ETV Bharat / state

ಕೆಲಸಗಾರ, ಸೆಕ್ಯುರಿಟಿ ಗಾರ್ಡ್ ಕೊಂದು ಮನೆ ದರೋಡೆ.. ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರಿನ ಕೋರಮಂಗಲ ಆರನೇ ಹಂತದ ಮನೆಯಲ್ಲಿದ್ದ ಕೆಲಸಗಾರ ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಂದು ಚಿನ್ನಾಭರಣ, ನಗದು ದೋಚಿ ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ.

ಕೋರಮಂಗಲ
ಕೋರಮಂಗಲ
author img

By

Published : Dec 18, 2022, 8:18 PM IST

Updated : Dec 18, 2022, 8:37 PM IST

ಡಿಸಿಪಿ ಸಿ ಕೆ ಬಾಬಾ ಅವರು ಮಾತನಾಡಿದರು

ಬೆಂಗಳೂರು: ಮನೆಯಲ್ಲಿದ್ದ ಕೆಲಸಗಾರ ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಂದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ಕೋರಮಂಗಲ ಆರನೇ ಹಂತದಲ್ಲಿ ನಡೆದಿದೆ.

ಕಾಂಟ್ರಾಕ್ಟರ್ ಗೋಪಾಲ ರೆಡ್ಡಿ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮನೆ ಕೆಲಸಗಾರ ದಾವಣಗೆರೆ ಮೂಲದ ಕರಿಯಪ್ಪ ಎಂಬಾತನ ಕತ್ತು ಹಿಸುಕಿ ಕೊಲೆಗೈಯಲಾಗಿದ್ದು, ಭದ್ರತಾ ಸಿಬ್ಬಂದಿಯಾಗಿದ್ದ ನೇಪಾಳ ಮೂಲದ ದಿಲ್ ಬಹದ್ದೂರ್ ಶವ ಮನೆಯ ಹಿಂಬದಿಯ ಸಂಪಿನಲ್ಲಿ ಪತ್ತೆಯಾಗಿದೆ.

ಸಂಬಂಧಿಕರ ಮದುವೆಯ ನಿಮಿತ್ತ ಗೋಪಾಲರೆಡ್ಡಿ ಕುಟುಂಬ ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿತ್ತು. ಸಮಯ ನೋಡಿಕೊಂಡು ತಡರಾತ್ರಿ ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಭದ್ರತಾ ಸಿಬ್ಬಂದಿ ದಿಲ್ ಬಹದ್ದೂರ್ ಹಾಗೂ ಕೆಲಸಗಾರನಾಗಿದ್ದ ಕರಿಯಪ್ಪನನ್ನು ಕೊಂದು ಮನೆಯಲ್ಲಿದ್ದ ಐದು ಲಕ್ಷ ನಗದು ಹಾಗೂ ನೂರು ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಕಾರ್ಯ ನಡೆಸಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.

ಓದಿ: ಚಿಕ್ಕಬಳ್ಳಾಪುರ: ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ಬಂದ್ರು.. ವೃದ್ಧ ದಂಪತಿ ಕಟ್ಟಾಕಿ ಚಿನ್ನಾಭರಣ ಲೂಟಿ

Last Updated : Dec 18, 2022, 8:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.