ಬೆಂಗಳೂರು : ರಾಜ್ಯದ ಮುಸಲ್ಮಾನ್ ಸಮುದಾಯದ ಜನರಿಗೆ ರಾಜ್ಯಪಾಲ ವಜುಭಾಯ್ ವಾಲಾ ಈದ್ ಮಿಲಾದ್ ಉನ್ ನಬಿ ಶುಭ ಕೋರಿದ್ದಾರೆ.
ಪ್ರವಾದಿ ಮೊಹಮದ್ ಅವರ ಜನ್ಮದಿನದ ಈ ಶುಭ ಸಂದರ್ಭದಲ್ಲಿ ನಾನು ಎಲ್ಲಾ ಮುಸ್ಲಿಂ ಬಾಂಧವರಿಗೆ ಈದ್ ಮೀಲಾದ್ ಉನ್ ನಬಿ ಹಬ್ಬಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ, ಪ್ರವಾದಿ ಮೊಹಮ್ಮದ್ ಅವರ ಜೀವನವು ಮಾನವಕುಲದ ಪ್ರೀತಿ, ಸಹೋದರತ್ವ ಮತ್ತು ಮಾನವ ಕುಲದ ಸದ್ಗುಣಗಳ ಸ್ಪೂರ್ತಿದಾಯಕ ಕಥೆಯಾಗಿದೆ.
ನಾವು ನಮ್ಮ ಸಹವರ್ತಿಗಳೊಂದಿಗೆ ನಂಬಿಕೆ, ಕಾಳಜಿ ಮತ್ತು ಸಹಾನುಭೂತಿಯಿಂದ ವರ್ಶಿಸಿದಾಗ ಮಾತ್ರ ಪ್ರವಾದಿಯ ಧ್ಯೇಯವು ನೆರವೇರಲಿದೆ.ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವು ವಿಶ್ವದ ಪ್ರತಿಯೊಬ್ಬರಲ್ಲಿಯೂ ಶಾಂತಿ ಮತ್ತು ಅಭಿಮಾನವನ್ನು ಬೆಳೆಸಲಿ ಎಂದು ರಾಜ್ಯಪಾಲರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.