ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರಿಗೂ ತಾವು ಶಾಲೆಗೆ ಹೋಗಬೇಕೋ ಬಿಡಬೇಕೋ ಅನ್ನೋ ನಿರ್ಣಯ ತೆಗೆದುಕೊಳ್ಳುವ ಹಕ್ಕು ಕೊಡಲಾಗಿದೆ. ನಮ್ಮ ರಾಜ್ಯದ ಆರ್ ಟಿಇ ಪ್ರಕಾರ 8ನೇ ತರಗತಿ ತನಕ ಶಿಕ್ಷಣ ಕಡ್ಡಾಯವನ್ನಾಗಿ ಮಾಡಿದ್ದೇವೆ. ಅದರ ಮೇಲಿನ ಮಕ್ಕಳು ಶಾಲೆಗೆ ಬರಲೇಬೇಕು ಅಂತೇನೂ ಇಲ್ಲ. ಆದರೆ ಹೊಸ ಆರ್ಟಿಇ ಅಡಿಯಲ್ಲಿ 12ನೇ ತರಗತಿ ತನಕ ಮಕ್ಕಳು ಶಾಲೆಗೆ ಬರಲೇಬೇಕು ಎಂಬ ನಿಯಮವನ್ನ ತರಬೇಕೆಂಬ ಯೋಚನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
8ನೇ ತರಗತಿ ನಂತರದ ಮಕ್ಕಳಿಗೂ ಕಡ್ಡಾಯ ಶಿಕ್ಷಣ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದರು. ನಿನ್ನೆ ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರವಾಗಿ ತೀರ್ಪು ಬಂದಿದ್ದು, ಆ ತೀರ್ಪನ್ನು ನಾವು ಒಪ್ಪಲ್ಲ, ಶಾಲಾ-ಕಾಲೇಜಿಗೆ ಬರೋದಿಲ್ಲ. ಹಿಜಾಬ್ ಧರಿಸಿಯೇ ಬರುವುದಾಗಿ ಕೆಲವು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಮಾತಾನಡಿದ ಸಚಿವರು, ವಿದ್ಯಾರ್ಥಿಗಳ ಹಕ್ಕುಗಳನ್ನ ಕಿತ್ತುಕೊಳ್ಳಲು ಹೋಗಲ್ಲ. ಆದರೆ ನಮ್ಮಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರ್ ವಾಜಪೇಯಿ ಸರ್ವ ಶಿಕ್ಷಣ ಅಭಿಯಾನ ಶುರು ಮಾಡಿ ಎಲ್ಲರಿಗೂ ಶಿಕ್ಷಣ ಕೊಡಬೇಕೆಂಬ ಆಸೆಯನ್ನ ಹೊಂದಿದ್ದರು. ಹಾಗೆ ನರೇಂದ್ರ ಮೋದಿಯವರು ಬೇಟಿ ಬಚಾವೊ, ಬೇಟಿ ಪಡಾವೊ ಆಂದೋಲನ ಮಾಡಿ ಮಕ್ಕಳ ಓದಿಗೆ ಒತ್ತು ಕೊಟ್ಟಿದ್ದಾರೆ ಎಂದರು.
ಆದರೆ ದುರಾದೃಷ್ಟ ಹೈಕೋರ್ಟ್‌ಗೆ ಹೋದವರು ಅವ್ರೇ, ಆದ್ರೆ ಈಗ ತೀರ್ಪನ್ನು ಅವರೇ ಒಪ್ಪುತ್ತಿಲ್ಲ. ಹೈಕೋರ್ಟ್ನ ತೀರ್ಪನ್ನು ಪ್ರತಿಯೊಬ್ಬ ಪ್ರಜೆ ಒಪ್ಪಿಕೊಳ್ಳಬೇಕು. ಆದರೆ ಅವರು ಒಪ್ಪಿಕೊಳ್ಳುತ್ತಿಲ್ಲ. ನಂಗೆ ವಿಶ್ವಾಸ ಇದ್ದು, ಸದ್ಯದ್ರಲ್ಲಿ ಅವರ ಮನವೊಲಿಸಿ ಶಾಲೆಗೆ ಬರುವಂತೆ ಮಾಡ್ತೀವಿ. ಮಕ್ಕಳ ಹಾಜರಾತಿಯು ಉತ್ತಮ ರೀತಿಯಲ್ಲಿ ಇದ್ದು, ಕೆಲವೇ ಮಕ್ಕಳು ಎಸ್ಕೇಪ್ ಆಗಿದ್ದಾರೆ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ: ವಸತಿ ಯೋಜನೆ ಫಲಾನುಭವಿಗಳ ಆದಾಯ ಮಿತಿ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ
ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆ: ಮಾರ್ಚ್ ಅಂತ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿದ್ದು, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಎರಡು ತಿಂಗಳ ಹಿಂದೆಯೇ ಆರಂಭಿಸಿದೆ. ಪರೀಕ್ಷಾ ಮಂಡಳಿ ಅಧಿಕಾರಿಗಳ ಜೊತೆ ಹಲವು ಸುತ್ತಿನ ಸಭೆ ನಡೆಸಿ, ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸೂಚನೆ ನೀಡಿದೆ. ಎಲ್ಲ ಶಾಲೆಯಲ್ಲೂ ಪ್ರಿಪ್ರೇಟರಿ ಪರೀಕ್ಷೆ ನಡೆದಿದ್ದು, ವ್ಯಾಲ್ಯುಯೇಷನ್ ಮಾಡಿದ್ದಾರೆ. ಯಾವ ಮಕ್ಕಳು ಪರೀಕ್ಷೆಯಲ್ಲಿ ಹಿಂದಿದ್ದಾರೋ ಅವ್ರಿಗೆ ತಿಳಿ ಹೇಳುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ಸಚಿವ ನಾಗೇಶ್ ತಿಳಿಸಿದರು.
ನಗರದ ಹಲವು ಖಾಸಗಿ ಶಾಲೆಗಳು ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ಎಕ್ಸಾಂಗೆ ಕೂರಿಸ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಂತಹದು ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದರು.