ETV Bharat / state

ಕೋವಿಡ್ ವೇಳೆ ಪರೀಕ್ಷೆ ಬರೆಯದೇ ಪಾಸಾದ SSLC, PUC ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ಧನ - ಪ್ರೋತ್ಸಾಹ ಧನ

ಕೋವಿಡ್ ವೇಳೆ ಪರೀಕ್ಷೆ ಬರೆಯದೇ ಪಾಸಾದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಧನ.

ವಿಧಾನಸೌಧ
ವಿಧಾನಸೌಧ
author img

By

Published : Nov 17, 2022, 10:11 PM IST

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯದೆ ಎಸ್​ಎಸ್​ಎಲ್​​ಸಿ ಮತ್ತು ಪಿಯುಸಿ ಪಾಸ್ ಆಗಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.

ಕೋವಿಡ್19 ಸಂದರ್ಭದಲ್ಲಿ ಎಸ್​​ಎಸ್​ಎಲ್​​ಸಿ ಹಾಗೂ ಪಿಯುಸಿ ಪರೀಕ್ಷೆಗೆ ವಿನಾಯ್ತಿ ನೀಡಲಾಗಿತ್ತು. ಹಿಂದಿನ ತರಗತಿಯ ಪರೀಕ್ಷೆಯ ಅಂಕಗಳ ಮಾನದಂಡದಲ್ಲಿ ಪಾಸ್ ಮಾಡಲಾಗಿತ್ತು. ಇಂತಹ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ಧನ ನೀಡೋದಕ್ಕೆ ಇದೀಗ ರಾಜ್ಯ ಸರ್ಕಾರ ನಿರ್ಧರಿಸಿ ಆದೇಶಿಸಿದೆ. ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ ಈ ಮಾಹಿತಿ ಒದಗಿಸಲಾಗಿದೆ.

ಪ್ರೋತ್ಸಾಹ ಧನ ಆದೇಶ ಪ್ರತಿ
ಪ್ರೋತ್ಸಾಹ ಧನ ಆದೇಶ ಪ್ರತಿ

ಆದೇಶದಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್19ರ ವೇಳೆ ಪರೀಕ್ಷೆ ಬರೆಯದೇ ಎಸ್​ಎಸ್​ಎಲ್​​ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಪ್ರೋತ್ಸಾಹ ಧನ ನೀಡಲು ಸೂಚಿಸಲಾಗಿದೆ. ಇನ್ನು ಮೆಟ್ರಿಕ್ ನಂತರದ ಕೋರ್ಸ್​ಗಳಲ್ಲಿ ವಾರ್ಷಿಕ ಪರೀಕ್ಷೆ ಬರೆದು, ಪ್ರಥಮ ದರ್ಜೆ, ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಪ್ರೋತ್ಸಾಹ ಧನ ಮಂಜೂರು ಮಾಡಲು ಆದೇಶಿಸಲಾಗಿದೆ.

(ಓದಿ: ಕನಸಿನ ಶಾಲೆ ನಿರ್ಮಾಣ: ಬಿಬಿಎಂಪಿಯಿಂದ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.