ETV Bharat / state

ಹೆಚ್ಚು ಪೋಷಕಾಂಶ ಒದಗಿಸುವ 3 ಹೊಸ ತಳಿ ಬಿಡುಗಡೆ ಮಾಡಿದ ಜಿಕೆವಿಕೆ - g k v k latest news

ಈ ಸಾಲಿನಲ್ಲಿ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ 3 ಹೊಸ ತಳಿಗಳನ್ನು ಬಿಡುಗಡೆ ಮಾಡಿದ್ದು, ಮೇವಿನ ಅಲಸಂದೆ, ಕಾಳಿನ ಅಲಸಂದೆ ಹಾಗೂ ನೆಲಗಡಲೆಯ ವಿಶೇಷತೆಯನ್ನು ತಳಿ ವಿಜ್ಞಾನಿಗಳು ವಿವರಿಸಿದ್ದಾರೆ.

GKVK is Ready to release 3 new breeds that provide more nutrients for cows
ಹಸುಗಳಿಗೆ ಹೆಚ್ಚು ಪೋಷಕಾಂಶ ಒದಗಿಸುವ 3 ಹೊಸ ತಳಿಗಳನ್ನು ಬಿಡುಗಡೆಗೊಳಿಸಿದ ಜಿಕೆವಿಕೆ
author img

By

Published : Nov 10, 2020, 10:08 AM IST

Updated : Nov 11, 2020, 11:52 AM IST

ಬೆಂಗಳೂರು: ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ರೈತರಿಗೆ ಲಾಭ ತಂದು ಕೊಡುವಂತಹ ಹೊಸ ತಳಿಗಳು ಹಾಗೂ ತಂತ್ರಜ್ಞಾನಗಳನ್ನು ಪ್ರತಿವರ್ಷ ಬಿಡುಗಡೆ ಮಾಡುತ್ತದೆ. ಅದರಂತೆ ಈ ಸಾಲಿನಲ್ಲಿ ಮೂರು ಹೊಸ ತಳಿಗಳನ್ನು ಬಿಡುಗಡೆ ಮಾಡಿದ್ದು, ಮೇವಿನ ಅಲಸಂದೆ, ಕಾಳಿನ ಅಲಸಂದೆ ಹಾಗೂ ನೆಲಗಡಲೆಯ ವಿಶೇಷತೆಯನ್ನು ತಳಿ ವಿಜ್ಞಾನಿಗಳು ವಿವರಿಸಿದ್ದಾರೆ.

ಮೇವಿನ ಅಲಸಂದೆ - ಎಂ.ಎಫ್.ಸಿ 90-3:

ಈ ಅಲಸಂದೆ ಗಿಡಗಳಲ್ಲಿ ಹೂವು ಬಿಡುವಷ್ಟರಲ್ಲಿ ಮೇವನ್ನು ಕೊಯ್ದು ಹಸುಗಳಿಗೆ ಹಾಕಬಹುದು. ಈ ಗಿಡದಲ್ಲಿ ಪ್ರೊಟೀನ್ ಅಂಶ ಹೆಚ್ಚಿರುವುದರಿಂದ ಹಸುಗಳಿಗೆ ಉತ್ತಮ ಆಹಾರವಾಗಲಿದೆ. ಈ ತಳಿ 55 ರಿಂದ 60 ದಿನದಲ್ಲಿ ಇಳುವರಿ ಕೊಡಲಿದೆ. ಹಳೆಯ ತಳಿಗಳಿಗಿಂತ ಈ ತಳಿ 15 ರಿಂದ 20 ಶೇಕಡಾದಷ್ಟು ಹೆಚ್ಚು ಹಸಿರು ಮೇವು ಒದಗಿಸುತ್ತದೆ. ಒಂದೇ ಬೆಳೆಯಾಗಿ ಅಥವಾ ಮಿಶ್ರ ತಳಿಯಾಗಿ ಈ ಬೆಳೆ ಬೆಳೆಯಬಹುದು. ಹೆಚ್ಚು ರೆಂಬೆಗಳಿದ್ದು, ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಮಂಡ್ಯ ಹಾಗೂ ಬೆಂಗಳೂರು ವಲಯಗಳಲ್ಲಿ ಬೆಳೆಯಬಹುದಾಗಿದ್ದು, ಮಳೆ ಹೆಚ್ಚಾಗುವ ಕರಾವಳಿ ಹಾಗೂ ಮಲೆನಾಡಿಗೆ ಈ ಬೆಳೆ ಸೂಕ್ತವಲ್ಲ ಎಂದು ಮೇವಿನ ಬೆಳೆ ತಳಿ ವಿಜ್ಞಾನಿ ಎಮ್.ಆರ್ ಕೃಷ್ಣಪ್ಪ ಈಟಿವಿ ಭಾರತ್​ಗೆ ತಿಳಿಸಿದರು‌.

ನೆಲಗಡಲೆ- ಜಿಕೆವಿಕೆ-27:

ಈ ವರ್ಷ ಬಿಡುಗಡೆ ಮಾಡಿರುವ ನೆಲೆಗಡಲೆ ಜಿಕೆವಿಕೆ- 27 ಹೊಸ ತಳಿಯ ವಿಶೇಷವೆಂದರೆ ಒಂದು ಹೆಕ್ಟೇರ್​ಗೆ 37 ರಿಂದ 34 ಕ್ವಿಂಟಾಲ್ ಇಳುವರಿ ಕೊಡುತ್ತದೆ. ಅಲ್ಲದೇ ಎಲೆಚುಕ್ಕೆ, ಎಲೆತುಕ್ಕು ರೋಗ ಬರುವುದಿಲ್ಲ. ಎಲೆ ಕಡುಹಸಿರು ಬಣ್ಣದ್ದಾಗಿದ್ದು, ಇದರ ಇಳುವರಿ ಹೆಚ್ಚಾಗಿರುತ್ತದೆ. ದಪ್ಪವಾದ ಬೀಜ ಇರುತ್ತದೆ. ಎಣ್ಣೆ ಅಂಶ ಈ ಹಿಂದಿನ ತಳಿಗಳಲ್ಲಿ ಶೇ.44 ರಿಂದ 46 ರಷ್ಟಿದ್ದು, ಹೊಸ ತಳಿಯಲ್ಲಿ ಶೇ.50 ರಷ್ಟು ಎಣ್ಣೆ ಅಂಶ ಇರಲಿದೆ. ಇನ್ನೂ 110-115 ದಿನಗಳಲ್ಲಿ ಈ ಬೆಳೆ ಬೆಲೆಯಬಹುದಾಗಿದೆ. ಮುಂಗಾರಿನ ಅವಧಿ ಹಾಗೂ ಡಿಸೆಂಬರ್ - ಜನವರಿಯಲ್ಲಿ ಈ ಬೆಳೆ ಬೆಳೆಯಬಹುದು ಎಂದು ಜಿಕೆವಿಕೆ ಸಂಸ್ಥೆಯ ತಳಿವಿಜ್ಞಾನಿಯಾದ ಡಾ.ಡಿ.ಎಲ್ ಸಾವಿತ್ರಮ್ಮ ತಿಳಿಸಿದರು.

ಕಾಳಿನ ಅಲಸಂದೆ -ಕೆ.ಸಿ-8:

ತಿಳಿಕಂದು ಬಣ್ಣದ ಬೀಜದ ಅಲಸಂದೆ 80 ರಿಂದ 85 ದಿನಕ್ಕೆ ಇಳುವರಿ ಕೊಡಲಿದೆ. ಒಂದು ಹೆಕ್ಟೇರ್​​ಗೆ 13 ರಿಂದ 14 ಕ್ವಿಂಟಾಲ್ ಇಳುವರಿ ಬರಲಿದೆ. ಇದರಲ್ಲಿ ಪ್ರೊಟೀನ್ ಅಂಶ 25 ರಿಂದ 26% ರಷ್ಟಿದ್ದು, ಇದರ ಎಲೆಗಳನ್ನು ಗೊಬ್ಬರವಾಗಿ ಅಥವಾ ಮೇವಾಗಿ ಬಳಸಬಹುದು. ಸಾಮಾನ್ಯವಾಗಿ ಎಲೆಗಳಲ್ಲಿ ಕಂಡು ಬರುವ ಎಲೆತುಕ್ಕುರೋಗ ಇದರಲ್ಲಿ ಬರುವುದಿಲ್ಲ.

Last Updated : Nov 11, 2020, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.