ETV Bharat / state

ಜಾಗತಿಕ ಲಿಂಗಾಯತ ಮಹಾಸಭೆ...ಸಾಗರೋತ್ತರ ಶಾಖೆ ಆರಂಭ

author img

By

Published : Nov 2, 2020, 1:55 PM IST

ಕನ್ನಡ ರಾಜ್ಯೋತ್ಸವದಂದು ಜಾಗತಿಕ ಲಿಂಗಾಯತ ಮಹಾಸಭೆ ಸಾಗರೋತ್ತರ ಶಾಖೆ ಉದ್ಘಾಟನಾ ಸಮಾರಂಭ ನೆರವೇರಿತು. ಸಂಘಟನೆಯು ಬಸವತತ್ತ್ವಕ್ಕೆ ವಿಶ್ವ ಮಾನ್ಯತೆ ದೊರಕಿಸುವ ಉದ್ದೇಶ ಹೊಂದಿದೆ.

Global Lingayath Convention ... Sagarotthara branch opening ceremony
ಜಾಗತಿಕ ಲಿಂಗಾಯತ ಮಹಾಸಭೆ... ಸಾಗರೋತ್ತರ ಶಾಖೆ ಆರಂಭ

ಬೆಂಗಳೂರು: ಜಾಗತಿಕ ಲಿಂಗಾಯತ ಮಹಾಸಭೆ ತನ್ನ ಸಂಘಟನೆಯ ಮೂಲಕ ಬಸವತತ್ತ್ವಕ್ಕೆ ವಿಶ್ವ ಮಾನ್ಯತೆ ದೊರಕಿಸಲು ಪ್ರಯತ್ನಿಸಬೇಕು ಎಂದು ಮಾಜಿ ಗೃಹ ಸಚಿವ, ಹಿರಿಯ ಲಿಂಗಾಯತ ನಾಯಕ ಎಂ. ಬಿ. ಪಾಟೀಲ್ ಹೇಳಿದರು.

Global Lingayath Convention ... Sagarotthara branch opening ceremony
ಸಾಗರೋತ್ತರ ಶಾಖೆ ಆರಂಭ

ಕನ್ನಡ ರಾಜ್ಯೋತ್ಸವದಂದು ಜಾಗತಿಕ ಲಿಂಗಾಯತ ಮಹಾಸಭೆ ಸಾಗರೋತ್ತರ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪಾಟೀಲ್​, ವಿಶ್ವದೆಲ್ಲೆಡೆ ವಿವಿಧ ವೃತ್ತಿಗಳಲ್ಲಿರುವ ಲಿಂಗಾಯತ ಬಾಂಧವರನ್ನು ಒಗ್ಗೂಡಿಸಿ, ಮಹಾಸಭೆಯ ಸದಸ್ಯತ್ವ ನೀಡಿ, ಆ ಮೂಲಕ ಶರಣ ಸಂಸ್ಕೃತಿಯ ಪ್ರಚಾರ ಹಾಗೂ ಪ್ರಸಾರ ಕಾರ್ಯದಲ್ಲಿ ತೊಡಗಬೇಕು.

12 ನೇ ಶತಮಾನದಲ್ಲಿ ಜಗತ್ತಿನಲ್ಲಿ ಪ್ರಥಮ ಬಾರಿಗೆ ಪ್ರಜಾಪ್ರಭುತ್ವ, ಸಮಾನತೆ, ಲಿಂಗತಾರತಮ್ಯ ಹೋಗಲಾಡಿಸುವಿಕೆ ಸೇರಿದಂತೆ ಹಲವು ಆದರ್ಶ ಮಾದರಿಗಳನ್ನು ಬೋಧಿಸಲಾಯಿತು. ಜೊತೆಗೆ ಅವುಗಳ ಆಚರಣೆಯಲ್ಲಿ ತೋರಿಸಿದ ಬಸವಣ್ಣ, ಜಗತ್ತಿಗೆ ಮಾದರಿಯಾಗಬೇಕಿತ್ತು. ಆದರೆ, ನಾವು ಕರ್ನಾಟಕ ಬಿಟ್ಟು ಹೊರಗಡೆ ಈ ತತ್ತ್ವಗಳ ಪ್ರಸಾರ ಮಾಡಲಿಲ್ಲ. ವಿಶ್ವದೆಲ್ಲೆಡೆ ನೆಲೆಸಿರುವ ಲಿಂಗಾಯತ ತತ್ತ್ವ ಅನುಯಾಯಿಗಳು ಆ ಕಾರ್ಯ ಮಾಡಲಿದ್ದಾರೆ ಎಂದು ಹೇಳಿದರು.

ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಪರಂಪರೆ ಬಸವತತ್ವಗಳ ಅನುಷ್ಠಾನಕ್ಕಾಗಿ ನಡೆದುಕೊಂಡ ಬಗೆಯನ್ನು ವಿವರಿಸಿ, ಪ್ರಸಕ್ತ ಕಾಲಘಟ್ಟದಲ್ಲಿ ನಾವು ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಹಿರಿಯ ಸಾಹಿತಿ ವೀರಣ್ಣ ರಾಜೂರ ವಚನ ಸಾಹಿತ್ಯ ಮತ್ತು ಅದರ ಸಂಶೋಧನೆಗೆ ಶ್ರಮಿಸಿದ ಮಹನೀಯರ ಬಗ್ಗೆ ಮಾಹಿತಿ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಶಿವಾನಂದ ಜಾಮದಾರ, ಸಾಗರೋತ್ತರ ಘಟಕಗಳ ಕಾರ್ಯ ವಿಧಾನ ವಿವರಿಸಿ, ನೂತನ ಪದಾಧಿಕಾರಿಗಳ ಹೆಸರು ಘೋಷಿಸಿದರು.

ಆನ್‍ಲೈನ್‍ ನಲ್ಲಿ ಕಳೆದ ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಾಗರೋತ್ತರ ಘಟಕ ಸಂಯೋಜಕ ಪ್ರಕಾಶ ಉಳ್ಳಾಗಡ್ಡಿ ಸೇರಿದಂತೆ ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​​, ಯುಎಇ, ಮಸ್ಕತ್, ಪೊಲೆಂಡ್, ಇಟಲಿ, ಬೆಲ್ಜಿಯಂ ಸೇರಿದಂತೆ ಹಲವು ರಾಷ್ಟ್ರಗಳ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.