ಆನೇಕಲ್ (ಬೆಂಗಳೂರು): ರೌಡಿಶೀಟರ್ ಸೈಲಂಟ್ ಸುನೀಲ ಬಿಜೆಪಿ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರತ್ಯಕ್ಷವಾಗಿದ್ದು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಆನೇಕಲ್ ಪುರಸಭೆಗೆ ರೌಡಿಶೀಟರ್ ಹಿನ್ನೆಲೆಯ ವ್ಯಕ್ತಿಯನ್ನೇ ನಾಮ ನಿರ್ದೇಶಿತ ಪುರಸಭೆ ಸದಸ್ಯನನ್ನಾಗಿಸಿ ರಾಜ್ಯ ಬಿಜೆಪಿ ಸರ್ಕಾರ ಆದೇಶಿಸಿದೆ.
ಆನೇಕಲ್ ನಿವಾಸಿ ಮಂಜುನಾಥ್ ಅಲಿಯಾಸ್ ಉಪ್ಪಿಯು ಕೊಲೆ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾರೆ. ಆಯ್ಕೆಗೊಳಿಸುವ ಮುನ್ನ ಭರ್ತಿಮಾಡಬೇಕಾದ ಅರ್ಜಿಯಲ್ಲಿ ಸೂಚಿಸಿಲಿರುವ ವ್ಯಕ್ತಿಯ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಕಾಲಂ ಇದೆ. ಆದರೂ ಕೂಡ ಮಂಜುನಾಥ್ನನ್ನು ನಾಮನಿರ್ದೇಶಿತ ಪುರಸಭೆ ಸದಸ್ಯನನ್ನಾಗಿ ಸರ್ಕಾರ ಆದೇಶ ಹೊರಡಿಸಿದೆ.
ಆಯ್ಕೆಗೊಳಿಸಿದ ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಉಪ್ಪಿ ಅಲಿಯಾಸ್ ಮಂಜುನಾಥ್ ತನ್ನ ಫೇಸ್ಬುಕ್ ಪುಟದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿಯವರಿಗೆ ಧನ್ಯವಾದಗಳನ್ನು ತಿಳಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
(ಓದಿ: ರೌಡಿ ಗೂಂಡಾಗಳೆಂದರೆ ಕಾಂಗ್ರೆಸ್ ಪಕ್ಷ .. ಸಚಿವ ಅಶ್ವತ್ಥನಾರಾಯಣ ತಿರುಗೇಟು )
ಮಂಜುನಾಥ್ ಅಲಿಯಾಸ್ ಉಪ್ಪಿ ಮೇಲಿರುವ ಪ್ರಕರಣಗಳ ವಿವರ: ಜಯನಗರದ 9ನೇ ಬ್ಲಾಕ್ ನಿವಾಸಿ ಶ್ರಿಮಂತರ ಮಗ ಕುತ್ಯಾತ ರೌಡಿ ರಾಜ ಕುಟ್ಟಿ ಅಲಿಯಾಸ್ ತಿರುಕುಮಾರನ್ ಶಿಷ್ಯ ಜಿಮ್ಮರ್ ವಿನಯ್ ಆಳ್ವ ಕೊಲೆ ಪ್ರಕರಣ, ರೌಡಿ ನಖರಾ ಬಾಬು ಕೊಲೆ ಸಂಬಂಧ ಮಂಜುನಾಥ್ ವಿರುದ್ಧ ಮಡಿವಾಳ ಠಾಣೆಯಲ್ಲಿ ರೌಡಿಶೀಟರ್ ಪ್ರಕರಣ.
(ಓದಿ: ರೌಡಿ ಶೀಟ್ ಹಾಕಿರೋ ಪೊಲೀಸರೇ ರೌಡಿಗಳಿಗೆ ಈಗ ಸಲ್ಯೂಟ್ ಹೊಡಿಬೇಕಾ?: ಸಿಎಂ ಇಬ್ರಾಹಿಂ)