ನವದೆಹಲಿ/ಬೆಂಗಳೂರು: ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಮುಂಬರುವ ಹಬ್ಬದ ಸೀಸನ್‌ನಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ಮತ್ತೆ ಏರಿಕೆಯಾಗಿದೆ. 24 ಕ್ಯಾರೆಟ್‌ನ (10 ಗ್ರಾಂ) ಚಿನ್ನ ₹ 50,360 ರೂ ಕ್ಕೆ ಲಭ್ಯವಿದ್ದರೆ, 22 ಕ್ಯಾರೆಟ್ (10 ಗ್ರಾಂ)ಚಿನ್ನದ ದರ ₹ 46,160 ಹಾಗೂ ಬೆಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ 58,000 ರೂ. ಇದೆ.
ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆಗಳು: ಚಿನ್ನದ ಬೆಲೆಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ ಮತ್ತು ರಾಜ್ಯ ಸರ್ಕಾರವು ವಿಧಿಸುವ ತೆರಿಗೆಗಳು ಮತ್ತು ಸುಂಕಗಳನ್ನು ಅವಲಂಬಿಸಿರುತ್ತದೆ. ದೆಹಲಿಯಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 50,360 ರೂ ಆಗಿದ್ದರೆ, 22 ಕ್ಯಾರೆಟ್ ಚಿನ್ನದ (10 ಗ್ರಾಂ)46,160 ರೂ. ಆಗಿದೆ. ಮುಂಬೈನಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 50,210 ರೂ ಆಗಿದ್ದರೆ, 22 ಕ್ಯಾರೆಟ್ ಚಿನ್ನದ (10 ಗ್ರಾಂ) 46,010 ರೂ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ (10 ಗ್ರಾಂ) 51,010 ರೂ.ಗೆ ಮತ್ತು 22 ಕ್ಯಾರೆಟ್ (10 ಗ್ರಾಂ) 46,760 ರೂ.ಗೆ ಲಭ್ಯವಿದೆ.
ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ:
ನಗರಗಳು | ಚಿನ್ನ(22K)ಗ್ರಾಂ | ಚಿನ್ನ(24K)ಗ್ರಾಂ | ಬೆಳ್ಳಿ ಬೆಲೆ |
ಬೆಂಗಳೂರು | 4,606 ರೂ. | 5,250 ರೂ. | 63.2 ರೂ. |
ದಾವಣಗೆರೆ | 4,645 ರೂ. | 5,020 ರೂ. | 63.2 ರೂ. |
ಮಂಗಳೂರು | 4,655 ರೂ. | 5,078 ರೂ. | 63.20 ರೂ. |
ಹುಬ್ಬಳ್ಳಿ | 4,595 ರೂ. | 5,013 ರೂ. | 58 ರೂ. |
ಮೈಸೂರು | 4,650 ರೂ. | 5,178 ರೂ. | 59.40 ರೂ. |
ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ ನೋಡಿ