಸೌಲಭ್ಯಗಳನ್ನು ಕಲ್ಪಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವು ಖಂಡನೀಯ. ಶ್ರಮಿಕ ವರ್ಗದ ಸಾರಿಗೆ ನೌಕರರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೇ ಅದನ್ನು ಅರ್ಚಕರಿಗೆ ಮಾತ್ರ ನೀಡುವ ಮೂಲಕ ಯುಗಾದಿಯ ಬೆಲ್ಲವನ್ನು ಅರ್ಚಕರಿಗೆ ಮತ್ತು ಬೇವನ್ನು ಸಾರಿಗೆ ನೌಕರರಿಗೆ ನೀಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಹೀನಾಯವಾಗಿ ವರ್ತಿಸುತ್ತಿದೆ ಎಂದಿದ್ದಾರೆ.

  • 6 ನೇ ವೇತನ ಆಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದ ಸಾರಿಗೆ ನೌಕರರ ಬೇಡಿಕೆಯನ್ನು ಗಾಳಿಗೆ ತೂರಿ ಅವರ ಕಣ್ಣೆದುರೇ ದೇವಾಲಯದ ಅರ್ಚಕರುಗಳಿಗೆ 6 ನೇ ವೇತನ ಆಯೋಗದ ಸೌಲಭ್ಯಗಳನ್ನು ಕಲ್ಪಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವು ಖಂಡನೀಯ.

    1/2

    — Dr H.C.Mahadevappa (@CMahadevappa) April 7, 2021 " class="align-text-top noRightClick twitterSection" data=" ">

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಹಲವು ನಾಯಕರು ರಾಜ್ಯ ಸರ್ಕಾರಿ ನೌಕರರ ಸಮಸ್ಯೆ ಪರಿಹರಿಸಲು ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಪಕ್ಷದ ಹಿರಿಯ ನಾಯಕರ ದನಿಯಾಗಿ ಇತರರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ಓದಿ: ಲಾಭವಿಲ್ಲದೆ ಕೋಡಿಹಳ್ಳಿ ಯಾವ ಕೆಲಸವನ್ನೂ ಮಾಡಲ್ಲ: ರೈತ ಮುಖಂಡ ಸುಭಾಷ್ ಐಕೂರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.