ETV Bharat / state

ಅನುಭವ ಮಂಟಪದ ಪುನಶ್ಚೇತನಕ್ಕೆ ಸರ್ಕಾರ ಬದ್ಧ: ಸಿಎಂ ಯಡಿಯೂರಪ್ಪ

ಬಸವ ಸಮಿತಿ ವತಿಯಿಂದ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಮ ಸಮಾಜದ ನಿರ್ಮಾಣದ ಕನಸನ್ನು‌ 12 ನೇ ಶತಮಾನದಲ್ಲಿಯೇ ಬಿತ್ತಿದವರು ಬಸವಣ್ಣ ಎಂದರು. ಕಾಯಕವೇ ಕೈಲಾಸ ಎಂದು‌ ದುಡಿಮೆಯ ಮಹತ್ವ ಮತ್ತು ಶ್ರಮಿಕರ ಮಹತ್ವವನ್ನು, ಶ್ರಮಿಕರ‌ ಶ್ರೇಷ್ಠತೆಯನ್ನು ಸಾರಿದವರು, ಸರಳ ವಚನಗಳ ಮೂಲಕ ಸಮಾನತೆ, ಕಾಯಕ, ದಾಸೋಹದ ಮಹತ್ವ ಸಾರಿದವರು ಎಂದರು.

author img

By

Published : Apr 26, 2020, 12:16 PM IST

anubhav-mantapa
ಅನುಭವ ಮಂಟಪದ ಪುನಶ್ಚೇತನಕ್ಕೆ ಸರ್ಕಾರ ಬದ್ದ

ಬೆಂಗಳೂರು: ಬಸವಣ್ಣನವರ ಅನುಭವ ಮಂಟಪದ‌ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾಗಿದೆ. ಈಗಾಗಲೇ ಬಜೆಟ್​ನಲ್ಲಿ ಇದಕ್ಕೆ ಅನುದಾನ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಬಸವ ಸಮಿತಿ ವತಿಯಿಂದ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸಮ ಸಮಾಜದ ನಿರ್ಮಾಣದ ಕನಸನ್ನು‌ 12 ನೇ ಶತಮಾನದಲ್ಲಿಯೇ ಬಿತ್ತಿದವರು ಬಸವಣ್ಣ. ಕಾಯಕವೇ ಕೈಲಾಸ ಎಂದು‌ ದುಡಿಮೆಯ ಮಹತ್ವ ಮತ್ತು ಶ್ರಮಿಕರ ಮಹತ್ವವನ್ನು, ಶ್ರಮಿಕರ‌ ಶ್ರೇಷ್ಠತೆಯನ್ನು ಸಾರಿದವರು. ಸರಳ ವಚನಗಳ ಮೂಲಕ ಸಮಾನತೆ, ಕಾಯಕ, ದಾಸೋಹದ ಮಹತ್ವ ಸಾರಿದವರು ಎಂದು ಬಣ್ಣಿಸಿದರು.

ಬಸವಣ್ಣ ರಚಿತ ವಚನಗಳಲ್ಲಿನ ತತ್ವ ಸಾರ್ವಕಾಲಕ್ಕೂ ಪ್ರಸ್ತುತ, ಮತ್ತು ಶ್ರೇಷ್ಠವಾದುದು. ಅವರು ಸ್ಥಾಪಿಸಿದ ಅನುಭವ ಮಂಟಪ ಸಂಸದೀಯ ವ್ಯವಸ್ಥೆಯ ಮೂಲ ಎಂದು ಬಣ್ಣಿಸಲಾಗುತ್ತದೆ. ಪುರುಷ, ಮಹಿಳೆ, ಬಡವ ಬಲ್ಲಿದ ಎನ್ನದೇ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ತಮ್ಮ ಅನುಭವ ಹಂಚಿಕೊಳ್ಳಲು‌ ಅವಕಾಶ ನೀಡಿದ್ದರು ಎಂದು ಸಿಎಂ ಸಮಾನತೆಯ ಸಂದೇಶ ಸಾರಿದ್ರು.

ಅನುಭವ ಮಂಟಪದ ಪುನಶ್ಚೇತನಕ್ಕೆ ಸರ್ಕಾರ ಬದ್ಧ: ಸಿಎಂ

ಬಸವ ಜಯಂತಿಯನ್ನು ಇಂದು ಅದ್ಧೂರಿಯಾಗಿ ಆಚರಣೆ ಮಾಡಲು ಆಗುತ್ತಿಲ್ಲ. ಬಸವಣ್ಣನವರು ಸರಳ ವಚನಗಳ ಮೂಲಕ ಕಾಯಕ ತತ್ವ, ದಾಸೋಹ, ಸಮಾನತೆ ತತ್ವಗಳನ್ನು ಜಗತ್ತಿಗೆ ಸಾರಿದರು. ಪ್ರಪಂಚದ ಸಾಹಿತ್ಯಕ್ಕೆ ವಚನ ಸಾಹಿತ್ಯಕ್ಕೆ ಶರಣರ ಕೊಡುಗೆ ಶ್ರೇಷ್ಠವಾದದ್ದು, ಬಸವಣ್ಣನವರ ತತ್ವಗಳನ್ನು ಸ್ವಲ್ಪವಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ಮುಂದೆ ಸಾಗಲು ಸಾಧ್ಯ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.