ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಆಭರಣಪ್ರಿಯರು ಮತ್ತು ಖರೀದಿದಾರರಿಗೆ ಸ್ವಲ್ಪ ಖುಷಿ ಕೊಡುವ ಸುದ್ದಿ ಇದೆ. ದೇಶದ ಆಭರಣ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಬುಧವಾರ ಇಳಿಕೆ ಕಂಡು ಬಂದಿದೆ. ಇವತ್ತು ಇಳಿಕೆಯಾದ ಬೆಲೆ ಎಷ್ಟು ಮತ್ತು ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಇಂದಿನ ಬೆಲೆ ಏನಿದೆ ಎಂಬ ಮಾಹಿತಿ ಇಲ್ಲಿದೆ.
ದೇಶದಲ್ಲಿ ಮಾರುಕಟ್ಟೆಯಲ್ಲಿ ಚಿನ್ನ ಬೆಲೆ ಬುಧವಾರ ಶೇ.0.38ರಷ್ಟು ಅಂದರೆ ಪ್ರತಿ 10 ಗ್ರಾಂಗೆ 195 ರೂ. ಅಗ್ಗವಾಗಿದೆ. ಇವತ್ತು ತಲಾ 10 ಗ್ರಾಂ ಬಂಗಾರಕ್ಕೆ 50,613 ರೂ. ನಿಗದಿಯಾಗಿದೆ. ಅದೇ ರೀತಿಯಾಗಿ ಬೆಳ್ಳಿ ದರದಲ್ಲೂ ಶೇ.0.27ರಷ್ಟು ಅಂದರೆ ಪ್ರತಿ ಕೆಜಿಗೆ 173 ರೂ. ತಗ್ಗಿದೆ. ಇಂದು ಬೆಳ್ಳಿ 62,876 ರೂ. ನಿಗದಿಯಾಗಿದೆ.
ಕರ್ನಾಟಕದಲ್ಲಿ ಹೇಗಿದೆ?: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು 22 ಕ್ಯಾರೆಟ್ನ 1 ಗ್ರಾಂ ಚಿನ್ನಕ್ಕೆ 4,772 ಹಾಗೂ 24 ಕ್ಯಾರೆಟ್ನ ಚಿನ್ನಕ್ಕೆ 5,116 ರೂ. ಇದೆ. ಹಾಗೆ ಪ್ರತಿ ಕೆಜಿ ಬೆಳ್ಳಿ ದರ 63,100 ರೂ. ಆಗಿದೆ. ಹುಬ್ಬಳ್ಳಿಯಲ್ಲಿ ಚಿನ್ನ (22 ಕ್ಯಾರೆಟ್)- 4,770 ರೂ. ಹಾಗೂ ಚಿನ್ನ (24 ಕ್ಯಾರೆಟ್) 5,204 ರೂ. ಇದ್ದು, ಪ್ರತಿ ಕೆಜಿ ಬೆಳ್ಳಿ 64,000 ರೂ. ಇದೆ.
ಬೆಳಗಾವಿಯಲ್ಲಿ 1 ಗ್ರಾಂ ಚಿನ್ನ (22 ಕ್ಯಾರೆಟ್) 4,780, ಚಿನ್ನ (24 ಕ್ಯಾರೆಟ್) 5,230 ರೂ., 1 ಗ್ರಾಂ ಬೆಳ್ಳಿ ದರ 64.6 ರೂ. ಆಗಿದೆ. ದಾವಣಗೆರೆಯಲ್ಲಿ ಚಿನ್ನ (22 ಕ್ಯಾರೆಟ್) 4,696 ರೂ., ಚಿನ್ನ (24 ಕ್ಯಾರೆಟ್) 5,140 ರೂ. ಹಾಗೂ ಬೆಳ್ಳಿ ದರ 67.08 ರೂ. ಇದೆ.
ಮೈಸೂರಿನಲ್ಲಿ ಚಿನ್ನ (22 ಕ್ಯಾರೆಟ್) 4,750 ರೂ., ಚಿನ್ನ 24 (ಕ್ಯಾರೆಟ್) 5,260 ರೂ. ಹಾಗೂ 1 ಗ್ರಾಂ ಬೆಳ್ಳಿ ದರ 64.50 ಆಗಿದೆ. ಹಾಗೆಯೇ ಶಿವಮೊಗ್ಗದಲ್ಲಿ 24 ಕ್ಯಾರೆಟ್ ಚಿನ್ನ 5,107 ರೂ., 24 ಕ್ಯಾರೆಟ್ ಚಿನ್ನವು 4,750 ರೂ. ಹಾಗೂ ಬೆಳ್ಳಿ ದರ 1 ಗ್ರಾಂಗೆ 64.20 ರೂ. ಇದೆ.
ಇದನ್ನೂ ಓದಿ: ದುಡ್ಡು ಕೊಟ್ಟರೂ ನಿಂಬೆ ಸಿಗುತ್ತಿಲ್ಲ ಸ್ವಾಮಿ..: ಇಂದಿನ ತರಕಾರಿ ದರ ಹೀಗಿದೆ ನೋಡಿ..