ಬೆಂಗಳೂರು: ಪ್ರವಾಹದ ಅಬ್ಬರಕ್ಕೆ ರಾಜ್ಯದಲ್ಲಿ ಸಾವಿರಾರು ಮನೆಗಳು ಹಾನಿಗೊಳಗಾಗಿವೆ. ಕೆಲ ಮನೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದರೆ, ಇನ್ನು ಕೆಲ ಮನೆಗಳು ಭಾಗಶಃ ನೆಲಕ್ಕುರುಳಿವೆ. ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಸಾವಿರಾರು ಸಂತ್ರಸ್ತರಿಗೆ ಸರ್ಕಾರ ಪರಿಹಾರವನ್ನು ನೀಡುತ್ತಿದೆ. ಸಂಪೂರ್ಣ ಹಾನಿಯದ ಮನೆಯನ್ನು ಎ ಕೆಟಗರಿ, ಭಾಗಶಃ ಹಾನಿಗೊಳಗದ ಮನೆಗಳನ್ನು ಬಿ ಕೆಟಗರಿ ಹಾಗೂ ಅಲ್ಪಸ್ವಲ್ಪ ಮನೆಗಳನ್ನು ಸಿ ಕೆಟಗರಿ ಎಂದು ಗುರುತಿಸಲಾಗಿದೆ. 31,934 ಮನೆ ಎ ಮತ್ತು ಬಿ ಕೆಟಗರಿ ಮನೆಗಳನ್ನು ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳೆಂದು ಪರಿಗಣಿಸಿ, ಐದು ಲಕ್ಷ ರೂ. ಪರಿಹಾರ ಕೊಡಲು ನಿರ್ಧರಿಸಿದ್ದು, ಇನ್ನು 68,817 ಸಿ ಕೆಟಗರಿ ಮನೆಗಳಿಗೆ ಐವತ್ತು ಸಾವಿರ ರೂ. ಪರಿಹಾರ ಕೊಡಲು ಸರ್ಕಾರ ನಿರ್ಧರಿಸಿದೆ.
ಎ ಕೆಟಗರಿ ಮನೆಗಳಿಗೆ ಪಾವತಿಸಿದ ಪರಿಹಾರ:
ಅಕ್ಟೋಬರ್ ಮೊದಲ ವಾರದಲ್ಲಿನ ಅಂಕಿ ಅಂಶದ ಪ್ರಕಾರ ಒಟ್ಟು 10,002 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ಗುರುತು ಮಾಡಲಾಗಿದೆ.ಈ ಪೈಕಿ 5,162 ಫಲಾನುಭವಿಗಳಿಗೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಅದರೆಂತೆ ಒಟ್ಟು ₹ 49.96 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.
ಬಿ ಕೆಟಗರಿ ಮನೆಗಳಿಗೆ ಪಾವತಿಸಿದ ಪರಿಹಾರ:
ಭಾಗಶಃ ಹಾನಿಗೊಳಗಾದ ಬಿ ಕೆಟಗರಿ ಮನೆಗಳು ಸಂಖ್ಯೆ 26,772.
ಒಟ್ಟು 14,910 ಫಲಾನುಭವಿಗಳಿಗೆ ಪರಿಹಾರ ಹಣ ಪಾವತಿಸಲಾಗಿದೆ. ಅಂದರೆ ಒಟ್ಟು ₹35.66 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಎನ್‌ಡಿಆರ್ ಎಫ್ ಅಡಿ 1,891 ಫಲಾನುಭವಿಗಳಿಗೆ ತಲಾ ₹ 25 ಸಾವಿರ ಪರಿಹಾರ ನೀಡಲಾಗಿದೆ.
ಸಿ ಕೆಟಗರಿ ಮನೆಗಳಿಗೆ ಪಾವತಿಸಿದ ಪರಿಹಾರ:
ಅಕ್ಟೋಬರ್ ಮೊದಲ ವಾರದಲ್ಲಿ ಸುಮಾರು 68,817 ಸಿ ಕೆಟಗರಿ ಮನೆಗಳನ್ನು ಗುರುತಿಸಲಾಗಿದೆ.
ಒಟ್ಟು 23,534 ಪಲಾನುಭವಿಗಳಿಗೆ ಪರಿಹಾರ ಹಣ ಪಾವತಿಸಲಾಗಿದ್ದು, ಒಟ್ಟು ₹ 51.81 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಎನ್ ಡಿಆರ್ ಎಫ್ ಅಡಿ 7,131 ಫಲಾನುಭವಿಗಳಿಗೆ ತಲಾ 25 ಸಾವಿರ ಪರಿಹಾರ ಹಣ ಪಾವತಿಸಲಾಗಿದೆ.
ಇತರ ಮನೆ ಪರಿಹಾರ ವಿತರಣೆ:
ಪ್ರತಿ ಕುಟುಂಬಕ್ಕೆ ನಿರ್ವಹಣಾ ವೆಚ್ಚವಾಗಿ ಸರ್ಕಾರ 10,000 ರೂ. ಪರಿಹಾರ ನೀಡುತ್ತಿದೆ. ಅಕ್ಟೋಬರ್ ಮೊದಲ ವಾರದೊಳಗೆ ಒಟ್ಟು 2,03,633 ಫಲಾನುಭವಿಗಳಿಗೆ ಸುಮಾರು ₹ 203.63 ಕೋಟಿ ಪರಿಹಾರ ಹಣ ಪಾವತಿ ಮಾಡಲಾಗಿದೆ.
ಮನೆ ಕಳಕೊಂಡ ಸಂತ್ರಸ್ತರಿಗೆ 10 ತಿಂಗಳವರೆಗೆ ₹ 5,000 ಬಾಡಿಗೆಯಂತೆ ಸುಮಾರು 3,378 ಫಲಾನುಭವಿಗಳಿಗೆ ಒಟ್ಟು ₹ 1.68 ಕೋಟಿ ಬಾಡಿಗೆ ಹಣ ಪಾವತಿ ಮಾಡಲಾಗಿದೆ.ತಲಾ ₹ 50,000 ನಂತೆ ತಾತ್ಕಾಲಿಕ ಶೆಡ್ ನಿರ್ಮಿಸುತ್ತಿರುವ 1,385 ಫಲಾನುಭವಿಗಳಿಗೆ ಒಟ್ಟು ₹ 6.92 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಒಟ್ಟು ರಾಜ್ಯ ಸರ್ಕಾರ 149.23 ಕೋಟಿ ರೂ ಖರ್ಚು ಮಾಡಿದೆ ಎಂದು ಲೆಕ್ಕ ಕೊಟ್ಟಿದೆ.