ETV Bharat / state

ಆಸ್ತಿ ಅಧಿಕೃತವಿರಲಿ, ಅನಧಿಕೃತವಿರಲಿ ಗುರುತಿನ ಸಂಖ್ಯೆ ನೀಡಿ : ಬಿಬಿಎಂಪಿಗೆ ಹೈಕೋರ್ಟ್ ಆದೇಶ - Justice M Nagaprasanna

ನಗರದ ಮಧುಸೂಧನ್ ಭದ್ರಿ ಎಂಬುವರು ತಮ್ಮ ಆಸ್ತಿಯನ್ನು ಬಿಬಿಎಂಪಿ ಫಾರ್ಮ್ -ಬಿ ರಿಜಿಸ್ಟರ್ ನಲ್ಲಿ ಸೇರಿಸಿರುವುದು ಹೈಕೋರ್ಟ್ ನ ಹಿಂದಿನ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸುವ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಬಿಬಿಎಂಪಿಗೆ ಹೈಕೋರ್ಟ್ ಆದೇಶ
ಬಿಬಿಎಂಪಿಗೆ ಹೈಕೋರ್ಟ್ ಆದೇಶ
author img

By

Published : Nov 25, 2021, 5:25 AM IST

ಬೆಂಗಳೂರು : ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿನ ಪ್ರತಿ ಆಸ್ತಿಗೂ ಆಸ್ತಿ ಗುರುತಿನ ಸಂಖ್ಯೆ (ಪ್ರಾಪರ್ಟಿ ಐಡೆಂಟಿಫಿಕೇಷನ್ ನಂಬರ್-ಪಿಐಡಿ) ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಆಸ್ತಿ ಅಧಿಕೃತವಿರಲಿ ಅಥವಾ ಅನಧಿಕೃತವಿರಲಿ ಪ್ರತಿ ಆಸ್ತಿಗೆ ಪಿಐಡಿ ನಂಬರ್ ಕಡ್ಡಾಯವಾಗಿ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.2020ರ ಸೆಪ್ಟೆಂಬರ್ 1ರಿಂದ ಜಾರಿಯಾಗಿರುವ ತಿದ್ದುಪಡಿ ನಿಯಮಗಳ ಪ್ರಕಾರ ಅಧಿಕೃತ ಆಸ್ತಿಗಳಿಗೆ ಫಾರ್ಮ್ -ಎ ನಲ್ಲಿ ಮತ್ತು ಅನಧಿಕೃತ ಆಸ್ತಿಗಳಿಗೆ ಫಾರ್ಮ್ -ಬಿ ರಿಜಿಸ್ಟರ್ ನಲ್ಲಿ ಆಸ್ತಿ ವಿವರಗಳನ್ನು ನಮೂದಿಸಲು ಬಿಬಿಎಂಬಿ ಅಧಿಕಾರವಿದೆಯಾದರೂ ಎರಡೂ ವರ್ಗದ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಬೇಕು ಎಂದು ಕೋರ್ಟ್ ಹೇಳಿದೆ.

ನಗರದ ಮಧುಸೂಧನ್ ಭದ್ರಿ ಎಂಬುವರು ತಮ್ಮ ಆಸ್ತಿಯನ್ನು ಬಿಬಿಎಂಪಿ ಫಾರ್ಮ್ -ಬಿ ರಿಜಿಸ್ಟರ್ ನಲ್ಲಿ ಸೇರಿಸಿರುವುದು ಹೈಕೋರ್ಟ್ ನ ಹಿಂದಿನ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸುವ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರರ ಆಸ್ತಿ ಅಧಿಕೃತವೋ ಅಥವಾ ಅನಧಿಕೃತವೋ ಎಂಬುದನ್ನು ಚಾಲ್ತಿಯಲ್ಲಿರುವ ನಿಯಮಗಳ ಅನುಸಾರ ನಿರ್ಣಯಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ. ಈ ವೇಳೆ ಪ್ರತಿ ಆಸ್ತಿಗೂ ಪಿಐಡಿ ಸಂಖ್ಯೆ ನೀಡುವಂತೆ ಆದೇಶಿಸಿದೆ.

ಹಿನ್ನೆಲೆ :

2014ರಲ್ಲಿ ಹೈಕೋರ್ಟ್ ಆಸ್ತಿ ತೆರಿಗೆ ನಿಯಮಗಳ ಅನುಸಾರ ಆಸ್ತಿಗಳನ್ನು ಫಾರ್ಮ್ -ಎ ಮತ್ತು ಫಾರ್ಮ್ -ಬಿ ಎಂದು ವರ್ಗೀಕರಿಸುವಂತಿಲ್ಲ ಎಂದಿತ್ತು. ಹಾಗೆಯೇ ಬಿಬಿಎಂಪಿ ಈ ಸಂಬಂಧ ಅಗತ್ಯ ತಿದ್ದುಪಡಿ ಮಾಡಿಕೊಳ್ಳಲು ಸಮ್ಮತಿಸಿತ್ತು. ಅದರಂತೆ ಬಿಬಿಎಂಪಿ 2020ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಫಾರ್ಮ್ -ಎ ಮತ್ತು ಫಾರ್ಮ್ -ಬಿ ಮೂಲಕ ಆಸ್ತಿ ತೆರಿಗೆ ವಿವರ ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.