ETV Bharat / state

ಕನ್ನಡಕ್ಕೆ ಅವಮಾನ: ಕೊನೆಗೂ ಕ್ಷಮೆ ಯಾಚಿಸಿದ ಗೂಗಲ್ - ಭಾರತದ ಕೊಳಕು ಭಾಷೆ ವಿವಾದ

ಗೂಗಲ್​ನಲ್ಲಿ 'ಭಾರತದ ಕೊಳಕು ಭಾಷೆ' ಯಾವುದು ಎಂದು ಹುಡುಕಿದರೆ 'ಕನ್ನಡ' ಎಂದು ತೋರಿಸುತ್ತಿತ್ತು. ಇದೀಗ ಗೂಗಲ್ ಕನ್ನಡಿಗರ ಕ್ಷಮೆ ಯಾಚಿಸಿದೆ.

google-apologizes-for-hurting-sentiments-of-kannadigas

author img

By

Published : Jun 3, 2021, 9:46 PM IST

Updated : Jun 3, 2021, 9:51 PM IST

ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಗೂಗಲ್ ಟ್ವೀಟ್ ಮಾಡಿದೆ.

ಗೂಗಲ್​ನಲ್ಲಿ 'ಭಾರತದ ಕೊಳಕು ಭಾಷೆ' ಯಾವುದು ಎಂದು ಹುಡುಕಿದರೆ 'ಕನ್ನಡ' ಎಂದು ತೋರಿಸುತ್ತಿತ್ತು. ಇದಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಗೂಗಲ್ ಕನ್ನಡಿಗರ ಕ್ಷಮೆ ಯಾಚಿಸಿದೆ.

debtconsolidationsquad.com ಎಂಬ ವೆಬ್ ಪೇಜ್​ನಲ್ಲಿ ಈ ರೀತಿಯಾಗಿ ಕಾಣಿಸಿಕೊಂಡಿತ್ತು. ಇದಕ್ಕೆ ವಿರೋಧಿಸಿದ ಕನ್ನಡಿಗರು ಪೇಜ್​ ಅನ್ನು ರಿಪೋರ್ಟ್ ಮಾಡಿ. ಗೂಗಲ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.

ತಕ್ಷಣ ಗೂಗಲ್ ಆ ವೆಬ್ ಪೇಜ್ ಅನ್ನು ತೆಗೆದುಹಾಕಿದ್ದು, ಇದೀಗ ಕ್ಷಮೆ ಕೂಡಾ ಯಾಚಿಸಿದೆ. ಗೂಗಲ್​ನ ಈ ಪ್ರಮಾದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ, ಸಂಸದ ಪಿಸಿ ಮೋಹನ್ ಸೇರಿದಂತೆ ಅನೇಕ ರಾಜಕಾರಣಿಗಳು, ನಟ-ನಟಿಯರು, ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು.

ಗೂಗಲ್ ಕಂಪನಿ ವಿರುದ್ಧ ಕ್ರಮಕ್ಕೆ‌ ಆಗ್ರಹಿಸಿ ಕನ್ನಡ ಪರ ಸಂಘಟನೆ ಬೈಯ್ಯಪ್ಪನಹಳ್ಳಿ‌ ಠಾಣೆಯಲ್ಲಿ ದೂರು ಸಹ ನೀಡಿತ್ತು.

('ಕನ್ನಡ ಭಾಷೆ ವಿಶ್ವ ಲಿಪಿಗಳ ರಾಣಿ'.. ಗೂಗಲ್​ ಸರ್ಚ್​ನಲ್ಲಿ ನಂ.1 ಡಿಸ್ಪ್ಲೇ, twitterನಲ್ಲೂ ಟ್ರೆಂಡಿಂಗ್)

Last Updated : Jun 3, 2021, 9:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.