ETV Bharat / state

ಹೋಲ್ಡಿಂಗ್ಸ್ ಗಳಿಗೆ ಕಡಿವಾಣ ಹಾಕಲು ಹೊಸ ಜಾಹೀರಾತು ನೀತಿ - Assure to fill the vacancy in the Tourism Department

ಪಿಪಿಇ ಮಾದರಿಯಲ್ಲಿ ಖಾಸಗಿ ಕಂಪನಿಗೆ ಹೋಲ್ಡಿಂಗ್ ನೀಡಲಾಗಿದೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು. ಒಂದು ವೇಳೆ ಲೋಪದೋಷ ಕಂಡು ಬಂದ್ರೆ, ಪ್ರಕರಣದ ಬಗ್ಗೆ ಪರಿಶೀಲಿಸುತ್ತೇವೆ..

government-thinking-of-implementing-new-advertising-policy
ವಿಧಾನ ಸಭೆ
author img

By

Published : Dec 8, 2020, 5:28 PM IST

ಬೆಂಗಳೂರು : ನಗರದಲ್ಲಿ ತಲೆ ಎತ್ತುತ್ತಿರುವ ಹೋಲ್ಡಿಂಗ್‌ಗಳಿಗೆ ಕಡಿವಾಣ ಹಾಕುವ ಸಂಬಂಧ ಹೊಸ ಜಾಹೀರಾತು ನೀತಿ ಜಾರಿ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್‍ ಸದಸ್ಯ ಕೃಷ್ಣ ಬೈರೇಗೌಡ ಅವರು ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಮಧ್ಯಪ್ರವೇಶಿದ ವಿಶ್ವನಾಥ್, ಹೊಸ ಜಾಹೀರಾತು ನೀತಿಯನ್ನು ಜಾರಿ ಮಾಡದಿದ್ದರೆ, ಸರ್ಕಾರಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದ್ದು, ಕೆಲವು ನಿಬಂಧನೆಗಳನ್ನು ವಿಧಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಚದರ ಅಡಿಗೆ 360 ರೂ. ನಿರೀಕ್ಷೆ ಮಾಡಬಹುದು. ಪ್ರಸ್ತುತ 61,780 ಚದರ ಅಡಿ ಪ್ರದರ್ಶನ ಫಲಕಗಳಿಂದ ಸರ್ಕಾರಕ್ಕೆ 2.23 ಕೋಟಿ ಆದಾಯ ಬರುತ್ತದೆ ಎಂದರು.

ಮಧ್ಯೆ ಪ್ರವೇಶಿಸಿದ ಕೃಷ್ಣ ಬೈರೇಗೌಡರು, ಬೆಂಗಳೂರಿನ ಹೆಬ್ಬಾಳ ಪ್ಲೈಓವರ್ ಬಳಿ ₹98 ಲಕ್ಷ ಖರ್ಚು ಮಾಡಿರುವ ಖಾಸಗಿ ಕಂಪನಿಗೆ 147 ಹೋಲ್ಡಿಂಗ್ ನೀಡಲಾಗಿದೆ. ಸಾರ್ವಜನಿಕವಾಗಿ ಪ್ಲೈಓವರ್ ಬಳಿ ಖಾಸಗಿ ಕಂಪನಿಯು ಕ್ಲೀನಿಂಗ್ ಮಾಡಿ ₹98 ಲಕ್ಷ ಖರ್ಚು ಮಾಡಿದ್ದಾರೆ. ಅದಕ್ಕೆ ಬದಲಾಗಿ 147 ಹೋಲ್ಡಿಂಗ್ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಪಿಪಿಇ ಮಾದರಿಯಲ್ಲಿ ಖಾಸಗಿ ಕಂಪನಿಗೆ ಹೋಲ್ಡಿಂಗ್ ನೀಡಲಾಗಿದೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು. ಒಂದು ವೇಳೆ ಲೋಪದೋಷ ಕಂಡು ಬಂದ್ರೆ, ಪ್ರಕರಣದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಹುದ್ದೆ ಶೀಘ್ರ ಭರ್ತಿ : ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಇರುವ ಸಿ ಗ್ರೂಪ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು. ಜೆಡಿಎಸ್‍ ಸದಸ್ಯ ಹೆಚ್ ಕೆ ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿ, ಗ್ರೂಪ್ ಸಿ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಗ್ರೂಪ್ ಸಿ ವೃಂದದ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು ಬಾಹ್ಯಮೂಲ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತದೆ ಎಂದರು.

ಓದಿ: ಎರಡು ವರ್ಷದೊಳಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಸಚಿವ ಮಾಧುಸ್ವಾಮಿ

ಪ್ರವಾಸೋದ್ಯಮ ಇಲಾಖೆಯಲ್ಲಿ ಗ್ರೂಪ್ ಎ-15, ಗ್ರೂಪ್ ಬಿ-16, ಗ್ರೂಪ್ ಸಿ-170 ಹಾಗೂ ಗ್ರೂಪ್ ಡಿ-44 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಕೆಲವು ಹುದ್ದೆಗಳನ್ನು ನಿಯೋಜನೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಫಲಗೊಂಡ ವಿದ್ಯುತ್ ಪರಿವರ್ತಕಗಳ ಬದಲಾವಣೆ : ವಿಫಲಗೊಂಡ ವಿದ್ಯುತ್ ಪರಿವರ್ತಕಗಳನ್ನು 72 ಗಂಟೆಗಳ ಒಳಗಾಗಿ ಬದಲಾಯಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಶಾಸಕ ಆರ್ ನರೇಂದ್ರ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಬಿಎಸ್​ವೈ ಪರವಾಗಿ ಉತ್ತರಿಸಿದ ಅವರು, ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಆದರೆ, 72 ಗಂಟೆಗಳೊಳಗಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವಲ್ಲಿ ಹಿಂದೆ ಬೀಳುತ್ತಿಲ್ಲ ಎಂದರು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಾನುಸಾರ ಗ್ರಾಮಾಂತರ ಪ್ರದೇಶಗಳಲ್ಲಿ ರೈತರ ನೀರಾವರಿ ಪಂಪ್‍ಸೆಟ್ ವಿದ್ಯುತ್ ಪರಿವರ್ತಕ ವಿಫಲಗೊಂಡರೆ 72 ಗಂಟೆಗಳ ಒಳಗಾಗಿ ಬದಲಿಸಲಾಗುವುದು.

ವಿಫಲವಾದ ಪರಿವರ್ತಕಗಳ ಬದಲಾವಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೊಳ್ಳೇಗಾಲ ಹಾಗೂ ಹನೂರು ಉಪವಿಭಾಗದ ಮಟ್ಟದಲ್ಲಿ ಪ್ರತ್ಯೇಕ ಪರಿವರ್ತಕ ದುರಸ್ಥಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ನವೆಂಬರ್ ಅಂತ್ಯದ ವೇಳೆಗೆ ಕೊಳ್ಳೆಗಾಲ ವಿಭಾಗೀಯ ಉಗ್ರಾಣದಲ್ಲಿ ವಿವಿಧ ಸಾಮರ್ಥ್ಯದ 56 ಪರಿವರ್ತಕಗಳು ದಾಸ್ತಾನಿವೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಾಮರ್ಥ್ಯದ 218 ಪರಿವರ್ತಕಗಳು ವಿಫಲಗೊಂಡಿದ್ದು, ಈಗಾಗಲೇ ಬದಲಾಯಿಸಲಾಗಿರುತ್ತದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.