ETV Bharat / state

ಮಂಡ್ಯ ಹಾಲು ಒಕ್ಕೂಟದ ಹಗರಣವನ್ನು ಎಸಿಬಿಗೆ ವಹಿಸುವುದು ಸೂಕ್ತ: ಚಲುವರಾಯಸ್ವಾಮಿ

author img

By

Published : May 29, 2021, 9:51 PM IST

ಮಂಡ್ಯ ಹಾಲು ಒಕ್ಕೂಟದ ಹಗರಣವನ್ನು ಎಸಿಬಿಗೆ ವಹಿಸುವುದು ಸೂಕ್ತ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಚಲುವರಾಯಸ್ವಾಮಿ
ಚಲುವರಾಯಸ್ವಾಮಿ

ಬೆಂಗಳೂರು: ಮಂಡ್ಯ ಹಾಲು ಒಕ್ಕೂಟದ ಮೇಲೆ ನಡೆದ ದಾಳಿಯ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇದ್ದು, ಬೃಹತ್ ಹಗರಣದ ತನಿಖೆ ಎಸಿಬಿ ಮೂಲಕ ಆಗಲಿ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.

ಚಲುವರಾಯಸ್ವಾಮಿ, ಮಾಜಿ ಸಚಿವ

ಮಾಜಿ ಸಚಿವ ನರೇಂದ್ರಸ್ವಾಮಿ ಜೊತೆ ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ಮಾತನಾಡಿ, ನಿನ್ನೆ ಹಾಲು‌ ಒಕ್ಕೂಟದ ಮೇಲೆ ನಡೆದ ದಾಳಿ‌ ನೋಡಿ ಗಾಬರಿಯಾಯಿತು. ಇದು ಸಣ್ಣ ಹಗರಣವಲ್ಲ. ದೊಡ್ಡ ಷಡ್ಯಂತ್ರ. ದೊಡ್ಡ ವ್ಯಕ್ತಿ ಇರಬಹುದು ಎನ್ನಿಸಿತ್ತು. ಸರ್ಕಾರ ಈ ಹಗರಣವನ್ನು ದೊಡ್ಡ ತನಿಖಾ ಸಂಸ್ಥೆಗೆ ವಹಿಸಬೇಕು. ಹಿಂದೆ ಡೈರಿಯಿಂದ ನೇರ‌ ಒಕ್ಕೂಟಕ್ಕೆ ಹಾಲು‌ ಬರುತ್ತಿತ್ತು. ಆದರೆ‌, ಹಾಲಿನ ಗುಣಮಟ್ಟ ಸಂರಕ್ಷಣೆ ದೃಷ್ಟಿಯಿಂದ ಸ್ಥಳೀಯವಾಗಿ ಸಂಗ್ರಹಾಲಯ ನಿರ್ಮಿಸಲಾಗಿದೆ. ಆದರೆ, ಇದೀಗ ಇಲ್ಲೆಲ್ಲ ಅವ್ಯವಹಾರ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಸರ್ಕಾರ ಸಮಸ್ಯೆಯನ್ನು ಮನಗಂಡ ಎಸಿಬಿ ತನಿಖೆಗೆ ವಹಿಸುವುದು ಸೂಕ್ತ ಎಂದರು.

ಮಂಡ್ಯ ಹಾಲು ಒಕ್ಕೂಟದಲ್ಲಿ 20 ಲಕ್ಷ ಲೀಟರ್ ಹಾಲು ‌ಕಳ್ಳತನ ಆಗ್ತಿದೆ. ಮಾಸಿಕ 5 ಕೋಟಿ ಮೊತ್ತದ ಹಗರಣ ಇದಾಗಿದೆ. ಇಲ್ಲಿ ‌ಬೋರ್ಡ್ ಸದಸ್ಯರು, ಒಕ್ಕೂಟದ ಮೂಲಗಳು, ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳ ‌ಕೈವಾಡ‌ ಇರಬಹುದಾ. ವಾರ್ಷಿಕ‌ 60 ಕೋಟಿ ಮೊತ್ತದ ಹಗರಣ ಇದಾಗಿದೆ. ರಾಜ್ಯದ ಉಳಿದ ಒಕ್ಕೂಟದಲ್ಲಿಯೂ ಇಂತಹ ಹಗರಣ ನಡೆಯುತ್ತಿರಬಹುದಾ. ಒಂದು ‌ಕೋಟಿ ರೂ. ಮೊತ್ತದ ಅವ್ಯವಹಾರಕ್ಕೇ ಏನೇನೋ ಪ್ರಯತ್ನ ನಡೆಯುತ್ತದೆ. ಹೀಗಿರುವಾಗ ಈ ಹಗರಣದ ಸಮರ್ಥ ತನಿಖೆ ಆಗಲಿ ಎಂದರು.

ರೈಲುಗಳಿಂದ ರಸಗೊಬ್ಬರ ಅನ್​ಲೋಡ್ ಸಮಯ ಸಂಜೆವರೆಗೆ ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.