ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಸರ್ಕಾರದ ಬಳಕೆ ವಾಹನಗಳು ವಿದ್ಯುತ್ ಚಾಲಿತ ಆಗಬೇಕು, ಡಿಪಿಆರ್ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿದ್ಯುತ್ ವಾಹನಗಳ ಪ್ರೋತ್ಸಾಹ ಬಗ್ಗೆ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಗೆ ಅನುಕೂಲವಾಗಲೆಂದು 646 ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದ್ದೇವೆ,ಪ್ರವಾಸಿ ತಾಣಗಳೂ ಸೇರಿದಂತೆ ಹಲವೆಡೆ ಚಾರ್ಜಿಂಗ್ ಸ್ಟೇಶನ್ ಆರಂಭಿಸಲಾಗುತ್ತಿದೆ,ಅದಕ್ಕೆ ಹೆಸ್ಕಾಂ ಸಹಾಯ ಮಾಡುತ್ತದೆ ಖಾಸಗಿಯವರೂ ಚಾರ್ಜಿಂಗ್ ಸ್ಟೇಶನ್ ಗಳನ್ನು ಆರಂಭಿಸಲು ಸಹಕಾರ ಕೊಡುತ್ತೇವೆ ಎಂದರು.
ಕಲಾವಿದರಿಗೆ ಕೇಂದ್ರದ ಮಾಶಾಸನಕ್ಕೆ ಪ್ರಯತ್ನ: 11,830 ಜನ ಕಲಾವಿದರಿಗೆ ರಾಜ್ಯದಲ್ಲಿ ಮಾಸಾಶನ ಕೊಡುತ್ತಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾರ್ಷಿಕವಾಗಿ 27.37 ಕೋಟಿ ರೂ.ಗಳನ್ನು ಕಲಾವಿದರ ಮಾಶಾಸನಕ್ಕಾಗಿ ವ್ಯಯಿಸುತ್ತಿದ್ದೇವೆ, ನಿಯಮಗಳ ತೊಡಕಿನಿಂದ ಹೆಚ್ಚು ಕಲಾವಿದರಿಗೆ ಕೇಂದ್ರ ಸರ್ಕಾರದ ಮಾಶಾಸನ ಪಡೆಯಲು ಆಗುತ್ತಿಲ್ಲ, ಇದರ ಬಗ್ಗೆ ಕೇಂದ್ರ ಸರ್ಕಾರ ಗಮನ ತರುತ್ತೇನೆ ಎಂದರು.
ಇದನ್ನೂ ಓದಿ: ಅಧಿಕಾರಿಗಳಿಂದ ಸರ್ಕಾರಿ ಭೂಮಿ ಕಬಳಿಕೆ: ಶಾಸಕ ಎ.ಟಿ.ರಾಮಸ್ವಾಮಿ ಗಂಭೀರ ಆರೋಪ